Neena gupta
ನೀನಾ ಗುಪ್ತಾ

'ಭಾರತ ಬದಲಾಗಿಲ್ಲ: ಪುರುಷರಿಗೆ ಇನ್ನೂ 'Virgin Wife' ಬೇಕು; ಕನ್ಯತ್ವವು ಮಹತ್ವದ ಅಂಶವಾಗಿದೆಯೇ? ಮಹಿಳೆ ತನ್ನ ಮಾವನ ಪಾದ ಮುಟ್ಟಿ ನಮಸ್ಕರಿಸ್ತಾಳೆ!

ಈಗ ಏನು ಬದಲಾಗಿದೆ ಹೇಳಿ? ನೀವು ಭಾರತದ ಬಗ್ಗೆ ಮಾತನಾಡುತ್ತಿದ್ದೀರಾ? ಜನರು ಮುಕ್ತವಾಗಿ ಮಾತನಾಡುತ್ತಾರೆ, ಮುಕ್ತವಾಗಿ ಎಲ್ಲಿ ಬದುಕುತ್ತಿದ್ದಾರೆ? ನಮ್ಮ ದೇಶದಲ್ಲಿ ಬಹಳಷ್ಟು ವಿಷಯಗಳು ಬದಲಾಗಿಲ್ಲ.
Published on

ನವದೆಹಲಿ: ಭಾರತೀಯ ಮನೆಗಳಲ್ಲಿ ಮಹಿಳೆಯರು ಎದುರಿಸುತ್ತಿರುವ ವಾಸ್ತವಗಳ ಬಗ್ಗೆ ಹಿರಿಯ ನಟಿ ನೀನಾ ಗುಪ್ತಾ ಮತ್ತೊಮ್ಮೆ ಸ್ಪಷ್ಟವಾಗಿ ಮಾತನಾಡಿದ್ದಾರೆ, ಸಮಾಜವು ಗಮನಾರ್ಹವಾಗಿ ಪ್ರಗತಿ ಸಾಧಿಸಿದೆ ಎಂಬ ಕಲ್ಪನೆಯನ್ನು ಅವರು ವಿರೋಧಿಸಿದ್ದಾರೆ.

ಶುಭಂಕರ್ ಮಿಶ್ರಾ ಅವರೊಂದಿಗಿನ ಇತ್ತೀಚಿನ ಸಂದರ್ಶನದಲ್ಲಿ ಮಾತನಾಡಿರುವ ಅವರು, ಮದುವೆಯ ನಂತರ ಪಿತೃಪ್ರಧಾನ ಕುಟುಂಬದಲ್ಲಿ ಕಠಿಣ ನಿಯಮಗಳು ಮಹಿಳೆಯರ ಜೀವನವನ್ನು ಹೇಗೆ ರೂಪಿಸುತ್ತವೆ ಎಂಬುದರ ಕುರಿತು ಮಾಹಿತಿ ನೀಡಿದ್ದಾರೆ.

ಇಂಗ್ಲಿಷ್ ಮಾತನಾಡುವ ವಲಯಗಳು ಹೆಚ್ಚು ಉದಾರವಾದಿಗಳಾಗಿ ಕಂಡುಬಂದರೂ, ಅವು ದೇಶದ ದೊಡ್ಡ ವಾಸ್ತವವನ್ನು ಪ್ರತಿನಿಧಿಸುವುದಿಲ್ಲ ಎಂದು ಅವರು ಹೇಳಿದ್ದಾರೆ. ಭಾರತೀಯ ಸಮಾಜದಲ್ಲಿ ವಧುವಿನ ಕನ್ಯತ್ವದ ಬಗ್ಗೆ ಮುಂದುವರಿದಿರುವ ನಿರೀಕ್ಷೆ ಬಗ್ಗೆ ಉಲ್ಲೇಖಿಸಿದ ಅವರು, ಪುರುಷರಿಗೆ ಕನ್ಯೆ ಹೆಂಡತಿ ಬೇಕು. ಅಂದರೆ ಇಂದಿಗೂ ಕನ್ಯತ್ವವು ಅಂತಹ ಮಹತ್ವದ ಅಂಶವಾಗಿ ಉಳಿದಿದೆಯೇ? ಭಾರತದಲ್ಲಿ ವಿಷಯಗಳು ಬದಲಾಗಿವೆ ಎಂಬ ಕಲ್ಪನೆ ಬಗ್ಗೆ ನೀನಾ ಪ್ರಶ್ನಿಸಿದ್ದಾರೆ.

