ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ  
ರಾಜ್ಯ

KIA: 3 ಟರ್ಮಿನಲ್ ಮೂಲಕ ವಾರ್ಷಿಕ 115 ಮಿಲಿಯನ್ ಪ್ರಯಾಣಿಕರ ಸೆಳೆಯುವ ನಿರೀಕ್ಷೆ; ಆರ್ಥಿಕತೆಗೆ ಒತ್ತು

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ 75 ದೇಶೀಯ ತಾಣಗಳು ಮತ್ತು 30 ಅಂತಾರಾಷ್ಟ್ರೀಯ ತಾಣಗಳಿಗೆ ಸಂಪರ್ಕ ಹೊಂದಿದೆ.

ಬೆಂಗಳೂರು: ರಾಜಧಾನಿ ಬೆಂಗಳೂರಿನ ಸುತ್ತಮುತ್ತ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪನೆಗೆ ಸರ್ಕಾರ ಮುಂದಾಗಿರುವ ಸಂದರ್ಭದಲ್ಲಿ, ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ (BIAL) ಟರ್ಮಿನಲ್ 1 ನ್ನು ನವೀಕರಿಸಿ, ಟರ್ಮಿನಲ್ 2ನ್ನು ವಿಸ್ತರಿಸುವ ಮೂಲಕ ಮತ್ತು ಪ್ರಸ್ತಾವಿತ ಟರ್ಮಿನಲ್ 3ನ್ನು ಸ್ಥಾಪಿಸುವ ಮೂಲಕ 115 ಮಿಲಿಯನ್ ಪ್ರಯಾಣಿಕರನ್ನು ಆಕರ್ಷಿಸಲು ಮುಂದಾಗಿದೆ.

ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ(BIAL)ದ ಅಂಗಸಂಸ್ಥೆಯಾದ ಬೆಂಗಳೂರು ವಿಮಾನ ನಿಲ್ದಾಣ ನಗರ ಲಿಮಿಟೆಡ್ (BACL) ನ ಕಾರ್ಯನಿರ್ವಾಹಕ ನಿರ್ದೇಶಕ ಮತ್ತು ಸಿಇಒ ರಾವ್ ಮುನುಕುಟ್ಲ, ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2 ರ ಎರಡನೇ ಹಂತದ ವಿನ್ಯಾಸ ಕೆಲಸ ಆರಂಭವಾಗಿದ್ದು, ಈ ವರ್ಷಾಂತ್ಯ ವೇಳೆಗೆ ಕೆಲಸವನ್ನು ಪ್ರಾರಂಭಿಸುವ ಭರವಸೆಯಿದೆ ಎಂದರು.

ಬೆಂಗಳೂರಿನಲ್ಲಿ ನಡೆದ ಇನ್ವೆಸ್ಟ್ ಕರ್ನಾಟಕ - ಜಾಗತಿಕ ಹೂಡಿಕೆದಾರರ ಸಭೆಯ ಸಂದರ್ಭದಲ್ಲಿ ಮುನುಕುಟ್ಲ ಮಾತನಾಡಿ, 'ಭಾರತದ ಮುಂದಿನ ನಾವೀನ್ಯತೆ ಶಕ್ತಿಕೇಂದ್ರ: ಕ್ವಿನ್ ಸಿಟಿಗೆ ಕರ್ನಾಟಕದ ನೀಲನಕ್ಷೆ' ಕುರಿತು ನಡೆದ ಅಧಿವೇಶನದಲ್ಲಿ ಅವರು ಮಾತನಾಡುತ್ತಿದ್ದರು. 2022 ರಲ್ಲಿ, ಟರ್ಮಿಲ್ 2 ಕಾಮಗಾರಿ ಪೂರ್ಣಗೊಂಡು ಕಾರ್ಯಾಚರಣೆ ಆರಂಭವಾಗಿತ್ತು. ಪ್ರಸ್ತುತ, ನಾವು T2 ಅನ್ನು ವಿಸ್ತರಿಸುತ್ತಿದ್ದೇವೆ ಮತ್ತು ಈ ಹಂತ 2 ವಿಸ್ತರಣೆಯ ವಿನ್ಯಾಸ ನಡೆಯುತ್ತಿದೆ. ನಾವು ವರ್ಷದ ಅಂತ್ಯದ ವೇಳೆಗೆ ನಿರ್ಮಾಣವನ್ನು ಪ್ರಾರಂಭಿಸುತ್ತೇವೆ.” ಎಂದರು.

