ಹಂಪಿಯಲ್ಲಿ ಪ್ರವಾಸಿಗರು 
ರಾಜ್ಯ

ಒಂದೇ ವಾರದಲ್ಲಿ ಹಂಪಿಗೆ 4 ಲಕ್ಷ ಪ್ರವಾಸಿಗರ ಆಗಮನ: ಸೂಕ್ತ ವಸತಿ ಸೌಲಭ್ಯಗಳಿಲ್ಲದೆ ಹಲವರ ಪರದಾಟ

ಕ್ರಿಸ್‌ಮಸ್ ರಜೆಯ ಹಿನ್ನೆಲೆಯಲ್ಲಿ, ಕರ್ನಾಟಕ ಮತ್ತು ನೆರೆಯ ರಾಜ್ಯಗಳಿಂದ ಶಾಲಾ ಕಾಲೇಜುಗಳು ಆಯೋಜಿಸಿದ ಶೈಕ್ಷಣಿಕ ಪ್ರವಾಸಗಳು ಈ ತೀವ್ರ ಏರಿಕೆಗೆ ಪ್ರಮುಖ ಕಾರಣ ಎಂದು ಹೇಳಲಾಗಿದೆ.

ಹಂಪಿ: ಯುನೆಸ್ಕೋ ವಿಶ್ವ ಪರಂಪರೆಯ ತಾಣವಾದ ಹಂಪಿಗೆ ಕಳೆದ ವಾರದಲ್ಲಿ ಪ್ರವಾಸಿಗರ ಸಂಖ್ಯೆಯಲ್ಲಿ ಏರಿಕೆ ಕಂಡಿದೆ. ಅಧಿಕೃತ ಅಂದಾಜಿನ ಪ್ರಕಾರ ಸುಮಾರು ನಾಲ್ಕರಿಂದ 5 ಲಕ್ಷ ಪ್ರವಾಸಿಗರು ಭೇಟಿ ನೀಡಿದ್ದಾರೆ.

ಕ್ರಿಸ್‌ಮಸ್ ರಜೆಯ ಹಿನ್ನೆಲೆಯಲ್ಲಿ, ಕರ್ನಾಟಕ ಮತ್ತು ನೆರೆಯ ರಾಜ್ಯಗಳಿಂದ ಶಾಲಾ ಕಾಲೇಜುಗಳು ಆಯೋಜಿಸಿದ ಶೈಕ್ಷಣಿಕ ಪ್ರವಾಸಗಳು ಈ ತೀವ್ರ ಏರಿಕೆಗೆ ಪ್ರಮುಖ ಕಾರಣ ಎಂದು ಹೇಳಲಾಗಿದೆ. ವಿಜಯನಗರ ಜಿಲ್ಲಾಡಳಿತದ ಅಧಿಕಾರಿಗಳು, ಇತ್ತೀಚಿನ ವರ್ಷಗಳಲ್ಲಿ ದಾಖಲಾದ ಅತಿ ಹೆಚ್ಚು ಪ್ರವಾಸಿಗರ ಸಂಖ್ಯೆ ಇದಾಗಿದ್ದು, ಸಾಂಸ್ಕೃತಿಕ ಮತ್ತು ಐತಿಹಾಸಿಕ ತಾಣವಾಗಿ ಹಂಪಿಯ ಜನಪ್ರಿಯತೆ ಹೆಚ್ಚುತ್ತಿದೆ ಎಂದು ಹೇಳಿದ್ದಾರೆ.

ಶಿಲಾ ರಥ, ವಿರೂಪಾಕ್ಷ ದೇವಸ್ಥಾನ ಮತ್ತು ಇತರ ಪ್ರಸಿದ್ಧ ಸ್ಮಾರಕಗಳಂತಹ ಪ್ರವಾಸಿ ತಾಣಗಳು ವಾರವಿಡೀ ಜನದಟ್ಟಣೆಯಿಂದ ಕೂಡಿದ್ದವು, ಪ್ರಮುಖ ಸ್ಮಾರಕಗಳು ಮತ್ತು ವೀಕ್ಷಣಾ ಕೇಂದ್ರಗಳಲ್ಲಿ ಉದ್ದನೆಯ ಸರತಿ ಸಾಲುಗಳು ಕಂಡುಬಂದವು.

ಈ ಏರಿಕೆಯು ಸ್ಥಳೀಯ ವ್ಯಾಪಾರಿಗಳು, ಮಾರ್ಗದರ್ಶಕರು, ಸಾರಿಗೆ ನಿರ್ವಾಹಕರು ಮತ್ತು ಸಣ್ಣ ಆತಿಥ್ಯ ವ್ಯವಹಾರಗಳಿಗೆ ಹರ್ಷ ತಂದಿದೆ. ಬೀದಿ ವ್ಯಾಪಾರಿಗಳು, ಮಾರಾಟಗಾರರು ಮತ್ತು ತಿನಿಸುಗಳು ಮಾರಾಟದಲ್ಲಿ ಗಮನಾರ್ಹ ಏರಿಕೆಯಾಗಿದೆ, ಆಟೋ-ರಿಕ್ಷಾ ಚಾಲಕರು ಮತ್ತು ಪ್ರವಾಸ ಮಾರ್ಗದರ್ಶಕರು ವಾರದ ಬಹುಪಾಲು ಸಂಪೂರ್ಣವಾಗಿ ಬುಕ್ ಆಗಿದ್ದಾರೆ ಎಂದು ತಿಳಿದು ಬಂದಿದೆ.

"ಹಂಪಿ ಸುಂದರವಾಗಿದೆ, ಆದರೆ ಸೌಲಭ್ಯಗಳು ಇಲ್ಲಿಗೆ ಬರುವ ಜನರ ಸಂಖ್ಯೆಗೆ ಹೊಂದಿಕೆಯಾಗುವುದಿಲ್ಲ" ಎಂದು ಹೈದರಾಬಾದ್‌ನ ಪ್ರವಾಸಿಗರೊಬ್ಬರು ಹೇಳಿದರು, ಅವರು ಕೊಠಡಿಗಳ ಲಭ್ಯತೆಯಿಲ್ಲದ ಕಾರಣ ಸಮುದಾಯ ಭವನದಲ್ಲಿ ತಂಗಿದ್ದರು.

ಭವಿಷ್ಯದಲ್ಲಿ ಪ್ರವಾಸಿಗರ ಸಂಖ್ಯೆ ಏರಿಕೆಯಾಗುವುದರಿಂದ ಅದಕ್ಕೆ ಬೇಕಾದ ಅನುಕೂಲ ಮಾಡಿಕೊಡಲು ಸರ್ಕಾರವು ಪೂರ್ವಭಾವಿ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಸ್ಥಳೀಯ ಪಾಲುದಾರರು ಮತ್ತು ಪ್ರವಾಸೋದ್ಯಮ ತಜ್ಞರು ಒತ್ತಾಯಿಸಿದ್ದಾರೆ. ಬಜೆಟ್ ವಾಸ್ತವ್ಯದ ಮೂಲಕ ವಸತಿ ಸಾಮರ್ಥ್ಯವನ್ನು ಹೆಚ್ಚಿಸುವುದು ಮತ್ತು ಸಾರ್ವಜನಿಕ ಸೌಲಭ್ಯಗಳನ್ನು ಸುಧಾರಿಸುವುದು ಸಲಹೆಗಳಲ್ಲಿ ಸೇರಿವೆ. ತಾಣದ ಪರಂಪರೆಯ ಮೌಲ್ಯಕ್ಕೆ ಧಕ್ಕೆಯಾಗದಂತೆ ಸೌಲಭ್ಯಗಳನ್ನು ಹೆಚ್ಚಿಸಲು ಮತ್ತು ಸುಸ್ಥಿರ ಪ್ರವಾಸೋದ್ಯಮವಕ್ಕಾಗಿ ಯೋಜನೆಗಳನ್ನು ಚರ್ಚಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕೋಗಿಲು ಅಕ್ರಮ ನಿವಾಸಿಗಳ ಪೌರತ್ವ ಪರಿಶೀಲಿಸಿ, ಎನ್‌ಐಎ ತನಿಖೆಗೆ ವಹಿಸಿ: ಆರ್‌. ಅಶೋಕ ಆಗ್ರಹ

ಮುಷ್ಕರದ ಬಿಸಿ, ಝೊಮ್ಯಾಟೊ, ಸ್ವಿಗ್ಗಿ ಸಿಬ್ಬಂದಿಗೆ ಹೆಚ್ಚಿನ ವೇತನ: ಹೊಸ ವರ್ಷದ ಮುನ್ನಾದಿನ ಗಿಗ್ ಕಾರ್ಮಿಕರಿಗೆ ಸಿಹಿಸುದ್ದಿ!

2026 ಹೊಸ ವರ್ಷವನ್ನು ಅದ್ಧೂರಿಯಾಗಿ ಬರಮಾಡಿಕೊಂಡ ಜಗತ್ತಿನ 2ನೇ ರಾಷ್ಟ್ರ ನ್ಯೂಜಿಲೆಂಡ್, ಮೊದಲು ಯಾವುದು?

ಢಾಕಾ: ಖಲೀದಾ ಜಿಯಾ ಅಂತ್ಯಕ್ರಿಯೆಯಲ್ಲಿ ಜೈಶಂಕರ್ ಭಾಗಿ; ಕುಟುಂಬ ಭೇಟಿಯಾಗಿ ಸಾಂತ್ವನ

ಹೊಸ ವರ್ಷಾಚರಣೆಗೆ ಬೆಂಗಳೂರು ಸಜ್ಜು: ಎಂ.ಜಿ. ರಸ್ತೆ, ಬ್ರಿಗೇಡ್ ರಸ್ತೆಗಳಲ್ಲಿ ಬಿಗಿ ಬಂದೋಬಸ್ತ್, ಫ್ಲೈಓವರ್'ಗಳು ಬಂದ್

SCROLL FOR NEXT