ಸಾಂದರ್ಭಿಕ ಚಿತ್ರ 
ರಾಜ್ಯ

ಲೋಕಾಯುಕ್ತ Dysp ಎಂದು ಹೇಳಿ ಅಧಿಕಾರಿಗಳಿಗೆ ಬ್ಲ್ಯಾಕ್ ಮೇಲ್: ಬೆಳಗಾವಿ ಮೂಲದ ವ್ಯಕ್ತಿ ಬಂಧನ

ಬೆಳಗಾವಿ ಮೂಲದ 56 ವರ್ಷದ ಮುರ್ಗಪ್ಪ ನಿಂಗಪ್ಪ ಕುಮಾರ್ ಎಂಬಾತ ಕೂಡ ಇದೇ ರೀತಿಯ ಅಪರಾಧಗಳನ್ನು ಈ ಹಿಂದೆಯೂ ಮಾಡಿರುವ ಇತಿಹಾಸವನ್ನು ಹೊಂದಿದ್ದಾನೆ

ಬೆಂಗಳೂರು: ಲೋಕಾಯುಕ್ತ ಡಿವೈಎಸ್‌ಪಿ ಎಂದು ನಂಬಿಸಿ ಸರ್ಕಾರಿ ಅಧಿಕಾರಿಗಳಿಗೆ ಬ್ಲ್ಯಾಕ್‌ಮೇಲ್ ಮಾಡಿ ಹಣ ಸುಲಿಗೆ ಮಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಈತನನ್ನು ಮುರುಗಪ್ಪ ನಿಂಗಪ್ಪ ಕುಮಾರ್ ಎಂದು ಗುರುತಿಸಲಾಗಿದೆ.

ಬೆಳಗಾವಿ ಮೂಲದ 56 ವರ್ಷದ ಮುರ್ಗಪ್ಪ ನಿಂಗಪ್ಪ ಕುಮಾರ್ ಎಂಬಾತ ಕೂಡ ಇದೇ ರೀತಿಯ ಅಪರಾಧಗಳನ್ನು ಈ ಹಿಂದೆಯೂ ಮಾಡಿರುವ ಇತಿಹಾಸವನ್ನು ಹೊಂದಿದ್ದಾನೆ. ಈ ಹಿಂದೆ ಕಾನ್ ಸ್ಟೇಬಲ್ ಆಗಿ ಕೆಲಸ ಮಾಡಿದ್ದ. ಹಲವು ವರ್ಷಗಳ ಹಿಂದೆ ಸೇವೆಯಿಂದ ವಜಾಗೊಳಿಸಲಾಗಿತ್ತು .

ಆತನ ವಿರುದ್ಧ ಹಲವಾರು ಪ್ರಕರಣಗಳು ದಾಖಲಾಗಿವೆ ಎಂದು ತನಿಖೆಯಿಂದ ತಿಳಿದುಬಂದಿದೆ. ಲೋಕಾಯುಕ್ತ ಅಧಿಕಾರಿ ಎಂದು ನಟಿಸಿದ್ದಕ್ಕಾಗಿ ಆತನನ್ನು ಈ ಹಿಂದೆ ಬಂಧಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಕುಮಾರ್ ಸರ್ಕಾರಿ ಅಧಿಕಾರಿಗಳಿಗೆ ಕರೆ ಮಾಡುತ್ತಿದ್ದು, ಲೋಕಾಯುಕ್ತ ಪೊಲೀಸ್ ಎಂದು ಸುಳ್ಳು ಹೇಳಿಕೊಂಡು, ಅಕ್ರಮ ಆಸ್ತಿ (ಡಿಎ) ಪ್ರಕರಣಗಳನ್ನು ದಾಖಲಿಸಿಕೊಂಡು ಬೆದರಿಕೆ ಹಾಕುತ್ತಿದ್ದ ಎಂದು ಲೋಕಾಯುಕ್ತ ಡಿವೈಎಸ್‌ಪಿ ಬಸವರಾಜ್ ಆರ್ ಮಗದಮ್ ದೂರು ದಾಖಲಿಸಿದ ನಂತರ ಹೊಸ ಪ್ರಕರಣ ದಾಖಲಿಸಲಾಗಿದೆ, ಆತ ಅವರಿಂದ ಹಣಕ್ಕಾಗಿ ಬೇಡಿಕೆ ಇಟ್ಟಿದ್ದ ಎನ್ನಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Asia Cup 2025: ಸೋಲು ಬೆನ್ನಲ್ಲೇ ಟ್ರೋಫಿಯೊಂದಿಗೆ ಮೈದಾನ ತೊರೆದ ಪಾಕ್ ಸಚಿವ; ICCಗೆ ದೂರು ನೀಡಲು BCCI ಮುಂದು..!

Asia Cup 2025: ಪಾಕ್ ಸಚಿವನಿಂದ ಟ್ರೋಫ್ ಸ್ವೀಕರಿಸಲು ಭಾರತ ನಕಾರ; ತಡರಾತ್ರಿ ದುಬೈನಲ್ಲಿ ಹೈಡ್ರಾಮಾ, ಕ್ರಿಕೆಟ್ ಇತಿಹಾಸದಲ್ಲೇ ಕಂಡು ಕೇಳರಿಯದ ಘಟನೆ..!

ಭಾರತದಿಂದ ಔಷಧ ಆಮದಿಗೆ ಶೇ.100 ರಷ್ಟು ಸುಂಕ: US ಅಹಂಕಾರಕ್ಕೆ ಪೆಟ್ಟು; ಭಾರತಕ್ಕೆ ಶೂನ್ಯ ಸುಂಕದೊಂದಿಗೆ ಬಾಗಿಲು ತೆರೆದ ಚೀನಾ!

ಏಷ್ಯಾ ಕಪ್ 2025 ಫೈನಲ್: ಸೋಲಿನ ಹತಾಶೆ, ರನ್ನರ್-ಅಪ್ ಚೆಕ್ ಬಿಸಾಡಿ ಹೋದ ಪಾಕ್ ನಾಯಕ

Asia Cup 2025: champion ತಂಡಕ್ಕೆ ಟ್ರೋಫಿ ಕೊಡದಿದ್ದನ್ನು ಎಂದೂ ನೋಡಿಲ್ಲ, ನನ್ನ ತಂಡವೇ ನನಗೆ ಟ್ರೋಫಿ; ಸೂರ್ಯಕುಮಾರ್ ಯಾದವ್

SCROLL FOR NEXT