ಬೆಂಗಳೂರು: ಕ್ರಿಸ್ಮಸ್ ಆಚರಣೆ ವೇಳೆ ನಗರದ Phoenix ಮಾರ್ಕೆಟ್ ಸಿಟಿ ಮಾಲ್ ನಲ್ಲಿ ಮಹಿಳೆಯೊಬ್ಬರಿಗೆ ಕಿರುಕುಳದ ಆರೋಪ ಕೇಳಿಬಂದಿತ್ತು.
ಪೊಲೀಸರು ಶಂಕಿತನನ್ನು ಪತ್ತೆ ಹಚ್ಚಿದ್ದು, 27 ವರ್ಷದ ಮನುಜ್ ಚಂದ್ (27) ಎಂದು ಗುರುತಿಸಲಾಗಿದೆ. ಆತನನ್ನು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
27ರ ವರ್ಷದ ಮಹಿಳೆ ಮಹದೇವಪುರದ ಶಾಪಿಂಗ್ ಮಾಲ್‌ನಲ್ಲಿ ಕ್ರಿಸ್ಮಸ್ ಸಡಗರದಲ್ಲಿದ್ದಾಗ ರಾತ್ರಿ 9.30ರ ಸುಮಾರಿಗೆ ಹಿಂದಿನಿಂದ ಬಂದ ಚಂದ್ ಆಕೆಯನ್ನು ಅನುಚಿತವಾಗಿ ಸ್ಪರ್ಶಿಸಿದ್ದು, ಭದ್ರತಾ ಸಿಬ್ಬಂದಿ ಬರುವಷ್ಟರಲ್ಲಿ ಪರಾರಿಯಾಗಿದ್ದ. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಮಹಿಳೆ ನಂತರ ಮಹದೇವಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಬೆಂಗಳೂರಿನಲ್ಲಿ ಸ್ವಿಗ್ಗಿ ಡೆಲಿವರಿ ಎಕ್ಸಿಕ್ಯೂಟಿವ್ ಆಗಿ ಕೆಲಸ ಮಾಡುತ್ತಿರುವ ಗುವಾಹಟಿ ಮೂಲದ ಚಾಂದ್ ನ ಪತ್ತೆಗಾಗಿ ಮಾಲ್ ಮತ್ತು ಸಮೀಪದಲ್ಲಿ ಪ್ರದೇಶಗಳಲ್ಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲಿಸಿದ್ದಾರೆ. ಸಂಭ್ರಮಾಚರಣೆ ನಡುವೆ ಈ ಘಟನೆ ನಡೆದಿರುವುದಾಗಿ ಮಹಿಳೆಯ ಸ್ನೇಹಿತರೊಬ್ಬರು ಹೇಳಿದ್ದರು.
"ಕ್ರಿಸ್‌ಮಸ್ ಆಚರಿಸಲು ನಾವು ಮೂವರು ಮಾಲ್‌ಗೆ ಹೋಗಿದ್ದೆವು. ಮಾಲ್ ನಿಂದಲೇ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸಂಗೀತ ಕಾರ್ಯಕ್ರಮ ನಡೆಯುತ್ತಿರುವಾಗ ಹಿಂದಿನಿಂದ ಬಂದ ಚಾಂದ್, ನನ್ನ ಸ್ನೇಹಿತೆಯನ್ನು ಅನುಚಿತವಾಗಿ ಸ್ಪರ್ಶಿಸಿದ್ದಾನೆ.
ಕೂಡಲೇ ಆಕೆ ಜೋರಾಗಿ ಕೂಗಿಕೊಂಡಿದ್ದು, ಸ್ನೇಹಿತರೊಬ್ಬರು ಶಂಕಿತನನ್ನು ಹಿಡಿದು ಕಪಾಳಮೋಕ್ಷ ಮಾಡಿದ್ದಾರೆ. ಆದರೆ ಭದ್ರತಾ ಸಿಬ್ಬಂದಿ ಬರುವಷ್ಟರಲ್ಲಿ ನಾಲ್ವರು ಆತನ ಬೆಂಬಲಕ್ಕೆ ಬಂದಿದ್ದರಿಂದ ಆತ ತಪ್ಪಿಸಿಕೊಂಡಿದ್ದ. ಭದ್ರತಾ ಸಿಬ್ಬಂದಿಗೆ ತಿಳಿಸಿದೇವು. ಆದರೆ ನಮ್ಮ ಪ್ರಯತ್ನಗಳ ಹೊರತಾಗಿಯೂ ಆತ ಸ್ಥಳದಿಂದ ಪರಾರಿಯಾಗಿದ್ದ ಎಂದು ಅವರು ತಿಳಿಸಿದರು.