ಶಿರಸಿ: 10 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಪ್ರಿಯತಮೆ ಕೊನೆಗೆ ಬೇರೊಂದು ಮದುವೆಯಾಗಿದ್ದಕ್ಕೆ ಕೋಪಗೊಂಡ ಪಾಗಲ್ ಪ್ರೇಮಿಯೊಬ್ಬ ಪ್ರಿಯತಮೆಯ ಗಂಡನಿಗೆ ಚೂರಿ ಇರಿದು ಬರ್ಬರವಾಗಿ ಹತ್ಯೆ ಮಾಡಿಕೊಂಡಿರುವ ಶಿರಸಿಯಲ್ಲಿ ನಡೆದಿದೆ. ಮೃತ ವ್ಯಕ್ತಿಯೊಬ್ಬ ಗಂಗಾಧರ ಎಂದು ಗುರುತಿಸಲಾಗಿದೆ.
ಭಗ್ನ ಪ್ರೇಮಿ ಪ್ರೀತಮ್ ಡಿಸೋಜ ಶಿರಸಿ ಮೂಲದ ಪೂಜಾ ಎಂಬಾಕೆಯನ್ನು ಹತ್ತು ವರ್ಷಗಳಿಂದ ಪ್ರೀತಿಸುತ್ತಿದ್ದನು. ಅಲ್ಲದೆ ಇಬ್ಬರು ರಿಜಿಸ್ಟರ್ ಮ್ಯಾರೇಜ್ ಮಾಡಿಕೊಳ್ಳಲು ಯೋಜಿಸಿದ್ದರು. ಅಷ್ಟರಲ್ಲಾಗಲೇ ಪ್ರೀತಮ್ ಗೆ ಮತ್ತೊಂದು ಅಫೆರ್ ಇರುವುದು ಗೊತ್ತಾಗಿ ಪೂಜಾ ಆತನನ್ನು ಬಿಟ್ಟು ಬಿಟ್ಟಿದ್ದಳು. ನಂತರ ಗಂಗಾಧರ್ ಎಂಬಾತನನ್ನು ಪ್ರೀತಿಸಿ ಮದುವೆಯಾಗಿದ್ದಳು. ಈ ವಿಷಯ ತಿಳಿದ ಪ್ರೀತಮ್ ಪೂಜಾಗೆ ಕರೆ ಮಾಡಿ ಕ್ಷಮೆಯಾಚಿಸಿದ್ದಾನೆ. ನಂತರ ಇಬ್ಬರ ಮಧ್ಯೆ ಮತ್ತೆ ಪ್ರೀತಿ ಶುರುವಾಗಿದೆ.
ಈ ಮಧ್ಯೆ ತಮ್ಮಿಬ್ಬರ ಪ್ರೀತಿಗೆ ಗಂಗಾಧರ್ ಮುಳ್ಳಾಗಿದ್ದಾನೆ ಎಂದು ಇಬ್ಬರು ಬಾವಿಸಿದ್ದಾರೆ. ಹೀಗಾಗಿ ಪ್ರೀತಮ್ ನಿನ್ನೆ ಶಿರಸಿಗೆ ಬಂದಿದ್ದ ಗಂಗಾಧರ್ ಜೊತೆ ಜಗಳ ತೆಗೆದು ಆತನಿಗೆ ಚೂರಿ ಇರಿದು ಕೊಂದಿದ್ದಾನೆ. ಕೊಲೆ ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ತನಿಖೆ ಕೈಗೊಂಡಿದ್ದರು. ಈ ವೇಳೆ ಗಂಗಾಧರ್ ಪತ್ನಿ ಪೂಜಾಳನ್ನು ಕರೆದು ವಿಚಾರಣೆ ನಡೆಸಿದ್ದಾರೆ. ಆಗ ಪೂಜಾ ಪ್ರೀತಮ್ ಹೆಸರನ್ನು ಬಾಯಿಬಿಟ್ಟಿದ್ದಾಳೆ. ಕೂಡಲೇ ಅಲರ್ಟ್ ಆದ ಉತ್ತರ ಕನ್ನಡ ಎಸ್ ಪಿ ಎಂ ನಾರಾಯಣ್ ಅವರು ತಂಡಗಳನ್ನು ರಚಿಸಿದ್ದು ಯಲ್ಲಾಪುರದಿಂದ ಇನ್ನೇನು ಜಿಲ್ಲೆಯ ಗಡಿ ದಾಟಲು ಯತ್ನಿಸುತ್ತಿದ್ದ ಪ್ರೀತಮ್ ನನ್ನು ಬಂಧಿಸಿದ್ದಾರೆ.