ಕೇಂದ್ರ ಬಜೆಟ್ 2026: ಯುವ ಜನತೆಗೆ ಅವಕಾಶಗಳ ಹೆಬ್ಬಾಗಿಲು- ಪ್ರಧಾನಿ ನರೇಂದ್ರ ಮೋದಿ

ಬಜೆಟ್ ಅವಕಾಶಗಳ ಹೆಬ್ಬಾಗಿಲು ಆಗಿದೆ ಎಂದು ಕೊಂಡಿಡಿದ್ದಾರೆ. ಇಂದಿನ ಬಜೆಟ್ ಐತಿಹಾಸಿಕವಾಗಿದೆ. ಇದು 140 ಕೋಟಿ ಭಾರತೀಯರ ಆಶೋತ್ತರಗಳನ್ನು ಪ್ರತಿಬಿಂಬಿಸಲಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
PM Modi
ಪ್ರಧಾನಿ ನರೇಂದ್ರ ಮೋದಿ
Updated on

ನವದೆಹಲಿ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಭಾನುವಾರ ಮಂಡಿಸಿದ 2026-27ನೇ ಸಾಲಿನ ಬಜೆಟ್ ನ್ನು ಐತಿಹಾಸಿಕ ಎಂದು ಬಣ್ಣಿಸಿರುವ ಪ್ರಧಾನಿ ನರೇಂದ್ರ ಮೋದಿ, ಇದು ದೇಶದ 140 ಕೋಟಿ ಜನರ ಆಶೋತ್ತರಗಳನ್ನು ಪ್ರತಿಬಿಂಬಿಸುತ್ತದೆ ಮತ್ತು ಸುಧಾರಣೆಯ ಹಾದಿಯನ್ನು ಬಲಪಡಿಸಲಿದ್ದು, ವಿಕಸಿತ ಭಾರತ ಸಂಕಲ್ಪದ ಸ್ಪಷ್ಟ ರೋಡ್ ಮ್ಯಾಪ್ ಆಗಿದೆ ಎಂದಿದ್ದಾರೆ.

ಬಜೆಟ್ ಮಂಡನೆ ನಂತರ ಪ್ರತಿಕ್ರಿಯಿಸಿರುವ ಪ್ರಧಾನಿ ಮೋದಿ, ಬಜೆಟ್ ಅವಕಾಶಗಳ ಹೆಬ್ಬಾಗಿಲು ಆಗಿದೆ ಎಂದು ಕೊಂಡಿಡಿದ್ದಾರೆ. ಇಂದಿನ ಬಜೆಟ್ ಐತಿಹಾಸಿಕವಾಗಿದೆ. ಇದು 140 ಕೋಟಿ ಭಾರತೀಯರ ಆಶೋತ್ತರಗಳನ್ನು ಪ್ರತಿಬಿಂಬಿಸಲಿದೆ. ಸುಧಾರಣೆಯ ಹಾದಿಯನ್ನು ಮತ್ತಷ್ಟು ಬಲಪಡಿಸಲಿದ್ದು, ವಿಕಸಿತ ಭಾರತದ ಸ್ಪಷ್ಟ ಮಾರ್ಗವಾಗಿದೆ ಎಂದು ಹೇಳಿದ್ದಾರೆ.

ದೇಶದ ಸ್ತ್ರೀ ಶಕ್ತಿಯ ಬಲವನ್ನು ಬಜೆಟ್ ಪ್ರತಿಬಿಂಬಿಸುತ್ತದೆ. ಸೀತಾರಾಮನ್ ಸತತ ಒಂಬತ್ತನೇ ಬಾರಿಗೆ ದೇಶದ ಬಜೆಟ್ ಮಂಡಿಸುವ ಮೂಲಕ ಹೊಸ ದಾಖಲೆಯನ್ನು ನಿರ್ಮಿಸಿದ್ದಾರೆ. ಮೇಕ್ ಇನ್ ಇಂಡಿಯಾ' ಮತ್ತು 'ಆತ್ಮನಿರ್ಭರ್ ಭಾರತ್' ಉಪಕ್ರಮಗಳಿಗೆ ಹೊಸ ವೇಗವನ್ನು ನೀಡಲು ಈ ವರ್ಷದ ಬಜೆಟ್ ಮಹತ್ವಾಕಾಂಕ್ಷೆಯ ಮಾರ್ಗಸೂಚಿಯನ್ನು ನೀಡುತ್ತದೆ ಎಂದು ಪ್ರಧಾನಿ ತಿಳಿಸಿದ್ದಾರೆ.

