ಡ್ರಗ್ ಫ್ಯಾಕ್ಟರಿ ಮೇಲೆ ದಾಳಿ ನಡೆಸಿದ ಮಹಾರಾಷ್ಟ್ರ ಪೊಲೀಸರು 
ರಾಜ್ಯ

ಹೊಸ ವರ್ಷಕ್ಕೆ ಬೆಂಗಳೂರಿನಲ್ಲೇ ತಯಾರಾಗ್ತಿತ್ತು ಡ್ರಗ್! 'ಮೂರು ಫ್ಯಾಕ್ಟರಿ' ಮೇಲೆ ದಾಳಿ, 55 ಕೋಟಿ ರೂ. ಮೌಲ್ಯದ ಮಾದಕ ದ್ರವ್ಯ ಪತ್ತೆ!

ಬೆಂಗಳೂರಿನಲ್ಲಿ ಡ್ರಗ್ ತಯಾರಿಸಿ ಬೇರೆ ರಾಜ್ಯಗಳಿಗೆ ಸರಬರಾಜು‌ ಮಾಡಲಾಗುತಿತ್ತು ಎನ್ನಲಾಗಿದೆ. ಮಹಾರಾಷ್ಟ್ರ ಪೊಲೀಸರಿಂದ ಬೆಂಗಳೂರಿನಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.

ಬೆಂಗಳೂರು: ಹೊಸ ವರ್ಷಾಚರಣೆಗೆ ಇನ್ನೂ ಕೇವಲ ಮೂರು ದಿನಗಳು ಬಾಕಿಯಿರುವಂತೆಯೇ ಪೊಲೀಸರು ಮಹತ್ವದ ಕಾರ್ಯಾಚರಣೆಯಲ್ಲಿ ಮೂರು ಡ್ರಗ್ ಫ್ಯಾಕ್ಟರಿ ಪತ್ತೆ ಮಾಡಿದ್ದಾರೆ. 55 ಕೋಟಿ ರೂ. ಮೌಲ್ಯದ ಮಾದಕ ದ್ರವ್ಯವನ್ನು ವಶಕ್ಕೆ ಪಡೆದಿದ್ದಾರೆ.

ಬೆಂಗಳೂರಿನಲ್ಲಿ ಡ್ರಗ್ ತಯಾರಿಸಿ ಬೇರೆ ರಾಜ್ಯಗಳಿಗೆ ಸರಬರಾಜು‌ ಮಾಡಲಾಗುತಿತ್ತು ಎನ್ನಲಾಗಿದೆ. ಮಹಾರಾಷ್ಟ್ರ ಪೊಲೀಸರಿಂದ ಬೆಂಗಳೂರಿನಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ಮುಂಬೈನ ಪ್ರಕರಣವೊಂದರ ಬೆನ್ನಟ್ಟಿದ್ದ ಮಹಾರಾಷ್ಟ್ರದ ರಾಷ್ಟ್ರ ಮಾದಕ ದ್ರವ್ಯ ನಿಗ್ರಹ ದಳದಿಂದ ಈ ಕಾರ್ಯಾಚರಣೆ ನಡೆಸಲಾಗಿದೆ.

ಈ ಹಿಂದೆ 21ನೇ ತಾರೀಖು ಮುಂಬೈನಲ್ಲಿ ದಾಳಿ ನಡೆಸಿದ್ದ ಮಹಾರಾಷ್ಟ್ರ ಪೊಲೀಸರು ಒಂದೂವರೆ ಕೋಟಿ ಮೌಲ್ಯದ ಡ್ರಗ್ ವಶಕ್ಕೆ ಪಡೆದಿದ್ದರು.

ಈ ವೇಳೆ ಅಬ್ದುಲ್ ಖಾದಿರ್ ಶೇಕ್ ಎಂಬಾತನನ್ನು ಬಂಧಿಸಲಾಗಿದೆ. ಆತನ ವಿಚಾರಣೆ ವೇಳೆ ಕರ್ನಾಟಕ ಲಿಂಕ್ ಬಗ್ಗೆ ಮಾಹಿತಿ ಪತ್ತೆಯಾಗಿದೆ. ಈ ಜಾಡು ಹಿಡಿದು ಕರ್ನಾಟಕಕ್ಕೆ ಬಂದಿದ್ದ ಮಹಾರಾಷ್ಟ್ರ ಪೊಲೀಸರು ಮಹತ್ವದ ಕಾರ್ಯಾಚರಣೆ ನಡೆಸಿದ್ದಾರೆ.

