ಸರ್ಬಾನಂದ ಸೋನೊವಾಲ್ 
ರಾಜ್ಯ

ಕನಾಟಕದ ಒಳನಾಡು ಜಲಸಾರಿಗೆಗೆ ಕೇಂದ್ರದಿಂದ ಪ್ರಮುಖ ಉತ್ತೇಜನ

ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡದಲ್ಲಿನ ಪ್ರಮುಖ ನದಿಗಳ ಉದ್ದಕ್ಕೂ ಜೆಟ್ಟಿಗಳನ್ನು ನಿರ್ಮಿಸಲು ಅಥವಾ ನವೀಕರಿಸಲು ಕ್ರಿಯಾ ಯೋಜನೆಯನ್ನು ರೂಪಿಸಿದೆ ಎಂದು ಹೇಳಿದರು.

ಶಿವಮೊಗ್ಗ: ಕರ್ನಾಟಕದ ಕರಾವಳಿ ಮತ್ತು ನದಿ ಜಾಲವು ಶೀಘ್ರದಲ್ಲೇ ಒಳನಾಡಿನ ಜಲ ಸಾರಿಗೆಯಲ್ಲಿ ಗಮನಾರ್ಹ ಉತ್ತೇಜನ ಕಾಣುವ ಸಾಧ್ಯತೆಯಿದೆ. ಕೇಂದ್ರ ಸರ್ಕಾರವು ಹಲವಾರು ರಾಷ್ಟ್ರೀಯ ಜಲಮಾರ್ಗಗಳಲ್ಲಿ(NW) ಜೆಟ್ಟಿ(ತೇಲು ನಿಲ್ದಾಣ)ಗಳು, ದೋಣಿ ಮಾರ್ಗಗಳು ಮತ್ತು ನದಿ-ಕ್ರೂಸ್ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ವಿವರವಾದ ಯೋಜನೆ ರೂಪಿಸಿದೆ.

ಲೋಕಸಭೆಯಲ್ಲಿ ಉಡುಪಿ-ಚಿಕ್ಕಮಗಳೂರು ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಅವರ ಪ್ರಶ್ನೆಗೆ ಲಿಖಿತ ಉತ್ತರ ನೀಡಿದ ಬಂದರು, ಹಡಗು ಮತ್ತು ಜಲಮಾರ್ಗಗಳ ಸಚಿವ ಸರ್ಬಾನಂದ ಸೋನೋವಾಲ್ ಅವರು, ಭಾರತೀಯ ಒಳನಾಡಿನ ಜಲಮಾರ್ಗ ಪ್ರಾಧಿಕಾರ(IWAI) 2026-27ರ ವೇಳೆಗೆ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡದಲ್ಲಿನ ಪ್ರಮುಖ ನದಿಗಳ ಉದ್ದಕ್ಕೂ ಜೆಟ್ಟಿಗಳನ್ನು ನಿರ್ಮಿಸಲು ಅಥವಾ ನವೀಕರಿಸಲು ಕ್ರಿಯಾ ಯೋಜನೆಯನ್ನು ರೂಪಿಸಿದೆ ಎಂದು ಹೇಳಿದರು. ಈ ಯೋಜನೆಯು ಅಸ್ತಿತ್ವದಲ್ಲಿರುವ ದೋಣಿ ಕೇಂದ್ರಗಳನ್ನು ವಿಸ್ತರಿಸುವುದು, ಸಂಚರಣ ಸಹಾಯವನ್ನು ಪರಿಚಯಿಸುವುದನ್ನು ಒಳಗೊಂಡಿದೆ.

ಕರ್ನಾಟಕವು ರಾಷ್ಟ್ರೀಯ ಜಲಮಾರ್ಗ ಕಾಯ್ದೆ, 2016 ರ ಅಡಿಯಲ್ಲಿ 12 ಘೋಷಿತ NW ಗಳನ್ನು ಹೊಂದಿದೆ. ಪ್ರಸ್ತುತ ಅಭಿವೃದ್ಧಿಯ ಭಾಗವಾಗಿ, IWAI ಗುರುಪುರ(NW-43) ಮತ್ತು ನೇತ್ರಾವತಿ (NW-74) ನದಿಗಳಲ್ಲಿ ಮೂರು ಜೋಡಿ ಸಂಪರ್ಕ ಜೆಟ್ಟಿಗಳನ್ನು ಪ್ರಸ್ತಾಪಿಸಲಾಗಿದೆ.

