ಹೈಕೋರ್ಟ್ 
ರಾಜ್ಯ

ಪಾಕ್ ಮಹಿಳೆಯ ಪೌರತ್ವ ಅರ್ಜಿ: ವೀಸಾ ಅವಧಿ ಮುಗಿಯುವ ಮುನ್ನಾ ಪ್ರಕ್ರಿಯೆ ಪೂರ್ಣಗೊಳಿಸಿ- ಕೇಂದ್ರಕ್ಕೆ ಹೈಕೋರ್ಟ್ ನಿರ್ದೇಶನ

ಭಾರತ-ಪಾಕಿಸ್ತಾನ ಸಂಘರ್ಷದ ನಂತರ ವೀಸಾ ನೀತಿಯಲ್ಲಿನ ಇತ್ತೀಚಿನ ಬದಲಾವಣೆಗಳು ವಿಶೇಷವಾಗಿ ಇ-ಎಫ್‌ಆರ್‌ಆರ್‌ಒ ಪೋರ್ಟಲ್ ಅಗತ್ಯತೆಯ ಪರಿಚಯದೊಂದಿಗೆ ಪಾಕ್ ಪ್ರಜೆಗಳ ಅರ್ಜಿ ಪ್ರಕ್ರಿಯೆ ಮೇಲೆ ಪರಿಣಾಮ ಬೀರಿದೆ ಎಂದು ಡಿಸೆಂಬರ್ 18 ರಂದು ನ್ಯಾಯಾಲಯ ಒಪ್ಪಿಕೊಂಡಿತ್ತು.

ಬೆಂಗಳೂರು: ಭಾರತದಲ್ಲಿ ನೆಲೆಸಿರುವ ಪಾಕ್ ಮಹಿಳೆಯು ಹೊಸದಾಗಿ ಸಲ್ಲಿಸಿರುವ ಪೌರತ್ವ ಅರ್ಜಿಯನ್ನ ಪರಿಗಣಿಸುವಂತೆ ಮತ್ತು ದೀರ್ಘಾವಧಿಯ ವೀಸಾ ಅವಧಿ ಮುಗಿಯುವ ಮುನ್ನ ಪ್ರಕ್ರಿಯೆಯನ್ನು ಪೂರ್ಣಗೊಳಿಸುವಂತೆ ಕರ್ನಾಟಕ ಹೈಕೋರ್ಟ್ ವಿದೇಶಾಂಗ ಸಚಿವಾಲಯ, ಗೃಹ ಸಚಿವಾಲಯ ಮತ್ತು ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿಗೆ (ಎಫ್‌ಆರ್‌ಆರ್‌ಒ) ನಿರ್ದೇಶನ ನೀಡಿದೆ.

ಭಾರತೀಯ ಪ್ರಜೆ ಮೊಹಮ್ಮದ್ ಯೂನಸ್ ಅವರನ್ನು ಮದುವೆಯಾಗಿರುವ ಮತ್ತು ಭಾರತೀಯ ಪ್ರಜೆಗಳಾಗಿರುವ ಇಬ್ಬರು ಮಕ್ಕಳ ತಾಯಿಯಾಗಿರುವ ಅರ್ಜಿದಾರ ಮಹಿಳೆ ನಿಘಾತ್ ಯಾಸ್ಮೀನ್, ಈ ಹಿಂದೆ ಪೌರತ್ವಕ್ಕಾಗಿ ಸಲ್ಲಿಸಿರುವ ಅರ್ಜಿಗಳನ್ನು ಅಧಿಕಾರಿಗಳು ಸ್ವೀಕರಿಸಲಿಲ್ಲ ಎಂದು ಆರೋಪಿಸಿ ನ್ಯಾಯಾಲಯವನ್ನು ಸಂಪರ್ಕಿಸಿದರು.

ಭಾರತ-ಪಾಕಿಸ್ತಾನ ಸಂಘರ್ಷದ ನಂತರ ವೀಸಾ ನೀತಿಯಲ್ಲಿನ ಇತ್ತೀಚಿನ ಬದಲಾವಣೆಗಳು ವಿಶೇಷವಾಗಿ ಇ-ಎಫ್‌ಆರ್‌ಆರ್‌ಒ ಪೋರ್ಟಲ್ ಅಗತ್ಯತೆಯ ಪರಿಚಯದೊಂದಿಗೆ ಪಾಕ್ ಪ್ರಜೆಗಳ ಅರ್ಜಿ ಪ್ರಕ್ರಿಯೆ ಮೇಲೆ ಪರಿಣಾಮ ಬೀರಿದೆ ಎಂದು ಡಿಸೆಂಬರ್ 18 ರಂದು ನ್ಯಾಯಾಲಯ ಒಪ್ಪಿಕೊಂಡಿತ್ತು.

