ಬಾಗಲಕೋಟೆ: ಮುಸ್ಲಿಮರನ್ನು ಚುನಾವಣೆಯಲ್ಲಿ ಸೋಲುವುದಿಲ್ಲ ಅವರನ್ನು ಸೋಲಿಸಲಾಗುತ್ತದೆ. ರಾಜ್ಯದಲ್ಲಿ ಒಂದು ಕೋಟಿ ಮುಸ್ಲಿಂ ಜನಸಂಖ್ಯೆ ಇದ್ದರೂ ಕೇವಲ 10 ಶಾಸಕರಿದ್ದಾರೆ ಅಷ್ಟೇ ಸಾಕಾ? ದೇಶದ ಮೂವತ್ತು ಕೋಟಿ ಮುಸ್ಲಿಮರನ್ನ ಬಿಟ್ಟು ಭವಿಷ್ಯದ ಭಾರತ ನಿರ್ಮಾಣ ಸಾಧ್ಯವಿಲ್ಲ ಎಂದು ಬಾಗಲಕೋಟೆಯ ಜಮಖಂಡಿಯಲ್ಲಿ ಮಹೇಶ್ವರಾನಂದ ಸ್ವಾಮೀಜಿ ಹೇಳಿದ್ದಾರೆ. ಕರ್ನಾಟಕದಲ್ಲಿ ಲಿಂಗಾಯತರು ಕೇವಲ 66 ಲಕ್ಷ ಜನರಿದ್ದರೂ ಆ ಸಮುದಾಯದ 59 ಮಂದಿ ಶಾಸಕರಿದ್ದಾರೆ. ಒಕ್ಕಲಿಗರ ಸಂಖ್ಯೆ 60 ಲಕ್ಷ ಇದ್ದರೂ 46 ಜನ ಎಂಎಲ್ಎಗಳಿದ್ದಾರೆ. 15 ಲಕ್ಷ ಇರುವ ಬ್ರಾಹ್ಮಣ ಸಮುದಾಯದ 10 ಶಾಸಕರಿದ್ದಾರೆ. ಆದರೆ 1 ಕೋಟಿ ಜನಸಂಖ್ಯೆ ಇರುವ ಮುಸ್ಲಿಂ ಸಮುದಾಯದವರಿಗೆ ಚುನಾವಣೆಗಳಲ್ಲಿ ಕೇವಲ 15 ಜನರಿಗೆ ಕಾಂಗ್ರೆಸ್ ಪಕ್ಷ ಟಿಕೆಟ್ ಕೊಡುತ್ತೆ. ಅದರಲ್ಲಿ 9 ಮಂದಿ ಗೆಲ್ಲುತ್ತಾರೆ 6 ಜನ ಸೋಲುತ್ತಾರೆ. ಆದರೆ ಮುಂದಿನ ಬಾರಿ ಮುಸ್ಲಿಂ ಸಮುದಾಯದ 30 ಜನ ಶಾಸಕರಾಗಬೇಕು ಎಂದು ಸ್ವಾಮೀಜಿ ಕರೆ ನೀಡಿದ್ದಾರೆ.