ಡಿಸಿಎಂ ಡಿಕೆ ಶಿವಕುಮಾರ್ 
ರಾಜ್ಯ

ಬೆಂಗಳೂರು: 'ಅವರೆಬೇಳೆ ಮೇಳ'ಕ್ಕೆ ಚಾಲನೆ, DCM ಡಿಕೆ ಶಿವಕುಮಾರ್ ಏನಂದ್ರು?

ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮಾತನಾಡಿ, ಬೆಂಗಳೂರು ಹಾಗೂ ಸುತ್ತಮುತ್ತಲಿನ ಅವರೆಕಾಯಿ ಸೊಗಡು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಆಕರ್ಷಣೆಯಾಗಬೇಕು

ಬೆಂಗಳೂರು: ನಗರದ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಶನಿವಾರ 26ನೇ ಅವರೆ ಬೇಳೆ ಮೇಳಕ್ಕೆ ಚಾಲನೆ ದೊರೆಯಿತು. ಮಧ್ಯಾಹ್ನದ ಬಿಸಿ ನಡುವೆಯೂ ನೂರಾರು ಜನರು ಅವರೆ ಬೇಳೆಯಿಂದ ತಯಾರಿಸಿದ ವಿವಿಧ ಭಕ್ಷ್ಯಗಳನ್ನು ಸವಿದರು. ಅವರೆ ಬೇಳೆ ದೋಸೆಯು ಪ್ರೇಕ್ಷಕರ ನೆಚ್ಚಿನ ಮೆನು ಆಗಿತ್ತು. ದಿನವಿಡೀ ಉದ್ದನೆಯ ಸಾಲಿನಲ್ಲಿ ನಿಂತು ಇದಕ್ಕೆ ಸವಿದರು. ಅಲ್ಲದೇ ಅವರೆಬೇಳೆ ಕುನಾಫ ಮತ್ತು ಮೊಮೊಸ್‌ನಂತಹ ಕೆಲವು ಪ್ರಯೋಗಗಳು ಪ್ರವಾಸಿಗರ ಗಮನವನ್ನು ಸೆಳೆದವು.

ಮಾಗಡಿ ತಾಲೂಕಿನ ಬಸಂತಪಾಳ್ಯದ ರೈತ ಬಿ ಆರ್ ವಾಸುದೇವ್ ಮೂರ್ತಿ ಅವರಿಗೆ ಅವರೆಬೇಳೆ ಸಾರು ಜೊತೆ ರಾಗಿ ಮುದ್ದೆ ಅಚ್ಚುಮೆಚ್ಚಿನದಾಗಿದೆ. ಇಲ್ಲಿ ಅವರೆ ಬೇಳೆಯಿಂದ ಮಾಡಿದ ನೂರಾರು ಖಾದ್ಯಗಳಿವೆ, ಆದರೆ ನೀವು ಸಾರು ಮಾಡಿ ಮತ್ತು ಅದನ್ನು ತಿಂದಾಗ ಮಾತ್ರ ಅವರೆ ಬೇಳೆಯ ನಿಜವಾದ ರುಚಿಯನ್ನು ಅನುಭವಿಸಬಹುದು ಎಂದರು.

ಅವರೆ ಬೇಳೆ ಮೇಳದಲ್ಲಿ ಪಾಲ್ಗೊಂಡು ಮಾತನಾಡಿದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಬೆಂಗಳೂರು ಹಾಗೂ ಸುತ್ತಮುತ್ತಲಿನ ಅವರೆಕಾಯಿ ಸೊಗಡು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಆಕರ್ಷಣೆಯಾಗಬೇಕು. ಅದಕ್ಕೆ ಇಂತಹ ಮೇಳಗಳು ನೆರವಾಗಲಿ. ಇದಕ್ಕೆ ಪ್ರೋತ್ಸಾಹ ನೀಡುವುದು ನಮ್ಮ ಕರ್ತವ್ಯ ಎಂದರು.

ಮಾಗಡಿ ಅವರೆಕಾಯಿ ತನ್ನ ಸೊಗಡಿಗೆ ಬಹಳ ಪ್ರಸಿದ್ಧಿ. ಜಿಕೆವಿಕೆಯಲ್ಲಿ ನೋಡಿದೆ. ಅವರೆಕಾಯಿ ಬಿಡಿಸುವ ಯಂತ್ರವನ್ನು ಕೃಷಿ ವಿಶ್ವವಿದ್ಯಾಲಯದವರು ಕಂಡು ಹಿಡಿದಿದ್ದಾರೆ ಎಂದು ತಿಳಿಸಿದರು.