ಯಾಸ್ಮಿನ್ ಈ ಅಗತ್ಯವನ್ನು ಅನುಸರಿಸಿದ್ದಾರೆ ಎಂಬುದನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಪರಿಗಣಿಸಿದರು ಆದರೆ, ಅವರ ಪ್ರಕರಣ ಇನ್ನೂ ಪೂರ್ಣಗೊಂಡಿಲ್ಲ. ಸರ್ಕಾರದ ಆದೇಶವು ಪಾಕ್ ಪ್ರಜೆಗಳಿಗೆ ವೀಸಾ ಸೇವೆಗಳನ್ನು ಅಮಾನತುಗೊಳಿಸಿದ್ದರೂ, ದೀರ್ಘಾವಧಿಯ ವೀಸಾಗಳನ್ನು ಹೊಂದಿರುವವರು ಪ್ರಕ್ರಿಯೆಯ ಸಮಯದಲ್ಲಿ ಗಡೀಪಾರು ಅಥವಾ ಬಲವಂತದ ಕ್ರಮಗಳಿಂದ ರಕ್ಷಿಸಲ್ಪಡುತ್ತಾರೆ ಎಂದು ನ್ಯಾಯಾಧೀಶರು ಸ್ಪಷ್ಟಪಡಿಸಿದರು.

ಬಾಕಿ ಇರುವ ಬಹು ಅರ್ಜಿಗಳನ್ನು ಹಿಂಪಡೆಯಲು ನ್ಯಾಯಾಲಯವು ಯಾಸ್ಮೀನ್‌ಗೆ ಅನುಮತಿ ನೀಡಿತು. ಆದರೆ ಒಮ್ಮೆ ಸಲ್ಲಿಸಿದ ನಂತರ ನಿಗದಿತ ಕಾಲಮಿತಿಯೊಳಗೆ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿತು. ಭಾರತದಲ್ಲಿನ ಆಕೆಯ ಕುಟುಂಬ ಸಂಬಂಧಗಳನ್ನು ಗಣನೆಗೆ ತೆಗೆದುಕೊಂಡು ಜಾರಿಯಲ್ಲಿರುವ ಕಾನೂನುಗಳು ಮತ್ತು ಸೂಕ್ತ ಸಮಯದಲ್ಲಿ ಆಕೆಯ ಅರ್ಜಿಯನ್ನು ಇತ್ಯರ್ಥಪಡಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳುವ ಗುರಿಯೊಂದಿಗೆ ನಿರ್ದೇಶನ ನೀಡಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬೆಂಗಳೂರಿಗೆ 2ನೇ ವಿಮಾನ ನಿಲ್ದಾಣ: ಷರತ್ತಿನ ಅರಿವಿದೆ, ಮುಂದಾಲೋಚನೆಯಿಂದ ಟೆಂಡರ್ ಆಹ್ವಾನ

ರೌಡಿ ಶೀಟರ್ 'ಬಿಕ್ಲು ಶಿವು' ಕೊಲೆ ಪ್ರಕರಣ: ಬಿಜೆಪಿ ಶಾಸಕ ಬೈರತಿ ಬಸವರಾಜ್ ಗೆ ನಿರೀಕ್ಷಣಾ ಜಾಮೀನು, ನಿರಾಕರಿಸಿದ ಹೈಕೋರ್ಟ್!

ಒಮನ್ ಭೇಟಿ ವೇಳೆ ಮೋದಿ ಹೊಸ ಸ್ಟೈಲ್ ಬಗ್ಗೆ ಭಾರಿ ಚರ್ಚೆ: ಪ್ರಧಾನಿ ಕಿವಿಗೆ ಧರಿಸಿದ್ದೇನು?

ನನಗೆ ರಾಜಕೀಯ ನಿಶ್ಯಕ್ತಿ ಎಂಬುದೇ ಇಲ್ಲ, 5 ವರ್ಷ ನಾನೇ ಸಿಎಂ: ಬೆಳಗಾವಿ ಅಧಿವೇಶನದಲ್ಲಿ ಸಿದ್ದರಾಮಯ್ಯ ಪುನರುಚ್ಛಾರ

ಬೆಂಗಳೂರು: ಮನೆ ಬಳಿ ಆಟವಾಡ್ತಿದ್ದ ಬಾಲಕನಿಗೆ 'ಕಾಲಿನಿಂದ ಒದ್ದು' ವಿಕೃತಿ! ಪಕ್ಕದ ಮನೆಯ ಆರೋಪಿ ಬಂಧನ, ಬಿಡುಗಡೆ

SCROLL FOR NEXT