ಸಾಂದರ್ಭಿಕ ಚಿತ್ರ  
ರಾಜ್ಯ

ಹುಬ್ಬಳ್ಳಿ ಮತ್ತು ವಿಜಯಪುರಕ್ಕೆ ಡಿ.24ರಂದು ವಿಶೇಷ ರೈಲು ಸೇವೆ, ಕೆಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ

ರೈಲು ಸಂಖ್ಯೆ 07379 ಹುಬ್ಬಳ್ಳಿಯಿಂದ ಮಧ್ಯಾಹ್ನ 12 ಗಂಟೆಗೆ ಹೊರಟು ಹಾವೇರಿ, ಹರಿಹರ, ದಾವಣಗೆರೆ, ಅರಸೀಕೆರೆ ಮತ್ತು ತುಮಕೂರು ಮೂಲಕ ರಾತ್ರಿ 8.30 ಕ್ಕೆ ಯಶವಂತಪುರ ತಲುಪಲಿದೆ.

ಬೆಂಗಳೂರು: ನೈಋತ್ಯ ರೈಲ್ವೆ (SWR) ಡಿಸೆಂಬರ್ 24 ರಂದು ಬೆಂಗಳೂರಿನಿಂದ ಹುಬ್ಬಳ್ಳಿ ಮತ್ತು ವಿಜಯಪುರಕ್ಕೆ ವಿಶೇಷ ರೈಲು ಸಂಚಾರ ಸೇವೆ ಕಲ್ಪಿಸಲಿದೆ.

ರೈಲು ಸಂಖ್ಯೆ 07379 ಹುಬ್ಬಳ್ಳಿಯಿಂದ ಮಧ್ಯಾಹ್ನ 12 ಗಂಟೆಗೆ ಹೊರಟು ಹಾವೇರಿ, ಹರಿಹರ, ದಾವಣಗೆರೆ, ಅರಸೀಕೆರೆ ಮತ್ತು ತುಮಕೂರು ಮೂಲಕ ರಾತ್ರಿ 8.30 ಕ್ಕೆ ಯಶವಂತಪುರ ತಲುಪಲಿದೆ.

ರೈಲು ಸಂಖ್ಯೆ 06277 ಯಶವಂತಪುರದಿಂದ ರಾತ್ರಿ 9.50 ಕ್ಕೆ ಹೊರಟು ತುಮಕೂರು, ಅರಸೀಕೆರೆ, ದಾವಣಗೆರೆ, ಹರಿಹರ, ಬಾದಾಮಿ, ಬಾಗಲಕೋಟೆ ಮತ್ತು ಆಲಮಟ್ಟಿ ಮೂಲಕ ಬೆಳಗ್ಗೆ 9 ಗಂಟೆಗೆ ವಿಜಯಪುರ ತಲುಪಲಿದೆ.

ತುಮಕೂರು ಮತ್ತು ಮಲ್ಲಸಂದ್ರ ನಡುವೆ ಅಗತ್ಯ ಎಂಜಿನಿಯರಿಂಗ್ ಕಾಮಗಾರಿಗಳ ಕಾರಣ ಕೆಲ ರೈಲುಗಳ ಸಂಚಾರದಲ್ಲಿ ವ್ಯತ್ಯವಾಗುವ ಸಾಧ್ಯತೆ ಇದೆ ಎಂದು ನೈರುತ್ಯ ರೈಲ್ವೆ ತಿಳಿಸಿದೆ.

  • ರೈಲು ಸಂಖ್ಯೆ 66567 ಕೆಎಸ್‌ಆರ್ ಬೆಂಗಳೂರು–ತುಮಕೂರು MEMU ಡಿಸೆಂಬರ್ 17, 20, 21 ಮತ್ತು 24ರಂದು ತುಮಕೂರು ಬದಲು ದೊಡಬೆಲೆನಲ್ಲಿ ಅಂತ್ಯಗೊಳ್ಳಲಿದೆ.

  • ರೈಲು ಸಂಖ್ಯೆ 66572 ತುಮಕೂರು–ಕೆಎಸ್‌ಆರ್ ಬೆಂಗಳೂರು MEMU ಡಿಸೆಂಬರ್ 17, 20 ಮತ್ತು 24ರಂದು ತುಮಕೂರು ಬದಲು ದೊಡಬೆಲೆನಿಂದ ಆರಂಭವಾಗಲಿದೆ.

  • ರೈಲು ಸಂಖ್ಯೆ 20652 ತಾಳಗುಪ್ಪ–ಕೆಎಸ್‌ಆರ್ ಬೆಂಗಳೂರು ಎಕ್ಸ್‌ಪ್ರೆಸ್ ಡಿಸೆಂಬರ್ 17, 21 ಮತ್ತು 24ರಂದು ಕೆಎಸ್‌ಆರ್ ಬೆಂಗಳೂರು ಬದಲು ಅರಸೀಕೆರೆಯಲ್ಲಿ ಅಂತ್ಯಗೊಳ್ಳಲಿದೆ.

  • ರೈಲು ಸಂಖ್ಯೆ 12725 ಕೆಎಸ್‌ಆರ್ ಬೆಂಗಳೂರು–ಧಾರವಾಡ ಎಕ್ಸ್‌ಪ್ರೆಸ್ ಡಿಸೆಂಬರ್ 17, 20, 21 ಮತ್ತು 24ರಂದು ಕೆಎಸ್‌ಆರ್ ಬೆಂಗಳೂರು ಬದಲು ಅರಸೀಕೆರೆಯಿಂದ ಆರಂಭವಾಗಲಿದೆ.

