ಬೆಂಗಳೂರು: ಶನಿವಾರ, ಗ್ರೇಟರ್ ಬೆಂಗಳೂರು ಅಥಾರಿಟಿ (GBA) 160 ಸ್ಲಂ ಮನೆಗಳನ್ನು ನೆಲಸಮಗೊಳಿಸಿದ್ದು, 300 ಕುಟುಂಬಗಳು ನಿರಾಶ್ರಿತವಾಗಿ ನೆಲೆ ಕಳೆದುಕೊಂಡಿದ್ದಾರೆ.
25 ದಿನದ ಹೆಣ್ಣು ಮಗುವಿನೊಂದಿಗೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ತಾಯಿ ಅನ್ಸಾರಿ ಖಾತೂನ್ ಅಳುತ್ತಾ ತನ್ನ ಸ್ಥಿತಿ ಬಗ್ಗೆ ನೊಂದುಕೊಳ್ಳುತ್ತಿದ್ದಳು.
ಮಾರ್ಷಲ್ ಗಳು ನಮ್ಮನ್ನು ಹೊರಗೆಳೆದು, ಸಿಮೆಂಟ್ ಬ್ಲಾಕ್‌ಗಳಿಂದ ನಿರ್ಮಿಸಿದ ಮನೆಯನ್ನು ಕೆಡವಿದರು. ನನ್ನ ಪತಿ ಮತ್ತು ಸಹೋದರರು ದಿನಗೂಲಿಯಲ್ಲಿದ್ದಾರೆ. ಯಾರಾದರೂ ನಮಗೆ ಆಶ್ರಯ ನೀಡಿ. ನನಗೆ ಒಂದು ತಿಂಗಳ ಮಗು ಇದ್ದು ಹೇಗೆ ಬದುಕುವುದು, ಮಗುವನ್ನು ಕಾಪಾಡುವುದು ಹೇಗೆ ಎಂದು ಗೊತ್ತಾಗುತ್ತಿಲ್ಲ ಎನ್ನುತ್ತಾರೆ.
ಖಾಸಗಿ ಕಂಪನಿಯಲ್ಲಿ ಮನೆಗೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿರುವ ವಿಧವೆ ಶಕೀನಾ, ಋತುಮತಿಯಾದ ಮಗಳಿಗೆ ಪ್ಯಾಡ್ ಬದಲಾಯಿಸಲು ಸ್ಥಳವಿಲ್ಲ ಎನ್ನುತ್ತಾರೆ. ತನ್ನ 12 ವರ್ಷದ ಮಗಳ ಸುರಕ್ಷತೆಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
30 ರ ಹರೆಯದ ಆರಿಫುಲ್ಲಾ ಅವರು ಪಾರ್ಶ್ವವಾಯುವಿನಿಂದ ಹಾಸಿಗೆ ಹಿಡಿದಿದ್ದಾರೆ. ಅವರ ವಯಸ್ಸಾದ ತಾಯಿ ಹುಸೇನ್ ಬಿ ಅವರನ್ನು ನೋಡಿಕೊಳ್ಳುತ್ತಿದ್ದಾರೆ. ಸರ್ಕಾರಿ ಉರ್ದು ಶಾಲಾ ಕಟ್ಟಡದ ಆವರಣದಲ್ಲಿ ಆರಿಫುಲ್ಲಾ ಅವರು ಹಾಸಿಗೆಯ ಮೇಲೆ ಮಲಗಿದ್ದಾರೆ. ಅವರ ತಾಯಿ, ಆಹಾರ, ನೀರು, ಔಷಧಿ ಮತ್ತು ಹೊದಿಕೆಗಳಿಗೆ ಜನರನ್ನು ಬೇಡುತ್ತಿರುವುದು ಕಂಡುಬಂತು.
ನಿವಾಸಿಗಳಿಗೆ ಸಹಾಯ ಮಾಡುತ್ತಿರುವ ನಾಗರಿಕ ಸಮಾಜದ ಗುಂಪುಗಳು ಸ್ಥಳಾಂತರಗೊಂಡವರಲ್ಲಿ ಆರೋಗ್ಯ ಸಮಸ್ಯೆಗಳ ಬಗ್ಗೆ ಭಯಪಡುತ್ತವೆ.