“ಈ ಮೇಳದಲ್ಲಿ 5-6 ಲಕ್ಷ ಜನ ಭಾಗವಹಿಸುತ್ತಾರೆ ಐಸ್ ಕ್ರೀಮ್ ನಿಂದ ಹಿಡಿದು ದೋಸೆ, ಚಿತ್ರಾನ್ನಾ, ಹೀಗೆ ಬಗೆಬಗೆಯ ಪದಾರ್ಥ ಮಾಡುತ್ತಿದ್ದಾರೆ. ನಾನು ಇಲ್ಲಿ ಪಾನಿಪುರಿ ರುಚಿ ಸವಿದೆ. ಕಳೆದ ವರ್ಷ ಬಂದಾಗ ದೋಸೆ ಸವಿದಿದ್ದೆ. ನನಗೂ ಅವರೆಕಾಳು ಎಂದರೆ ಬಹಳ ಇಷ್ಟ ಎಂದರು.

ನನಗೆ ಅವರೆಕಾಳು ಬಹಳ ಇಷ್ಟವೆಂದು ನನ್ನ ಸ್ನೇಹಿತ ಸಿಹಿಕಹಿ ಚಂದ್ರು ಕಾರ್ಯಕ್ರಮವೊಂದರಲ್ಲಿ ಅವರೆಕಾಳು ಉಪ್ಪಿಟ್ಟು ಮಾಡಿಕೊಟ್ಟಿದ್ದ. ಬೆಂಗಳೂರಿನ ನಾಗರೀಕರಿಗೆ, ರೈತರಿಗೆ ಅನುಕೂಲವಾಗಬೇಕು. ಉದ್ಯೋಗ ಸೃಷ್ಟಿಯಾಗಬೇಕು ನಮ್ಮ ಸಂಸ್ಕೃತಿ ಇತಿಹಾಸ, ನಮ್ಮ ರೈತರ ಬೆಳೆಗೆ ಉತ್ತಮ ಬೆಳೆ ಸಿಗಬೇಕು. ಬೆಂಗಳೂರಿನ ಸುತ್ತಮುತ್ತಲ ಭಾಗದಲ್ಲಿ ಮಾತ್ರ ಇದನ್ನು ಬೆಳೆಯಲಾಗುತ್ತದೆ. ಹೀಗಾಗಿ ಇದು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳುವಂತಾಗಬೇಕು ಎಂದು ತಿಳಿಸಿದರು.

ಕರ್ನಾಟಕದ ಈ ಖಾದ್ಯಗಳು, ರುಚಿ ಎಲ್ಲರಿಗೂ ತಲುಪುವಂತಾಗಬೇಕು. ರಾಜ್ಯದ ರೈತರಿಗೆ ಒಳ್ಳೆಯದಾಗಬೇಕು. ವಾಸವಿ ಸಂಸ್ಥೆಯವರು 26 ವರ್ಷಗಳಿಂದ ಈ ಕಾರ್ಯಕ್ರಮ ಮಾಡಿಕೊಂಡು ಬಂದಿದ್ದಾರೆ. ನಾಗರೀಕರು ಬಂದು ಇಲ್ಲಿನ ರುಚಿ ಸವಿಯಲಿ. 2026ರ ಹೊಸ ವರ್ಷ ನಿಮ್ಮ ಬದುಕಿನಲ್ಲಿ ಹೆಚ್ಚಿನ ಶಕ್ತಿ ತುಂಬಲಿ ಎಂದು ಶುಭ ಹಾರೈಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬೆಂಗಳೂರು: ಕೋಗಿಲು ಬಳಿ ಒತ್ತುವರಿ ತೆರವು, ಕಾಂಗ್ರೆಸ್‌ನಲ್ಲೇ ಅಸಮಾಧಾನ! ಸಿದ್ದರಾಮಯ್ಯಗೆ ಹೈಕಮಾಂಡ್ ನೀಡಿದ ಸಲಹೆ ಏನು?

"Best Action Ever": ಈವರೆಗೂ...ಎಂದೂ ನೋಡಿರದ 'ವಿಚಿತ್ರದ ಬೌಲಿಂಗ್, ' ಸ್ಪಿನ್ನರ್ ಮೋಡಿಗೆ ನೆಟ್ಟಿಗರು ಫಿದಾ! Video ವೈರಲ್

ಜನವರಿಯಲ್ಲಿ ರಾಹುಲ್ ಗಾಂಧಿ ಭೇಟಿಗೆ ಸಿದ್ದು ಮುಂದು: ಸಂಪುಟ ಪುನರ್‌ರಚನೆಗೆ ಅನುಮೋದನೆ ಕೋರುವ ಸಾಧ್ಯತೆ..!

ಹೊಸ ವರ್ಷಕ್ಕೆ ಬೆಂಗಳೂರಿನಲ್ಲೇ ತಯಾರಾಗ್ತಿತ್ತು ಡ್ರಗ್! 'ಮೂರು ಫ್ಯಾಕ್ಟರಿ' ಮೇಲೆ ದಾಳಿ, 55 ಕೋಟಿ ರೂ. ಮೌಲ್ಯದ ಮಾದಕ ದ್ರವ್ಯ ಪತ್ತೆ!

702 ಕಿ.ಮೀ! ಕನ್ಯಾಕುಮಾರಿಗೆ 'ಸೈಕಲ್ ಯಾತ್ರೆ' ಮಾಡಿದ MLA ಸುರೇಶ್ ಕುಮಾರ್!

SCROLL FOR NEXT