ಬಿ.ಜಿ ಕೋಲ್ಸೆ ಪಾಟೀಲ್ 
ರಾಜ್ಯ

ಬೀದರ್: 'ಹಿಂದೂ' ಎನ್ನುವುದು ಧರ್ಮವೇ ಅಲ್ಲ, ಅದೊಂದು ಕೆಟ್ಟ ಬೈಗುಳ; ನಿವೃತ್ತ ನ್ಯಾಯಮೂರ್ತಿ

ಹಿಂದೂ ಎನ್ನುವುದು ಧರ್ಮವೇ ಅಲ್ಲ. ಅದು ಪರ್ಷಿಯನ್ ಭಾಷೆಯಲ್ಲಿ ಕೆಟ್ಟ ಬೈಗುಳ ಎಂದು ಹಿಂದೂ ಧರ್ಮದ ಬಗ್ಗೆ ಮುಂಬೈ ನಿವೃತ ಹೈಕೋರ್ಟ್ ನ್ಯಾಯಮೂರ್ತಿ ಬಿ.ಜಿ ಕೋಲ್ಸೆ ಪಾಟೀಲ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಬೀದರ್: ಹಿಂದೂ ಎನ್ನುವುದು ಧರ್ಮವೇ ಅಲ್ಲ. ಅದು ಪರ್ಷಿಯನ್ ಭಾಷೆಯಲ್ಲಿ ಕೆಟ್ಟ ಬೈಗುಳ ಎಂದು ಹಿಂದೂ (Hindu) ಧರ್ಮದ ಬಗ್ಗೆ ಮುಂಬೈ ನಿವೃತ ಹೈಕೋರ್ಟ್ ನ್ಯಾಯಮೂರ್ತಿ ಬಿ.ಜಿ ಕೋಲ್ಸೆ ಪಾಟೀಲ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್, ಬೀದರ್ ನ ಬಸವಕಲ್ಯಾಣದಲ್ಲಿ ಆಯೋಜಿಸಿದ್ದ ಸೂಫಿ ಸಂತರ ಸಮಾವೇಶದಲ್ಲಿ ಮಾತನಾಡಿದ ಕೋಲ್ಸೆ, ರಾಷ್ಟ್ರೀಯ ಸ್ವಯಂಸೇವಾ ಸಂಘ (RSS) ಟೀಕಿಸುವ ಭರದಲ್ಲಿ ಹಿಂದೂ ಧರ್ಮವನ್ನು ಟೀಕಿಸಿದ್ದಾರೆ.

ಹಿಂದೂ ಅಂದರೆ ಪರ್ಷಿಯನ್ ಭಾಷೆಯಲ್ಲಿ ಬೈಗುಳ. ಹಿಂದೂ ಧರ್ಮವೇ ಇಲ್ಲ. ಬ್ರಾಹ್ಮಣರು ಅವರ ಬುದ್ಧಿಯಿಂದ ನಮ್ಮನ್ನು ಗುಲಾಮರನ್ನಾಗಿಸಿ, ಹಿಂದೂ ಧರ್ಮವನ್ನು ಸೃಷ್ಟಿಸಿದರು. ಸೂಫಿ ಸಂತರು, ಮೌಲ್ವಿಗಳು ಕಾರ್ಯಗಾರಗಳನ್ನು ನಡೆಸಿ ಈ ಇತಿಹಾಸವನ್ನು ಹೇಳಬೇಕು ಎಂದರು. ದೇಶದಲ್ಲಿನ ಎಲ್ಲಾ ದಂಗೆಗಳಿಗೆ RSS ಕಾರಣ, ಸಿಖ್‌ರ ದಂಗೆಗೂ ಆರ್‌ಎಸ್‌ಎಸ್‌ ಕಾರಣ. ಅವರ ವಿರುದ್ಧ ಮಾತನಾಡಲು ಅನೇಕರು ಭಯಪಡುತ್ತಾರೆ. RSS ಹಾಗೂ ಬ್ರಾಹ್ಮಣರ ವಿರುದ್ಧ ಮಾತನಾಡಲು ಭಯಪಡಬೇಡಿ. ದೇಶದಲ್ಲಿ ಅವರು ಕೇವಲ ಒಂದು ಪರ್ಸೆಂಟ್ ಮಾತ್ರ ಇದ್ದಾರೆ. ಬ್ರಾಹ್ಮಣರು ಪುಕ್ಕಲರು ಎಂದು ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬಾಂಗ್ಲಾದಲ್ಲಿ 'ಪ್ರಜಾಪ್ರಭುತ್ವ ಗಡಿಪಾರು'; ಚುನಾವಣೆ ಮುಕ್ತವಾಗಿರುವುದಿಲ್ಲ: ಯೂನಸ್ ವಿರುದ್ಧ ಮಾಜಿ ಪ್ರಧಾನಿ ಹಸೀನಾ ವಾಗ್ದಾಳಿ

IND vs NZ 2nd T20: ಭಾರತಕ್ಕೆ 7 ವಿಕೆಟ್‌ ಗೆಲುವು

ಬ್ಯಾನರ್ ಗಲಾಟೆ ಮಾಸುವ ಮುನ್ನವೇ ಜನಾರ್ದನ ರೆಡ್ಡಿಗೆ ಸೇರಿದ ಮಾಡೆಲ್‌ ಹೌಸ್‌ಗೆ ಬೆಂಕಿ; ಕಾಂಗ್ರೆಸ್ ಕೃತ್ಯ ಎಂದು ಕಿಡಿ!

'ವಿಬಿ ಜಿ ರಾಮ್ ಜಿ' ಕಾಯ್ದೆ ಜಾರಿ ಬಗ್ಗೆ NDA ಮಿತ್ರ ಪಕ್ಷ ಆತಂಕ: ರಾಜಕೀಯವಾಗಿ ಮಹತ್ವದ್ದು ಎಂದ ಸಿದ್ದರಾಮಯ್ಯ!

ಮಹಾರಾಷ್ಟ್ರ ರಾಜಕಾರಣದಲ್ಲಿ ಟ್ವಿಸ್ಟ್ ಮೇಲೆ ಟ್ವಿಸ್ಟ್! BMC ಯಲ್ಲಿ ಬದ್ಧವೈರಿಗಳು ಒಂದಾಗುವ ಸಾಧ್ಯತೆ?

SCROLL FOR NEXT