ಭಾನುವಾರ ಕಂದಾಯ ಸಚಿವರ ಮನೆ ಎದುರು ನಿವಾಸಿಗಳು, ನಾಗರಿಕರು ಸೇರಿ ಧರಣಿ ನಡೆಸಿದ್ದು, ನಂತರ ಸಚಿವರು ಸೋಮವಾರ ಕೆಲ ನಿವಾಸಿಗಳೊಂದಿಗೆ ಸಭೆ ನಡೆಸಿದರು. ಜಿಬಿಎ ಹಾಗೂ ಜಿಲ್ಲಾಧಿಕಾರಿ ಜತೆ ಮಾತುಕತೆ ನಡೆಸುವುದಾಗಿ ಸಚಿವರು ಹೇಳಿದ್ದಾರೆ ಎಂದು ಸಭೆಯಲ್ಲಿ ಪಾಲ್ಗೊಂಡಿದ್ದ ಕಾರ್ಯಕರ್ತರು ಹಾಗೂ ಕೆಲ ಸದಸ್ಯರು ಹೇಳುತ್ತಾರೆ. ಈ ಬಗ್ಗೆ ವಸತಿ ಸಚಿವರೊಂದಿಗೆ ಮಾತನಾಡಿ ರಾಜೀವ್ ಗಾಂಧಿ ಹೌಸಿಂಗ್ ಕಾರ್ಪೊರೇಷನ್ ಲಿಮಿಟೆಡ್ ಅಡಿಯಲ್ಲಿ ಅರ್ಹರಿಗೆ ವಸತಿ ಕಲ್ಪಿಸಲು ಪ್ರಯತ್ನಿಸಲಾಗುವುದು ಎಂದು ಸಚಿವರ ಆಪ್ತ ಮೂಲಗಳು ತಿಳಿಸಿವೆ.
ಸ್ವರಾಜ್ ಇಂಡಿಯಾದ ರಾಷ್ಟ್ರೀಯ ಕಾರ್ಯಕಾರಿ ಸದಸ್ಯ ಆರ್ ಕಲೀಮುಲ್ಲಾ, ಅನೇಕ ವಯೋವೃದ್ಧರು ಸಹ-ಅಸ್ವಸ್ಥತೆಯಿಂದ ಬಳಲುತ್ತಿದ್ದಾರೆ, ಈ ಹಿಂದೆ ಪ್ರಭಾವಿಗಳ ಅತಿಕ್ರಮಣ ಹಾಗೂ ಸರ್ಕಾರದಿಂದ ಹಿಂಪಡೆದಿರುವ ಉದಾಹರಣೆಗಳನ್ನು ಉಲ್ಲೇಖಿಸಿ ಕಂದಾಯ ಸಚಿವರು ಧ್ವಂಸಗೊಳಿಸಿರುವುದನ್ನು ಸಮರ್ಥಿಸಿಕೊಂಡರು.ಆದರೆ, ಈ ಬಗ್ಗೆ ಜಿಬಿಎ ಮತ್ತು ಕಂದಾಯ ಇಲಾಖೆಯೊಂದಿಗೆ ಸಭೆ ನಡೆಸುವುದಾಗಿ ತಿಳಿಸಿದ ಸಚಿವರು, ಭೂಮಿಯನ್ನು ಮತ್ತೆ ಕಂದಾಯ ಇಲಾಖೆಗೆ ವರ್ಗಾಯಿಸಲು ಪ್ರಯತ್ನಿಸಲಾಗುವುದು ಎಂದು ಹೇಳಿದರು.
ಸಚಿವರು ಆಶ್ರಯ ವ್ಯವಸ್ಥೆ ಮಾಡಲು ಮೂರು ತಿಂಗಳು ಬೇಕಾಗಬಹುದು ಎನ್ನುತ್ತಿದ್ದು, ಸರ್ಕಾರವು ಉಚಿತ ಆಹಾರವನ್ನು ನೀಡಬೇಕು ಮತ್ತು ಆರೋಗ್ಯ ತುರ್ತು ಸಂದರ್ಭಗಳಲ್ಲಿ ಆಂಬ್ಯುಲೆನ್ಸ್ ಸೇವೆಯನ್ನು ಖಚಿತಪಡಿಸಿಕೊಳ್ಳಬೇಕು ಎಂದು ಒತ್ತಾಯಿಸುತ್ತಿದ್ದಾರೆ.