ವಾಹನಗಳ ಹಿಂದೆ ಗಮನಸೆಳೆಯುವ ಬರಹಗಳು, ಸ್ಲೋಗನ್ ಗಳು, ಸ್ಟಿಕರ್ ಗಳನ್ನು ನಾವು ನೋಡುತ್ತೇವೆ. ಮಂಗಳೂರಿನ ಸರ್ಕ್ಯೂಟ್ ಹೌಸ್ ರಸ್ತೆಯಲ್ಲಿ ಕಾರೊಂದರ ಹಿಂಬದಿ ಬರಹ ಹಾಸ್ಯಮಯ ರೀತಿಯಲ್ಲಿ ಗಂಭೀರ ಸಂದೇಶ ಸಾರುವ ರೀತಿಯಲ್ಲಿ ಇದ್ದು, ಇದನ್ನು ಒಬ್ಬರು ವಿಡಿಯೊ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದು ಭಾರೀ ವೈರಲ್ ಆಗಿದೆ.
@bearys_in_dubai ಬಳಕೆದಾರರು Instagram ನಲ್ಲಿ ಹಂಚಿಕೊಂಡಿರುವ ವಿಡಿಯೊದಲ್ಲಿ, ಮಂಗಳೂರಿನ ಸರ್ಕ್ಯೂಟ್ ಹೌಸ್ ರಸ್ತೆಯಲ್ಲಿ ಟ್ರಾಫಿಕ್ ಮೂಲಕ ಮಾರುತಿ ಸುಜುಕಿ ಆಲ್ಟೊ ಕಾರಿನ ಹಿಂಬದಿ ಬರಹವನ್ನು ತೋರಿಸಿದ್ದಾರೆ.
ಸಾಮಾನ್ಯವಾಗಿ ವಾಹನಗಳಲ್ಲಿ ಅಂತರ ಕಾಯ್ದುಕೊಳ್ಳಿ ಎಂಬ ಬರಹ ಸಾಮಾನ್ಯ, ಆದರೆ ಈ ಕಾರಿನಲ್ಲಿ ಗಮನಸೆಳೆಯುವ ಸಾಲುಗಳಿವೆ. "ಅಂತರ ಕಾಯ್ದುಕೊಳ್ಳಿ, EMI ಬಾಕಿ ಇದೆ" ಎಂದು ಬರೆಯಲಾಗಿದೆ. ಈ ಸಂದೇಶವು ಸಾಮಾನ್ಯ ರಸ್ತೆ-ಸುರಕ್ಷತಾ ಎಚ್ಚರಿಕೆಗೆ ಹಾಸ್ಯಮಯ ಸ್ಪರ್ಶ ನೀಡಿದೆ. ಈ ಕಾರಿನ ಮಾಲಿಕ ಗಂಭೀರ ವಿಷಯವನ್ನು ಹಾಸ್ಯಮಯ ರೀತಿಯಲ್ಲಿ ಜನರಿಗೆ ತಲುಪಿಸಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ವೈರಲ್, ಭಾರೀ ಪ್ರತಿಕ್ರಿಯೆ
ಈ ವಿಡಿಯೊ ಹಂಚಿಕೊಂಡ ನಂತರ 54 ಮಿಲಿಯನ್ ಮಂದಿ ವೀಕ್ಷಿಸಿದ್ದು, 3 ಲಕ್ಷಕ್ಕೂ ಹೆಚ್ಚು ಲೈಕ್‌ಗಳನ್ನು ಗಳಿಸಿದೆ. ಬಳಕೆದಾರರು ಹಾಸ್ಯದಿಂದ ಪ್ರತಿಕ್ರಿಯಿಸಿದ್ದು, ಇನ್ನು ಅನೇಕರು ಈ ಬರಹದ ಸಂದೇಶವು ಜನರ ದೈನಂದಿನ ಆರ್ಥಿಕ ಒತ್ತಡಗಳನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದ್ದಾರೆ.
ತಮಾಷೆ ಮತ್ತು ದುಃಖ ಒಟ್ಟೊಟ್ಟಿಗೆ ಇಲ್ಲಿ ಕಂಡುಬರುತ್ತಿದೆ ಎಂದು ಮತ್ತೊಬ್ಬರು ಅಂದರೆ "ಹುಡುಗರು ಇಂತಹ ಬರಹ ನೋಡಿ ನಗುತ್ತಾರೆ, ಪುರುಷರು ನೋವು ಅನುಭವಿಸುತ್ತಾರೆ" ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.
ಮತ್ತೊಬ್ಬರು "ಬ್ಯಾಂಕ್‌ಗೆ ನಿಷ್ಠರಾದವರು" ಎಂದು ತಮಾಷೆ ಮಾಡಿದರೆ, ಬೇರೊಬ್ಬರು India is not for beginners ಎಂದು ವ್ಯಂಗ್ಯವಾಡಿದ್ದಾರೆ.
ಹಲವರು ಇದನ್ನು "ಇದುವರೆಗಿನ ಅತ್ಯುತ್ತಮ ಘೋಷಣೆ" ಎಂದು ಕರೆದಿದ್ದಾರೆ. ಇನ್ನು ಕೆಲವರು ನಗುವ ಮತ್ತು ಅಳುವ ಎಮೋಜಿಗಳೊಂದಿಗೆ ಪೋಸ್ಟ್ ನ್ನು ಹಂಚಿಕೊಂಡಿದ್ದಾರೆ.