ರಾಜ್ಯ

ಬೆಂಗಳೂರು: JCB ನುಗ್ಗಿಸಿದ GBA; 200ಕ್ಕೂ ಹೆಚ್ಚು ಮನೆಗಳು ನೆಲಸಮ!

ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಇಂದು ಬೆಂಗಳೂರಿನ ಶ್ರೀನಿವಾಸಪುರದ ಕೋಗಿಲು ಲೇಔಟ್​ನಲ್ಲಿ ಅನಧಿಕೃತವಾಗಿ ನಿರ್ಮಿಸಲಾಗಿದ್ದ 200ಕ್ಕೂ ಹೆಚ್ಚು ಮನೆಗಳನ್ನು ನೆಲಸಮಗೊಳಿಸಿದೆ.

ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಇಂದು ಬೆಂಗಳೂರಿನ ಶ್ರೀನಿವಾಸಪುರದ ಕೋಗಿಲು ಲೇಔಟ್​ನಲ್ಲಿ ಅನಧಿಕೃತವಾಗಿ ನಿರ್ಮಿಸಲಾಗಿದ್ದ 200ಕ್ಕೂ ಹೆಚ್ಚು ಮನೆಗಳನ್ನು ನೆಲಸಮಗೊಳಿಸಿದೆ. 14 ಎಕರೆ ಪಾಲಿಕೆ ಜಾಗದಲ್ಲಿ ಅನಧಿಕೃತವಾಗಿ ನಿರ್ಮಿಸಿದ್ದ 200ಕ್ಕೂ ಹೆಚ್ಚು ಮನೆಗಳನ್ನು ನೆಲಸಮಗೊಳಿಸಲಾಗಿದೆ. ಈ ಕುಟುಂಬಗಳು ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡು, ಮನೆ ನಿರ್ಮಿಸಿಕೊಂಡಿದ್ದರೆಂದು ಅಧಿಕಾರಿಗಳು ಆರೋಪಿಸಿದ್ದಾರೆ. ಮುಖ್ಯವಾಗಿ, ಒಂದು ವೇಳೆ ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದಲ್ಲಿ, ತೆರವುಗೊಳಿಸಲು ಮೂರು ತಿಂಗಳ ಮುನ್ನವೇ ನೋಟಿಸ್‌ ನೀಡಬೇಕು. ಭೂಮಿಯನ್ನು ಖಾಲಿ ಮಾಡುವಂತೆ ಸೂಚಿಸಬೇಕು. ಬಳಿಕ, ನಂತರದ ಕ್ರಮಗಳನ್ನು ಕೈಗೊಳ್ಳಬೇಕೆಂದು ನಿಯಮವಿದೆ. ಆದರೆ, ಫಕೀರ್ ಕಾಲೋನಿಯ ನಿವಾಸಿಗಳಿಗೆ ಈವರೆಗೆ ಯಾವುದೇ ನೋಟಿಸ್‌ ನೀಡಲಾಗಿಲ್ಲ. ಅಧಿಕಾರಿಗಳು ಏಕಾಏಕಿ ಕಾಲೋನಿಗೆ ನುಗ್ಗಿ, ಮನೆಗಳ ಮೇಲೆ ಬುಲ್ಡೋಜರ್ ಹತ್ತಿಸಿದ್ದಾರೆ ಎಂದು ಸಂತ್ರಸ್ತರು ಆರೋಪಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕದ್ದುಮುಚ್ಚಿ ದೆಹಲಿಗೆ ಹೋಗಲ್ಲ; ಸೂಕ್ತ ಸಮಯದಲ್ಲಿ ಹೈಕಮಾಂಡ್ ನಮ್ಮನ್ನು ಕರೆಯುತ್ತದೆ: ಡಿಕೆಶಿ

ಒಳನುಸುಳುವವರನ್ನು ಹೊರಗಿಡಲು SIR; ಆದ್ರೆ ದಶಕಗಳಿಂದ ಕಾಂಗ್ರೆಸ್ ಅವರನ್ನು ರಕ್ಷಿಸಿತ್ತು: ಪ್ರಧಾನಿ ಮೋದಿ

BMC election: ಕಾಂಗ್ರೆಸ್ ಏಕಾಂಗಿ ಸ್ಪರ್ಧೆ; ಉದ್ಧವ್ ಠಾಕ್ರೆ, ಶರದ್ ಪವಾರ್ ಜತೆ ಮೈತ್ರಿ ಇಲ್ಲ

ಬುರುಡೆ ಗ್ಯಾಂಗ್ ವಿರುದ್ಧ ತಿರುಗಿಬಿದ್ದ ಚಿನ್ನಯ್ಯ: ಜೀವ ಬೆದರಿಕೆ ಆರೋಪ ಮಾಡಿ ಐವರ ವಿರುದ್ಧ ಪೊಲೀಸರಿಗೆ ದೂರು!

'ಜಗತ್ತಿನಲ್ಲಿ ಅಧಿಕಾರದ ಅರ್ಥ ಈಗ ಬದಲಾಗಿದೆ...'; ಅಮೆರಿಕ-ಚೀನಾ ಜೊತೆ ಸಂಬಂಧ ವೃದ್ಧಿ ಮತ್ತಷ್ಟು ಜಟಿಲ: ಜೈಶಂಕರ್

SCROLL FOR NEXT