ಬಸವರಾಜ ಹೊರಟ್ಟಿ 
ರಾಜ್ಯ

ಹೊರಟ್ಟಿ ವಿರುದ್ಧ ಭ್ರಷ್ಟಾಚಾರ ಆರೋಪ: ಯಾದವ್ ಹೇಳಿಕೆ ಬಗ್ಗೆ ತನಿಖೆಗೆ ಒತ್ತಾಯಿಸಲು ಒಗ್ಗಟ್ಟಾದ ಪರಿಷತ್ ಸದಸ್ಯರು!

ಪರಿಷತ್ ಸಚಿವಾಲಯದಲ್ಲಿ ಇತ್ತೀಚೆಗೆ 30 ಸಿಬ್ಬಂದಿಗಳ ನೇಮಕಾತಿಯಲ್ಲಿ ಭ್ರಷ್ಟಾಚಾರ ನಡೆದಿದ್ದು, ಇದರಲ್ಲಿ ಹೊರಟ್ಟಿ ಭಾಗಿಯಾಗಿದ್ದಾರೆ ಎಂದು ಕಾಂಗ್ರೆಸ್ ಸದಸ್ಯರು ಆರೋಪಿಸಿದ್ದರು.

ಬೆಳಗಾವಿ: ವಿಧಾನ ಪರಿಷತ್ ಸಭಾಧ್ಯಕ್ಷ ಬಸವರಾಜ ಹೊರಟ್ಟಿ ಅವರ ವಿರುದ್ಧ ಕಾಂಗ್ರೆಸ್ ಶಾಸಕ ನಾಗರಾಜ್ ಯಾದವ್ ಅವರು ಮಾಡಿರುವ ಭ್ರಷ್ಟಾಚಾರ ಆರೋಪಗಳಿಗೆ ಪಕ್ಷಾತೀತವಾಗಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ವಿಧಾನ ಪರಿಷತ್ ಸದಸ್ಯರು, ಸಭಾಧ್ಯಕ್ಷರ ವಿರುದ್ಧ ನೀಡಿರುವ ಆಕ್ಷೇಪಾರ್ಹ ಹೇಳಿಕೆಗಳ ಕುರಿತು ತನಿಖೆ ನಡೆಸಲು ಉಪಾಧ್ಯಕ್ಷ ಎಂ.ಕೆ. ಪ್ರಾಣೇಶ್ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲು ಸರ್ವಾನುಮತದಿಂದ ಒಪ್ಪಿಕೊಂಡರು.

ಚಳಿಗಾಲದ ಅಧಿವೇಶನ ಪ್ರಾರಂಭವಾಗುವ ಮುನ್ನ, ಪರಿಷತ್ ಸಚಿವಾಲಯದಲ್ಲಿ ಇತ್ತೀಚೆಗೆ 30 ಸಿಬ್ಬಂದಿಗಳ ನೇಮಕಾತಿಯಲ್ಲಿ ಭ್ರಷ್ಟಾಚಾರ ನಡೆದಿದ್ದು, ಇದರಲ್ಲಿ ಹೊರಟ್ಟಿ ಭಾಗಿಯಾಗಿದ್ದಾರೆ ಎಂದು ಕಾಂಗ್ರೆಸ್ ಸದಸ್ಯರು ಆರೋಪಿಸಿದ್ದರು. ಅಲ್ಲದೆ ಅವರು ಪಕ್ಷಪಾತಿಯಾಗಿದ್ದು, ಬಿಜೆಪಿ ಪರವಾಗಿದ್ದಾರೆ ಮತ್ತು ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ನಾಗರಾಜ್ ಯಾದವ್ ಆರೋಪಿಸಿದ್ದರು. ಈ ಆರೋಪಗಳನ್ನು ಹೊರಟ್ಟಿ ಸ್ಪಷ್ಟವಾಗಿ ತಳ್ಳಿಹಾಕಿದ್ದಾರೆ.

ಬುಧವಾರ, ಜೆಡಿಎಸ್ ಎಂಎಲ್ಸಿ ಎಸ್ಎಲ್ ಭೋಜೇಗೌಡ ಅವರು ಈ ವಿಷಯವನ್ನು ಪ್ರಸ್ತಾಪಿಸಿ, ಯಾದವ್ ಅವರ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದರು ಮತ್ತು ಸಭಾಧ್ಯಕ್ಷರಿಗೆ ಅಗೌರವ ತೋರಿಸಿದ್ದಾರೆ ಎಂದಿದ್ದರು.