ಇವುಗಳಲ್ಲಿ ಬೆಂಗ್ರೆ ದೋಣಿ ಸೇವೆ, ಬಿಎಂಎಸ್ ದೋಣಿ ಮಾರ್ಗ ಮತ್ತು ಸುಲ್ತಾನ್ ಬತ್ತೇರಿಗೆ ಸಂಪರ್ಕಗಳು ಸೇರಿವೆ. 15.7 ಕಿಮೀ ರಸ್ತೆ ಪ್ರಯಾಣದ ಅಗತ್ಯವಿರುವ 1.5 ಕಿಮೀ ದೋಣಿ ಕಾರಿಡಾರ್ ಅನ್ನು ಬೆಂಬಲಿಸಲು ಬೋಳಾರ ಮತ್ತು ಉಳ್ಳಾಲದಲ್ಲಿ ಮತ್ತೊಂದು ಜೋಡಿ ಜೆಟ್ಟಿಗಳನ್ನು ಪ್ರಸ್ತಾಪಿಸಲಾಗಿದೆ.

ಕಾಳಿ ನದಿಯಲ್ಲಿ (NW-52), ಸಂಚರಣೆಗೆ ಸಹಾಯ ಮಾಡುವ ಮತ್ತು ಅಸ್ತಿತ್ವದಲ್ಲಿರುವ 24 ಮೀಟರ್ ಜೆಟ್ಟಿಯ ವರ್ಧನೆಯನ್ನು ಯೋಜಿಸಲಾಗಿದೆ. ಹಿನ್ನೀರಿನ ಕ್ರೂಸ್ ಮಾರ್ಗಗಳನ್ನು ಬೆಂಬಲಿಸಲು ಪಂಚಗಂಗವಲಿ ನದಿಯ(NW-76) ಕೋಡಿ ಬೀಚ್‌ನಲ್ಲಿ ಹೊಸ ತೇಲುವ ಜೆಟ್ಟಿಯನ್ನು ಪ್ರಸ್ತಾಪಿಸಲಾಗಿದೆ. ಆದರೆ ಶರಾವತಿ ನದಿಯ(NW-90) ಹೊನ್ನಾವರ ಮತ್ತು ಗೆರುಸೊಪ್ಪದಲ್ಲಿ ಎರಡು ಜೆಟ್ಟಿಗಳನ್ನು ನಿರ್ಮಿಸಲಾಗುತ್ತಿದೆ ಎಂದು ಸೋನೋವಾಲ್ ಅವರು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಉದ್ಯೋಗಾಕಾಂಕ್ಷಿಗಳ ಪ್ರತಿಭಟನೆ: ವಯೋಮಿತಿ 5 ವರ್ಷ ಸಡಿಲಿಕೆ; ಸಮಸ್ಯೆಗೆ ಬಿಜೆಪಿಯೇ ಕಾರಣ ಎಂದ CM

Ranji Trophy final: ಮೊದಲ ದಿನ ಬಲಿಷ್ಠ ಕರ್ನಾಟಕ ವಿರುದ್ಧ ಪ್ರಾಬಲ್ಯ ಸಾಧಿಸಿದ ಜಮ್ಮು ಕಾಶ್ಮೀರ!

ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ: ಮ್ಯೂಸಿಕ್ ಮೈಲಾರಿಗೆ ಬಿಗ್ ರಿಲೀಫ್; ಜಾಮೀನು ಮಂಜೂರು

AIADMKಯಿಂದ ಮತ್ತಷ್ಟು ಫ್ರೀಬೀಸ್ ಘೋಷಣೆ; ಪ್ರತಿ ಕುಟುಂಬಕ್ಕೆ 10,000 ರೂ. ನೆರವು!

ಶಿವಮೊಗ್ಗದಲ್ಲಿ ಶಾಲಾ ಬಾಲಕನ ಹತ್ಯೆ, 7 ಅಪ್ರಾಪ್ತರ ಬಂಧನ; 15 ಲಕ್ಷ ರೂ ಪರಿಹಾರ ಘೋಷಣೆ

SCROLL FOR NEXT