ಈಗ ಏನು ಬದಲಾಗಿದೆ ಹೇಳಿ? ನೀವು ಭಾರತದ ಬಗ್ಗೆ ಮಾತನಾಡುತ್ತಿದ್ದೀರಾ? ಜನರು ಮುಕ್ತವಾಗಿ ಮಾತನಾಡುತ್ತಾರೆ, ಮುಕ್ತವಾಗಿ ಎಲ್ಲಿ ಬದುಕುತ್ತಿದ್ದಾರೆ? ನಮ್ಮ ದೇಶದಲ್ಲಿ ಬಹಳಷ್ಟು ವಿಷಯಗಳು ಬದಲಾಗಿಲ್ಲ. ಮಹಿಳೆಯರು ಇನ್ನೂ ತಮ್ಮ ತಲೆಯ ಮೇಲೆ ಸೆರಗು ಹಾಕಿಕೊಂಡ ನಂತರ ತಮ್ಮ ಮಾವನ ಪಾದಗಳನ್ನು ಮುಟ್ಟುತ್ತಾರೆ. ನೀವು ಮತ್ತು ನಾನು ಅಲ್ಪಸಂಖ್ಯಾತರು. ಚೆನ್ನಾಗಿ ಉಡುಗೆ ತೊಡುವ ಮತ್ತು ಚೆನ್ನಾಗಿ ಮಾತನಾಡುವ ನಮ್ಮಂತಹ ಜನರು ಭಾರತವಲ್ಲ ಎಂದಿದ್ದಾರೆ.

Neena gupta
ಬಾಲಿವುಡ್ ನಟಿ ಖುಷಿ ಮುಖರ್ಜಿ ಯೂಟರ್ನ್; ಸೂರ್ಯಕುಮಾರ್ ಯಾದವ್ ಜೊತೆಗಿನ 'ಸಂಬಂಧ' ಬಗ್ಗೆ ಸ್ಪಷ್ಟನೆ!

ಈ ಅಂಶವನ್ನು ವಿವರಿಸಲನೀನಾ ತಮ್ಮದೆ ಕುಟುಂಬದೊಳಗಿನ ಉದಾಹರಣೆಗಳನ್ನು ಹಂಚಿಕೊಂಡರು. ನಾನು ನಿಮಗೆ ಒಂದು ಉದಾಹರಣೆ ನೀಡುತ್ತೇನೆ. ನನ್ನ ತಂದೆಯ ಕಡೆಯ ಸಂಬಂಧಿಯೊಬ್ಬರು ಮುಂಬೈನಲ್ಲಿ ದೊಡ್ಡ ಹಣಕಾಸು ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯನ್ನು ವಿವಾಹವಾದರು.

ಒಮ್ಮೆ ನನ್ನ ತಂದೆ ಹುಡುಗ, ಹುಡುಗಿ ಮತ್ತು ಅವರ ಕುಟುಂಬದೊಂದಿಗೆ ಮಾತನಾಡಲು ತಮ್ಮ ಮನೆಗೆ ಕರೆಸಿಕೊಂಡರು, ಏಕೆಂದರೆ ಹುಡುಗಿ ಮುಂಬೈನಲ್ಲಿರುವ ವ್ಯಕ್ತಿ ಮತ್ತು ಅವರ ಕುಟುಂಬದೊಂದಿಗೆ ವಾಸಿಸಲು ನಿರಾಕರಿಸಿದ್ದಳು. ಹುಡುಗಿ ಸಾಯಿಬಾಬಾ ಭಕ್ತೆಯಾಗಿದ್ದಳು, ಆದ್ದರಿಂದ ಅವಳು ಅವರ ಚಿತ್ರವನ್ನು ತಮ್ಮ ಕೋಣೆಯಲ್ಲಿ ಇಟ್ಟಳು, ಆದರೆ ಅವಳ ಅತ್ತೆ ಆ ಫೋಟೋವನ್ನು ಕೋಣೆಯಲ್ಲಿ ಇಡಲು ಬಿಡಲಿಲ್ಲ ಮತ್ತು ಅವರು ಪೂಜಿಸುವ ಗುರುವಿನ ಚಿತ್ರವನ್ನು ಹಾಕಲು ಹೇಳಿದರು ಎಂಬ ವಿಷಯವನ್ನು ನೀನಾ ಹಂಚಿಕೊಂಡಿದ್ದಾರೆ.

"ನಾನು ನಿಮಗೆ ಇನ್ನೊಂದು ಉದಾಹರಣೆ ನೀಡುತ್ತೇನೆ. ನನ್ನ ಸೋದರ ಸಂಬಂಧಿಗೆ ಅವರ ಅತ್ತೆ, ತನ್ನ ಕುಟುಂಬದ ಫೋಟೋವನ್ನು ಹಾಸಿಗೆಯ ಪಕ್ಕದ ಮೇಜಿನ ಮೇಲೆ ಇಡಲು ಬಿಡಲಿಲ್ಲ. ದೇಶದಲ್ಲಿ ಮಹಿಳೆಯರ ಸ್ಥಿತಿಯನ್ನು ಬದಲಾಯಿಸುವ ವಿಷಯಕ್ಕೆ ಬಂದಾಗ ನಾವು ಇನ್ನೂ ಬಹಳ ದೂರ ಕ್ರಮಿಸಬೇಕಾಗಿದೆ ಎಂದಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Advertisement

X
Kannada Prabha
www.kannadaprabha.com