"ಈ ಬಜೆಟ್ 2047 ರೊಳಗೆ ವಿಕಸಿತ ಭಾರತದ ನಮ್ಮ ಪ್ರಯಾಣಕ್ಕೆ ಅಡಿಪಾಯವಾಗಿದೆ. ಈ ವರ್ಷದ ಬಜೆಟ್ ಭಾರತದ ಸುಧಾರಣೆಗೆ ಹೊಸ ಶಕ್ತಿ ಮತ್ತು ಹೊಸ ವೇಗವನ್ನು ನೀಡುತ್ತದೆ. ಭಾರತ ಕೇವಲ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ಎಂಬುದಕ್ಕೆ ತೃಪ್ತಿ ಹೊಂದಿಲ್ಲ ಮತ್ತು ಬಜೆಟ್ ಭಾರತದ ಉಜ್ವಲ ಭವಿಷ್ಯದ ಅಡಿಪಾಯವನ್ನು ಬಲಪಡಿಸುತ್ತದೆ ಎಂದು ಪ್ರಧಾನಿ ಹೇಳಿದರು.

ಈ ಬಜೆಟ್ ಜಾಗತಿಕ ಮಟ್ಟದಲ್ಲಿ ಭಾರತದ ಪಾತ್ರವನ್ನು ಮತ್ತಷ್ಟು ಬಲಪಡಿಸುತ್ತದೆ. ಕೇವಲ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಿಂದ 1.4 ಬಿಲಿಯನ್ ದೇಶದ ಜನರು ತೃಪ್ತಿಹೊಂದಿಲ್ಲ. ನಾನು ಶೀಘ್ರದಲ್ಲೇ ಜಗತ್ತಿನಲ್ಲಿಯೇ ಮೂರನೇ ಅತಿದೊಡ್ಡ ಆರ್ಥಿಕತೆಯ ರಾಷ್ಟ್ರವಾಗಲಿದ್ದೇವೆ. ಇದು ಕೋಟ್ಯಂತರ ದೇಶವಾಸಿಗಳ ಸಂಕಲ್ಪವಾಗಿದೆ ಎಂದು ಅವರು ಹೇಳಿದರು.

PM Modi
ಕೇಂದ್ರ ಬಜೆಟ್ 2026: ಹಣಕಾಸು ಶಿಸ್ತು, ನಿರಂತರ ಬೆಳವಣಿಗೆಯೇ ನಮ್ಮ ಗುರಿ; ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್

ಈ ಬಜೆಟ್ ವಿಶ್ವಾಸ ಆಧಾರಿತ ಆಡಳಿತ ಮತ್ತು ಮಾನವ ಕೇಂದ್ರಿತ ಆರ್ಥಿಕ ಚೌಕಟ್ಟಿನ ದೃಷ್ಟಿಯನ್ನು ಒಳಗೊಂಡಿದೆ. ವಿತ್ತೀಯ ಕೊರತೆಯನ್ನು ಕಡಿಮೆ ಮಾಡಲು ಮತ್ತು ಹಣದುಬ್ಬರವನ್ನು ಒಳಗೊಂಡಿರುವ ಮತ್ತು ದೃಢವಾದ ಆರ್ಥಿಕ ಬೆಳವಣಿಗೆಯೊಂದಿಗೆ ಹೆಚ್ಚಿನ ಬಂಡವಾಳ ವೆಚ್ಚವನ್ನು ಸಮತೋಲನಗೊಳಿಸುವ ವಿಶಿಷ್ಟ ಬಜೆಟ್ ಆಗಿದೆ. ಈ ವರ್ಷದ ಬಜೆಟ್‌ನಲ್ಲಿ MSME ಗಳಿಗೆ ನೀಡಲಾಗಿರುವ ಪ್ರೋತ್ಸಾಹದಿಂದ ಜಾಗತಿಕವಾಗಿ ಬೆಳೆಯಲು ಹೊಸ ಶಕ್ತಿಯನ್ನು ನೀಡುತ್ತದೆ ಪ್ರಧಾನಿ ಮೋದಿ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com