ಸಭಾಧ್ಯಕ್ಷರ ವಿಶ್ವಾಸಾರ್ಹತೆಯನ್ನು ಪ್ರಶ್ನಿಸುವುದು ಗಂಭೀರವಾಗಿದೆ ಮತ್ತು ಸಭಾಧ್ಯಕ್ಷರು ನೀಡಿದ ನಿಯಮದ ವಿರುದ್ಧ ಮಾತನಾಡುವುದು ಸಂಪೂರ್ಣ ಸಂವಿಧಾನಬಾಹಿರವಾಗಿದೆ ಎಂದು ಬಿಜೆಪಿ ಎಂಎಲ್ಸಿ ಸಿ.ಟಿ. ರವಿ ಹೇಳಿದರು. ಕಾಂಗ್ರೆಸ್ ಎಂಎಲ್‌ಸಿಗಳಾದ ಬಿ.ಕೆ. ಹರಿಪ್ರಸಾದ್ ಮತ್ತು ಕೆ.ಎಸ್. ಪುಟ್ಟಣ್ಣಯ್ಯ ಅವರು, ಈ ವಿಷಯವನ್ನು ಸದನದಲ್ಲಿ ಚರ್ಚಿಸುವುದು ನ್ಯಾಯಯುತವಲ್ಲ, ಆದರೆ ಹಿರಿಯ ಎಂಎಲ್‌ಸಿಗಳ ಸಮಿತಿಯನ್ನು ರಚಿಸಿ ನಿರ್ಧರಿಸುವ ಅಗತ್ಯವಿದೆ ಎಂದು ವಾದಿಸಿದರು.

ಮಾಜಿ ಸ್ಪೀಕರ್ ಮತ್ತು ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ವಿರುದ್ಧ ಮಾಡಿರುವ ಭ್ರಷ್ಟಾಚಾರ ಆರೋಪಗಳ ಬಗ್ಗೆ ಹರಿಪ್ರಸಾದ್ ಆಕ್ಷೇಪ ವ್ಯಕ್ತಪಡಿಸಿದರು ಮತ್ತು ಅಂತಹ ಆರೋಪಗಳ ಬಗ್ಗೆಯೂ ವಿರೋಧ ಪಕ್ಷದ ನಿಲುವು ಏನೂ ಎಂದು ಪ್ರಶ್ನಿಸಿದರು.

ಆದಾಗ್ಯೂ, ಪುಟ್ಟಣ್ಣ ಅವರು ಉಪ ಸಭಾಪತಿ ಎಂ.ಕೆ. ಪ್ರಾಣೇಶ್ ನೇತೃತ್ವದಲ್ಲಿ ಸದನ ಮತ್ತು ವಿರೋಧ ಪಕ್ಷದ ನಾಯಕರು ಹಾಗೂ ಕೆಲವು ಹಿರಿಯ ಸದಸ್ಯರನ್ನು ಒಳಗೊಂಡ ಸಮಿತಿ ರಚಿಸುವಂತೆ ಮತ್ತು ಆ ವಿಷಯದ ಬಗ್ಗೆ ಚರ್ಚಿಸುವಂತೆ ಸಲಹೆ ನೀಡಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕರ್ನಾಟಕ ಅಕ್ರಮದ ಹಾದಿ ಹಿಡಿಯದಿರಲಿ: ಗೃಹ ಸಚಿವ ಪರಮೇಶ್ವರರ "ಧ್ವಂಸ" ಹೇಳಿಕೆಗೆ ಪಿ. ಚಿದಂಬರಂ ಕಿಡಿ!

ತಾಳ್ಮೆ ಕಳೆದುಕೊಂಡು ಪುಟಿನ್-ಎರ್ಡೋಗನ್ ನಡುವಿನ ರಹಸ್ಯ ಸಭೆಗೆ ನುಗ್ಗಿದ ಪಾಕ್ ಪ್ರಧಾನಿ; ಮುಂದೇನಾಯ್ತು?, Video!

'ಸಂಸ್ಕೃತದ ವ್ಯಾಕರಣ ಹುಟ್ಟಿದ್ದು ನಮ್ಮಲ್ಲೇ; ನಾವ್ಯಾಕೆ ಸಂಸ್ಕೃತ ಕಲಿಯಬಾರದು'?: Pak ವಿವಿಯಲ್ಲಿ ಮಹಾಭಾರತ, ಸಂಸ್ಕೃತದ ಕೋರ್ಸ್ ಆರಂಭ!

ರೌಡಿಶೀಟರ್‌ ಮೌಖಿಕವಾಗಿ ಕರೆಸಿಕೊಳ್ಳಲು ಬ್ರೇಕ್‌; SMS ಅಥವಾ WhatsApp ಬಳಸಿ: ಪೊಲೀಸರಿಗೆ ಹೈಕೋರ್ಟ್‌ ಸೂಚನೆ!

ಭಾರತದಲ್ಲಿ 11,718 ಕೋಟಿ ರೂ ವೆಚ್ಚದಲ್ಲಿ 'ಡಿಜಿಟಲ್ ಜನಗಣತಿ': ಕೇಂದ್ರ ಸಂಪುಟ ಅನುಮೋದನೆ!

SCROLL FOR NEXT