  • ರೈಲು ಸಂಖ್ಯೆ 12726 ಧಾರವಾಡ–ಕೆಎಸ್‌ಆರ್ ಬೆಂಗಳೂರು ಎಕ್ಸ್‌ಪ್ರೆಸ್ ಡಿಸೆಂಬರ್ 17 ಮತ್ತು 24ರಂದು ಕೆಎಸ್‌ಆರ್ ಬೆಂಗಳೂರು ಬದಲು ಅರಸೀಕೆರೆಯಲ್ಲಿ ಅಂತ್ಯಗೊಳ್ಳಲಿದೆ.

  • ರೈಲು ಸಂಖ್ಯೆ 66571 ಕೆಎಸ್‌ಆರ್ ಬೆಂಗಳೂರು–ತುಮಕೂರು MEMU ಡಿಸೆಂಬರ್ 17 ಮತ್ತು 24ರಂದು ತುಮಕೂರು ಬದಲು ದೊಡಬೆಲೆನಲ್ಲಿ ಅಂತ್ಯಗೊಳ್ಳಲಿದೆ.

  • ರೈಲು ಸಂಖ್ಯೆ 66568 ತುಮಕೂರು–ಕೆಎಸ್‌ಆರ್ ಬೆಂಗಳೂರು MEMU ಡಿಸೆಂಬರ್ 17 ಮತ್ತು 24ರಂದು ತುಮಕೂರು ಬದಲು ದೊಡಬೆಲೆನಿಂದ ಆರಂಭವಾಗಲಿದೆ.

  • ರೈಲು ಸಂಖ್ಯೆ 56281 ಚಾಮರಾಜನಗರ–ತುಮಕೂರು ಪ್ಯಾಸೆಂಜರ್ ಡಿಸೆಂಬರ್ 17 ಮತ್ತು 24ರಂದು ತುಮಕೂರು ಬದಲು ಚಿಕ್ಕಬಾಣಾವರದಲ್ಲಿ ಅಂತ್ಯಗೊಳ್ಳಲಿದೆ.

ಕೆಲ ರೈಲುಗಳ ಸಂಚಾರ ರದ್ದು

ರೈಲು ಸಂಖ್ಯೆ 16239 ಚಿಕ್ಕಮಗಳೂರು–ಯಶವಂತಪುರ ಎಕ್ಸ್‌ಪ್ರೆಸ್, ರೈಲು ಸಂಖ್ಯೆ 16240 ಯಶವಂತಪುರ–ಚಿಕ್ಕಮಗಳೂರು ಎಕ್ಸ್‌ಪ್ರೆಸ್ ಮತ್ತು ರೈಲು ಸಂಖ್ಯೆ 12614 ಕೆಎಸ್‌ಆರ್ ಬೆಂಗಳೂರು–ಮೈಸೂರು ಎಕ್ಸ್‌ಪ್ರೆಸ್ ರೈಲುಗಳ ಸಂಚಾರ ಡಿಸೆಂಬರ್ 17 ಮತ್ತು 24ರಂದು ರದ್ದಾಗಿವೆ ಎಂದು ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

"Vote chori" ವಿರುದ್ಧ ಕಾಂಗ್ರೆಸ್ ಬೃಹತ್ ಪ್ರತಿಭಟನೆ: ನುಸುಳುಕೋರರನ್ನು ರಕ್ಷಿಸುವ ಪ್ರಯತ್ನ ಎಂದ ಬಿಜೆಪಿ!

ಮಡಿಕೇರಿ: FaceBook ಗೆಳತಿ ಮಾತು ನಂಬಿ ರೂಂಮಿಗೆ ಬಂದ ಯುವಕ; ಅರೆಬೆತ್ತಲಾಗಿ ನಡುರಸ್ತೆಯಲ್ಲಿ ಓಡಿದ್ದು ದಂಗಾಗಿ ನಿಂತ ಜನ!

ಮೆಸ್ಸಿ ಕಾರ್ಯಕ್ರಮದಲ್ಲಿ ಹೈಡ್ರಾಮಾ: ಅಭಿಮಾನಿಗಳ ಆಕ್ರೋಶ, ಕಾರ್ಪೆಟ್ ಅನ್ನೇ ಹೊತ್ತೊಯ್ದ ಭೂಪ! Video

ಹಬ್ಬದಂದು ಯಹೂದಿಗಳ ಮೇಲೆ ಮತ್ತೆ ದಾಳಿ: ಸಿಡ್ನಿಯಲ್ಲಿ ಗುಂಡಿಕ್ಕಿ 10 ಮಂದಿ ಹತ್ಯೆ!

Sydney Bondi Beach Shooting: ಹಿಂದಿನಿಂದ ಓಡಿಬಂದು ಹಂತಕನ ಕೈಯಿಂದ 'ರೈಫಲ್' ಕಸಿದ ವ್ಯಕ್ತಿ ಮಾಡಿದ್ದೇನು? ಮೈ ಝಮ್ಮೆನಿಸುವ Video!

SCROLL FOR NEXT