ಗಿರ್ ಹಸು (ಸಂಗ್ರಹ ಚಿತ್ರ) online desk
ರಾಜ್ಯ

ಬೆಂಗಳೂರಿನಲ್ಲಿ ಗೋಕಳ್ಳತನ ಹೆಚ್ಚಳ: ಲಕ್ಷಾಂತರ ರೂಪಾಯಿ ಮೌಲ್ಯದ ಹಸುಗಳ ಕದ್ದೊಯ್ದು ಕತ್ತು ಕೊಯ್ದ ದುರುಳರು!

ಎರಡು ದಿನಗಳ ಹಿಂದೆ ಶೆಡ್​​ನಲ್ಲಿದ್ದ ನಾಲ್ಕು ಗಿರ್ ಹಸುಗಳ ಕಳ್ಳತನವಾಗಿದೆ. ಈ ಕಳ್ಳತನದ ವೇಳೆ ಒಂದು ಹಸು ಗಲಾಟೆ ಮಾಡಿದ್ದು, ಹಸುವಿನ ಕತ್ತು ಕೊಯ್ಯಲಾಗಿದೆ.

ಬೆಂಗಳೂರು: ಬೆಂಗಳೂರಿನಲ್ಲಿ ಗೋಕಳ್ಳತನ ನಡೆದಿರುವುದು ವರದಿಯಾಗಿದೆ. ಲಕ್ಷಾಂತರ ರೂಪಾಯಿ ಬೆಲೆ ಬಾಳುವ 3 ಗಿರ್ ಹಸುಗಳನ್ನು ಕಳ್ಳತನ ಮಾಡಲಾಗಿದ್ದು, ತಪ್ಪಿಸಿಕೊಳ್ಳಲು ಯತ್ನಿಸಿದ ಮತ್ತೊಂದು ಹಸುವಿನ ಕತ್ತು ಕೊಯ್ದು ದುರುಳರು ವಿಕೃತಿ ಮೆರೆದಿರುವ ಘಟನೆ ನೆಲಮಂಗಲ ತಾಲೂಕಿನ ದಾಸನಪುರ ಹೋಬಳಿ ಗೌಡಹಳ್ಳಿ ಗ್ರಾಮನದಲ್ಲಿ ನಡೆದಿದೆ.

ಪವಾಡಸದೃಶವಾಗಿ ದಾಳಿಗೆ ಒಳಗಾದ ಹಸು ದುರುಳರಿಂದ ತಪ್ಪಿಸಿಕೊಂಡು ಬಂದಿದೆ. ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗೌಡಹಳ್ಳಿ ಗ್ರಾಮದ ವಿಜಯಲಕ್ಷ್ಮಿ ಎಂಬುವವರ ಕುಟುಂಬದವರು ಹೈನುಗಾರಿಕೆ ಮಾಡುವ ಉದ್ದೇಶದಿಂದ 2 ವರ್ಷಗಳ ಹಿಂದೆ ಗುಜರಾತ್​​ನಿಂದ ನಾಲ್ಕು ಗಿರ್ ಹಸುಗಳನ್ನು ತರಿಸಿದ್ದರು.

ಎರಡು ದಿನಗಳ ಹಿಂದೆ ಶೆಡ್​​ನಲ್ಲಿದ್ದ ನಾಲ್ಕು ಗಿರ್ ಹಸುಗಳ ಕಳ್ಳತನವಾಗಿದೆ. ಈ ಕಳ್ಳತನದ ವೇಳೆ ಒಂದು ಹಸು ಗಲಾಟೆ ಮಾಡಿದ್ದು, ಹಸುವಿನ ಕತ್ತು ಕೊಯ್ಯಲಾಗಿದೆ. ಆ ಹಸು ದುಷ್ಟರಿಂದ ತಪ್ಪಿಸಿಕೊಂಡು ಓಡಿ ಬಂದಿದೆ. ಬಳಿಕ ಮಾಲೀಕರು ಬಾಕಿ ಹಸುಗಳಿಗಾಗಿ ಹುಡುಕಾಡಿದ್ದು, ಎಲ್ಲಿಯೂ ಪತ್ತೆಯಾಗದ ಹಿನ್ನಲೆ ಮಾದನಾಯಕನ ಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ನೆಲಮಂಗಲ ಭಾಗದಲ್ಲಿ ಹಸುಗಳ ಕಳ್ಳತನ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಂದಿಗ್ರಾಮದಲ್ಲಿ 1.22 ಲಕ್ಷ ಮತ, ಅಸ್ಸಾಂನಲ್ಲಿ BJPಗೆ ಗೆಲುವು; 2 ಕ್ಷೇತ್ರ ಗೆದ್ದ TVK: ಕಾಂಗ್ರೆಸ್, ದೀದಿಗೆ ಮುಖಭಂಗ!

ಉಪಚುನಾವಣೆಯಲ್ಲಿ ಗೆಲುವು, ಜನರೊಂದಿಗೆ NDA ಆಳವಾದ ನಂಟಿನ ಪ್ರತೀಕ: ಪ್ರಧಾನಿ ಮೋದಿ

ಮತಗಳ್ಳತನವೇ ಆಗಿದ್ದರೆ ಕೇರಳ Congress CM, ತಮಿಳುನಾಡು CM ಕೂಡ ಮತಗಳ್ಳರೇ: ಚೇತನ್ ಅಹಿಂಸಾ

'ಅಸಹ್ಯ, ಅತಿರೇಕ'.. 'ನಿಮ್ಮನ್ನು ಈರೀತಿ ನೋಡಲು ಇಚ್ಛಿಸುವುದಿಲ್ಲ, BiggBoss ಶೋ ಬಿಟ್ಟು ಹೊರಬನ್ನಿ'; Kichcha Sudeepಗೆ ಪತ್ರ

'ಆಶ್ರಮಕ್ಕೆ ಬರಲು ಹಣ ಪಡೆದ ಕೊಹ್ಲಿ' ಆರೋಪ: Falahari Maharaj ಯೂ-ಟರ್ನ್, ಕ್ಷಮೆಯಾಚನೆ! video