ಗ್ರ್ಯಾಮಿ ಪ್ರಶಸ್ತಿ ವಿಜೇತ ರಿಕಿ ಕೇಜ್ ಅವರ ಮನೆಯಲ್ಲಿ ಜೊಮ್ಯಾಟೋ ಡೆಲಿವರಿ ಬಾಯ್ ಕಳ್ಳತನ ಮಾಡಿರುವ ಘಟನೆ ನಡೆದಿದೆ. ಈ ಸಂಬಂಧ ರಿಕಿ ಕೇಜ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. ಕಳ್ಳತನದ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಕೆಂಪು ಹೋಂಡಾ ಆಕ್ಟಿವಾದಲ್ಲಿ ಬಂದಿದ್ದ ಡೆಲಿವರಿ ಬಾಯ್ ಸಂಪ್ ಕವರ್ ಕದ್ದಿರುವುದು ದೃಢಪಟ್ಟಿದೆ.
ಬೆಂಗಳೂರು: ಗ್ರ್ಯಾಮಿ ಪ್ರಶಸ್ತಿ ವಿಜೇತ ರಿಕಿ ಕೇಜ್ ಅವರ ಮನೆಯಲ್ಲಿ ಜೊಮ್ಯಾಟೋ ಡೆಲಿವರಿ ಬಾಯ್ ಕಳ್ಳತನ ಮಾಡಿರುವ ವಿಡಿಯೋ ವೈರಲ್ ಆಗಿದೆ.
ಈ ಸಂಬಂಧ ರಿಕಿ ಕೇಜ್ ತಮ್ಮ ಇನ್ ಸ್ಟಾ ಗ್ರಾಮ್ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. ಬೆಂಗಳೂರಿನ ತಮ್ಮ ಮನೆಗೆ ನುಗ್ಗಿದ ಜೊಮ್ಯಾಟೋ ಡೆಲಿವರ್ ಬಾಯ್ ಸಂಪ್ ಕವರ್ ಕದ್ದಿದ್ದಾನೆ.
ನನ್ನನ್ನು ದರೋಡೆ ಮಾಡಲಾಗಿದೆ, ಪ್ರಿಯ @zomato, @zomatocare, ನಿಮ್ಮ ಚಾಲಕರಲ್ಲಿ ಒಬ್ಬರು ಗುರುವಾರ ನನ್ನ ಮನೆಗೆ ಪ್ರವೇಶಿಸಿ ನಮ್ಮ ಸಂಪ್ ಕವರ್ ಕದ್ದಿದ್ದಾರೆ, ಸಂಜೆ 6 ಗಂಟೆ ಸಮಯದಲ್ಲಿ ಈ ಕಳ್ಳತನ ನಡೆದಿದೆ. ಅವರಲ್ಲಿ ತುಂಬಾ ದಿಟ್ಟತನವಿದೆ. ಇದು ಬಹುಶಃ ಅವರ ಮೊದಲ ಬಾರಿ ಮಾಡಿದ್ದಲ್ಲ ಎನ್ನಿಸುತ್ತದೆ. ಅವರು ಕೇವಲ 15 ನಿಮಿಷಗಳ ಹಿಂದೆ ಬಂದಿದ್ದರು. ನಂತರ ಮತ್ತೆ ಒಳಗೆ ನುಗ್ಗಿ ಅಪರಾಧ ಎಸಗಿದರು ಎಂದು ಬರೆದು ಕೊಂಡಿದ್ದಾರೆ. ಬೆಂಗಳೂರು ಸಿಟಿ ಪೊಲಸ್
ನೀವು ಸಿಸಿಟಿವಿ ದೃಶ್ಯಾವಳಿಗಳನ್ನು ಎರಡು ಕೋನಗಳಿಂದ ನೋಡಬಹುದು. ಅವರ ಮುಖದ ಸ್ಕ್ರೀನ್‌ಶಾಟ್‌ಗಳು ಮತ್ತು ನಂಬರ್ ಪ್ಲೇಟ್ ಸಹ ಕಾಣುತ್ತದೆ. ಕೆಂಪು ಹೋಂಡಾ ಆಕ್ಟಿವಾದಲ್ಲಿ ಸಂಖ್ಯೆ KA03HY8751 ಎಂದು ತೋರುತ್ತದೆ. ಈ ವ್ಯಕ್ತಿ ಯಾರು ಎಂಬ ಬಗ್ಗೆ ಬೆಂಗಳೂರು ಸಿಟಿ ಪೊಲೀಸರಿಗೆ ಸಹಾಯ ನೀಡುವ ಸಾಧ್ಯತೆಯಿದೆಯೇ? ಅಲ್ಲದೆ, ಜನರೇ, ಜಾಗರೂಕರಾಗಿರಿ. ಇದು ನಿಮಗೂ ಸಂಭವಿಸಬಹುದು ಎಂದು ಎಚ್ಚರಿಸಿದ್ದಾರೆ.