ಟರ್ಮಿನಲ್ 1ರ ನವೀಕರಣ ಕಾರ್ಯ ನಡೆಯುತ್ತಿದೆ. ಟರ್ಮಿನಲ್ 2ರ ವಿಸ್ತರಣೆಯೊಂದಿಗೆ ವಾರ್ಷಿಕವಾಗಿ 80 ಮಿಲಿಯನ್ ಪ್ರಯಾಣಿಕರಿಗೆ ಅವಕಾಶ ಕಲ್ಪಿಸುತ್ತದೆ ಎಂದು ಅವರು ಹೇಳಿದರು. ಈ ಹಣಕಾಸು ವರ್ಷದ ಅಂತ್ಯದ ವೇಳೆಗೆ, ನಾವು ಸುಮಾರು 42 ಮಿಲಿಯನ್ ಪ್ರಯಾಣಿಕರನ್ನು ವಿಮಾನ ನಿಲ್ದಾಣದಲ್ಲಿ ಹೊಂದಿಸುವ ಗುರಿ ತಲುಪುತ್ತೇವೆ. ಶೇಕಡಾ 13 ರಷ್ಟು ಸಂಯುಕ್ತ ವಾರ್ಷಿಕ ಬೆಳವಣಿಗೆಯ ದರದಲ್ಲಿ ಬೆಳೆಯುತ್ತಿದ್ದಾರೆ. ಟರ್ಮಿನಲ್ 3ನ್ನು ಪ್ರಾರಂಭಿಸಿದ ನಂತರ, ಹೆಚ್ಚುವರಿಯಾಗಿ 35 ಮಿಲಿಯನ್ ಪ್ರಯಾಣಿಕರನ್ನು ಸೇರಿಸಬಹುದು. ನಾವು 115 ಮಿಲಿಯನ್ ಪ್ರಯಾಣಿಕರನ್ನು ತಲುಪಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ 75 ದೇಶೀಯ ತಾಣಗಳು ಮತ್ತು 30 ಅಂತಾರಾಷ್ಟ್ರೀಯ ತಾಣಗಳಿಗೆ ಸಂಪರ್ಕ ಹೊಂದಿದೆ. ಪ್ರಸ್ತುತ, ನಮ್ಮ ಅಂತಾರಾಷ್ಟ್ರೀಯ ಸಂಚಾರವು ಶೇಕಡಾ 15 ರಷ್ಟಿದೆ. ನಾವು ಅದನ್ನು ಶೇಕಡಾ 22ರಿಂದ 25 ಕ್ಕೆ ಹೆಚ್ಚಿಸಲು ಬಯಸುತ್ತೇವೆ ಮತ್ತು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ದಕ್ಷಿಣ ಭಾರತದ ಅಂತಾರಾಷ್ಟ್ರೀಯ ವಿಮಾನಗಳ ಕೇಂದ್ರವನ್ನಾಗಿ ಮಾಡಲು ಬಯಸುತ್ತೇವೆ. ಇದಕ್ಕೆ ಸಾಕಷ್ಟು ವಿಮಾನಯಾನ ಮಾರುಕಟ್ಟೆ ಪ್ರಚಾರದ ಅಗತ್ಯವಿದೆ.

"ನಾವು ಅಮೆರಿಕ ಮತ್ತು ಯುರೋಪ್‌ನ - ಸ್ಯಾನ್ ಫ್ರಾನ್ಸಿಸ್ಕೊ, ಲಂಡನ್, ಫ್ರಾಂಕ್‌ಫರ್ಟ್ ನಗರಗಳೊಂದಿಗೆ ಸಂಪರ್ಕ ಹೊಂದಿದ್ದೇವೆ ಎಂದು ಮುನುಕುಟ್ಲಾ ಹೇಳಿದರು. ವಿಮಾನ ನಿಲ್ದಾಣಗಳು ನಗರಗಳಿಗೆ ಆರ್ಥಿಕ ದ್ವಾರಗಳಾಗಿವೆ. ಕೆಂಪೇಗೌಡ ಏರ್ ಪೋರ್ಟ್ ನಗರದ ಅಭಿವೃದ್ಧಿಗೆ ಒಟ್ಟು ಮೌಲ್ಯದ ಶೇಕಡಾ 5.2 ರಷ್ಟು ಸೇರಿಸಿದೆ ಎಂದರು.

ಕ್ವಿನ್ ಸಿಟಿ ಮತ್ತು ವಿಮಾನ ನಿಲ್ದಾಣ ನಗರದಂತಹ ಯೋಜನೆಗಳು ಸ್ಥಳೀಯರಿಗೆ ಆದಾಯವನ್ನು ಗಳಿಸಲು ಸಹಾಯ ಮಾಡುತ್ತದೆ ಎಂದು ಹೇಳಿದರು. ದೇವನಹಳ್ಳಿಯ ಸುತ್ತಮುತ್ತಲಿನ ಆತಿಥ್ಯ ವಲಯ ಮತ್ತು ಈ ಪ್ರದೇಶದಲ್ಲಿ ಹೆಚ್ಚುವರಿಯಾಗಿ 7,000 ಹೋಟೆಲ್ ಕೊಠಡಿಗಳ ಅಗತ್ಯವನ್ನು ಅವರು ಒತ್ತು ಹೇಳಿದರು. ಪ್ರಸ್ತುತ ಹೋಟೆಲ್‌ಗಳು ಬೇಡಿಕೆಯನ್ನು ಪೂರೈಸಲು ಸಾಕಾಗುವುದಿಲ್ಲ, 4,000 ಹೊಸ ಕೊಠಡಿಗಳನ್ನು ನಿರ್ಮಿಸುವ ಪ್ರಕ್ರಿಯೆಯಲ್ಲಿವೆ ಎಂದು ಉದ್ಯೋಗಾವಕಾಶಗಳ ಕುರಿತು ಮುನುಕುಟ್ಲ ಮಾತನಾಡಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

'ಶಾಂತಿ ಬೇಕಾದರೆ ಯುದ್ಧಕ್ಕೆ ಸಿದ್ಧರಾಗಿ.. Sudarshan Chakra ವಾಯುರಕ್ಷಣಾ ವ್ಯವಸ್ಥೆಗೆ ಮೂರೂ ಸೇನೆಗಳ ಬೃಹತ್ ಪ್ರಯತ್ನ ಬೇಕು': CDS Chauhan

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

SCROLL FOR NEXT