ಬೆಂಗಳೂರಿನಲ್ಲಿ ಬೆಳಗಾವಿ ಮೂಲದ ಪ್ರಶಾಂತ್ ಯಲ್ಲಪ್ಪ ಪಾಟೀಲ್ ಎಂಬಾತನನ್ನು ಬಂಧಿಸಲಾಗಿದೆ. ಆರೋಪಿಯನ್ನ ವಿಚಾರಣೆ ನಡೆಸಿದಾಗ ಡ್ರಗ್ ತಯಾರಿಕಾ ಘಟಕಗಳು ಪತ್ತೆಯಾಗಿವೆ. ಮೂರು ಡ್ರಗ್ ತಯಾರಿಕಾ ಘಟಕಗಳು ಕಂಡುಬಂದಿವೆ. ಈ ಫ್ಯಾಕ್ಟರಿಗಳನ್ನು ಪ್ರಶಾಂತ್ ಯಲ್ಲಪ್ಪ ಪಾಟೀಲ್ ನಡೆಸ್ತಿದ್ದ ಎಂದು ತಿಳಿದುಬಂದಿದೆ.

55.88kg ಮೌಲ್ಯದ ಡ್ರಗ್ ವಶ: ಈ ಫ್ಯಾಕ್ಟರಿಗಳ ಮೇಲೆ ದಾಳಿ ನಡೆಸಿದ ಪೊಲೀಸರು, 55.88kg ಮೌಲ್ಯದ ಡ್ರಗ್ ವಶ ಪಡೆದಿದ್ದಾರೆ. ಡ್ರಗ್ ಮಾಫಿಯಾ ಹಣವನ್ನ ರಿಯಲ್ ಎಸ್ಟೇಟ್ ಗೆ ಹೂಡಿಕೆ ಮಾಡುತ್ತಿದ್ದರು ಎನ್ನಲಾಗಿದೆ.

ಬೆಂಗಳೂರು ಪೊಲೀಸರ ಕಣ್ತಪ್ಪಿಸಿ ಡ್ರಗ್ ತಯಾರಿ ಮಾಡ್ತಿದ್ದ ಆರೋಪಿಗಳು..ಸದ್ಯ ಈ ಬಗ್ಗೆ ಬೆಂಗಳೂರು ಪೊಲೀಸರಿಗೂ ಮಾಹಿತಿ ಸಿಕ್ಕಿದ್ದು, ಸದ್ಯ ಮಹಾರಾಷ್ಟ್ರ ಪೊಲೀಸರ ಮಾಹಿತಿ ಆಧರಿಸಿ ತನಿಖೆ ನಡೆಸುತ್ತಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

BJP-RSS ಶಿಸ್ತಿನ ಫೋಟೋ ಹಂಚಿಕೊಂಡು ದಿಗ್ವಿಜಯ್ ಸಿಂಗ್ ವಿವಾದ: ಶಶಿ ತರೂರ್ ಬೆಂಬಲ, ಆಂತರಿಕ ಸುಧಾರಣೆ ಅತ್ಯಗತ್ಯ ಎಂದ ಸಂಸದ

ರಾಜ್ಯ ಲೋಕಾಯುಕ್ತ ಇತಿಹಾಸದಲ್ಲಿ ಇದೇ ಮೊದಲು! ಭ್ರಷ್ಟಾಚಾರ ಆರೋಪ, ಒಂದೇ ತಾಲೂಕಿನ ಎಲ್ಲಾ '25 ಗ್ರಾಮ ಪಂಚಾಯಿತಿ'ಗಳ ವಿರುದ್ಧ ದೂರು ದಾಖಲು!

ಭಾರತ ತಂಡದಲ್ಲಿ ಆಡಿ 'ಬ್ಯಾನ್ ಶಿಕ್ಷೆ' ಗೊಳಗಾದ 'ಪಾಕಿಸ್ತಾನ'ದ ಖ್ಯಾತ ಅಂತಾರಾಷ್ಟ್ರೀಯ ಕಬ್ಬಡಿ ಆಟಗಾರ!

ಬೆಂಗಳೂರು: ಕೋಗಿಲು ಬಳಿ ಒತ್ತುವರಿ ತೆರವು, ಕಾಂಗ್ರೆಸ್‌ನಲ್ಲೇ ಅಸಮಾಧಾನ! ಸಿದ್ದರಾಮಯ್ಯಗೆ ಹೈಕಮಾಂಡ್ ನೀಡಿದ ಸಲಹೆ ಏನು?

"Best Action Ever": ಈವರೆಗೂ...ಎಂದೂ ನೋಡಿರದ 'ವಿಚಿತ್ರದ ಬೌಲಿಂಗ್, ' ಸ್ಪಿನ್ನರ್ ಮೋಡಿಗೆ ನೆಟ್ಟಿಗರು ಫಿದಾ! Video ವೈರಲ್

SCROLL FOR NEXT