ಬೆಂಗಳೂರು: ಕರ್ನಾಟಕ ಭಾಗದ ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇ ಪೂರ್ಣಗೊಂಡಿದ್ದು, ಸಾರ್ವಜನಿಕ ಸಂಚಾರಕ್ಕೆ ಮುಕ್ತವಾಗಿದೆ. ಆದರೆ ಇದು ಚೆನ್ನೈವರೆಗೆ ಪೂರ್ಣಗೊಂಡಿಲ್ಲ. ಸಿದ್ಧವಾದ ಎಕ್ಸ್‌ಪ್ರೆಸ್‌ವೇಗೆ ಸಂಬಂಧಿಸಿದ ಹಲವು ವಿಡಿಯೋಗಳು ಮತ್ತು ಫೋಟೋಗಳು ಸಾಮಾಜಿಕ ಮಾಧ್ಯಮ ಹರಿದಾಡುತ್ತಿದ್ದು, ಚೆನ್ನೈ ವರೆಗೆ ಎಕ್ಸ್‌ಪ್ರೆಸ್‌ವೇ ಸಂಚಾರಕ್ಕೆ ಮುಕ್ತವಾಗಿದೆ ಎಂಬ ಭಾವನೆ ಮೂಡಿಸುತ್ತಿವೆ.
ಅಧಿಕೃತವಾಗಿ ರಸ್ತೆ ಸಂಚಾರಕ್ಕೆ ಮುಕ್ತವಾಗಿಲ್ಲದಿದ್ದರೂ, ಕಳೆದ ಡಿಸೆಂಬರ್‌ನಲ್ಲಿ ಈ ರಸ್ತೆಯನ್ನು ಸಾರ್ವಜನಿಕ ಸಂಚಾರಕ್ಕೆ ಅವಕಾಶ ನೀಡಲಾಗಿದೆ ಎಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ(ಎನ್‌ಎಚ್‌ಎಐ) ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಕರ್ನಾಟಕದಲ್ಲಿ 71 ಕಿಮೀ ಉದ್ದದ(ಒಟ್ಟು 260 ಕಿಮೀ ಎಕ್ಸ್‌ಪ್ರೆಸ್‌ವೇಯಲ್ಲಿ) ರಸ್ತೆ ಪೂರ್ಣಗೊಂಡಿದ್ದು, ಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲಿ ಬರುವ ಉಳಿದ ಭಾಗಗಳು ಇನ್ನೂ ಪೂರ್ಣಗೊಂಡಿಲ್ಲ. ಹೀಗಾಗಿ ಎಕ್ಸ್‌ಪ್ರೆಸ್‌ವೇಯಲ್ಲಿ ಚೆನ್ನೈ ತಲುಪುದಿಲ್ಲ ಎಂದಿದ್ದಾರೆ.
“ಕೆಲವು ಸಣ್ಣ ಕೆಲಸಗಳನ್ನು ಹೊರತುಪಡಿಸಿ, ಯೋಜನೆಯ ಬಹುಪಾಲು ಪೂರ್ಣಗೊಂಡಿದ್ದು, ