ವಿಧಾನಸೌಧ 
ರಾಜ್ಯ

ವೈದ್ಯಕೀಯ ಮರಣ ಪ್ರಮಾಣಪತ್ರ ವಿತರಣೆ: ಹೊಸ ನಿಯಮಗಳು ಜಾರಿಗೆ; ರಾಜ್ಯ ಸರ್ಕಾರ ಆದೇಶ

ಆದೇಶದಂತೆ ಇನ್ನು ಮುಂದೆ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳು ತಮ್ಮಲ್ಲಿ ಸಂಭವಿಸುವ ಪ್ರತಿ ಮರಣಕ್ಕೂ ಕಡ್ಡಾಯವಾಗಿ MCCD (ಫಾರ್ಮ್ 4/4A) ನೀಡಬೇಕು.

ಬೆಂಗಳೂರು: ಮರಣ ಪ್ರಮಾಣಪತ್ರ (MCCD) ವಿತರಣಾ ವ್ಯವಸ್ಥೆಯನ್ನು ಪಾರದರ್ಶಕವಾಗಿ ಮತ್ತು ಕ್ರಮಬದ್ಧವಾಗಿ ಅನುಷ್ಠಾನಗೊಳಿಸುವ ಕುರಿತು ಆರೋಗ್ಯ ಇಲಾಖೆ ಹೊಸ ನಿಯಮಗಳನ್ನು ಜಾರಿಗೆ ತಂದಿದ್ದು, ಈ ಕುರಿತು ಸುತ್ತೋಲೆಯನ್ನು ಹೊರಡಿಸಿದೆ.

ಕೇಂದ್ರ ಸರ್ಕಾರದ ಅಧಿಸೂಚನೆಯಂತೆ, ಕರ್ನಾಟಕದಲ್ಲಿ ನೋಂದಣಿ ಮತ್ತು ಜನನ ಮತ್ತು ಮರಣ (ತಿದ್ದುಪಡಿ) ನಿಯಮಗಳು, 2024 ಅನ್ನು ದಿ: ಜನವರಿ 16, 2025 ರಿಂದ ಜಾರಿಗೆ ತರಲಾಗುತ್ತಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಹೇಳಿದ್ದಾರೆ.

ಪ್ರಸ್ತುತ ದೃಢೀಕರಿಸಿರುವ 26.73% ಮರಣ ಪ್ರಮಾಣದ ನೋಂದಣಿಯ ವ್ಯಾಪ್ತಿಯನ್ನು ಹೆಚ್ಚಿಸುವುದು.ಈ ನೆಲದ ಯಾವುದೇ ನಾಗರಿಕರ ಸಹಜ ಅಥವಾ ಅಸಹಜ ಸಾವಾದರೂ ಅದನ್ನು ವೈದ್ಯಕೀಯ ಇಲಾಖೆಯ ನಿಯಮದನ್ವಯ ನೋಂದಣಿಯಲ್ಲಿ ಬಿಟ್ಟುಹೋಗದಂತೆ ದಾಖಲೆಗೆ ಸೇರಿಸುವ ಗುರಿ ಹೊಂದಲಾಗಿದ ಎಂದು ತಿಳಿಸಿದ್ದಾರೆ.

  • ಆದೇಶದಂತೆ ಇನ್ನು ಮುಂದೆ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳು ತಮ್ಮಲ್ಲಿ ಸಂಭವಿಸುವ ಪ್ರತಿ ಮರಣಕ್ಕೂ ಕಡ್ಡಾಯವಾಗಿ MCCD (ಫಾರ್ಮ್ 4/4A) ನೀಡಬೇಕು.

  • MCCD ಅನ್ನು eJanMa ಮೂಲಕ ಸ್ಥಳೀಯ ರಿಜಿಸ್ಟರ್‌ಗೆ ಎಲೆಕ್ಟ್ರಾನಿಕ್ ರೂಪದಲ್ಲಿ ಸಲ್ಲಿಸಬೇಕು.

  • ಮರಣ ಸಂಭವಿಸಿದ 10 ದಿನಗಳ ಒಳಗೆ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು.

  • ಯಾವುದೇ ಮರಣಗಳು ಸಂಭವಿಸದಿದ್ದರೂ ಸಹ ('ಶೂನ್ಯ ವರದಿ'/Nil Report) ಮಾಸಿಕ ವರದಿಯನ್ನು ಕಡ್ಡಾಯವಾಗಿ ಸಲ್ಲಿಸಬೇಕೆಂದು ಸುತ್ತೋಲೆಯಲ್ಲಿ ಸೂಚನೆ ನೀಡಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ವಂದೇ ಮಾತರಂ 150ನೇ ವಾರ್ಷಿಕೋತ್ಸವ: ಲೋಕಸಭೆಯಲ್ಲಿಂದು ಚರ್ಚೆ, ಎಲ್ಲರ ಚಿತ್ತ ಪ್ರಧಾನಿ ಮೋದಿಯತ್ತ

ಬೆಳಗಾವಿ ಚಳಿಗಾಲ ಅಧಿವೇಶನ: ಸರ್ಕಾರ-ವಿಪಕ್ಷಗಳ ನಡುವೆ ಜಟಾಪಟಿ ಸಾಧ್ಯತೆ; ನಾಡದ್ರೋಹಿ MES ಮತ್ತೆ ಕ್ಯಾತೆ, 'ಮಹಾ ಮೇಳವ' ಸಮಾವೇಶಕ್ಕೆ ಮುಂದು..!

'ಮುಖ್ಯಮಂತ್ರಿಗಳೇ ಗಮನ ಕೊಡಿ': ಬಸ್ ಇಲ್ಲ.. ನಿತ್ಯ ಶಾಲೆಗೆ ಕಾಡಿನಲ್ಲಿ 14 ಕಿ.ಮೀ ನಡೆದೇ ಸಾಗುವ ವಿದ್ಯಾರ್ಥಿಗಳು!

Goa Nightclub Tragedy: ನಾಲ್ವರ ಬಂಧನ, ಮೂವರು ಅಧಿಕಾರಿಗಳು ಅಮಾನತು

Nashik: 600 ಅಡಿ ಆಳದ ಕಂದಕಕ್ಕೆ ಕಾರು ಉರುಳಿ 6 ಮಂದಿ ಸಾವು, ಪ್ರಧಾನಿ ಮೋದಿ ಸಂತಾಪ, Video

SCROLL FOR NEXT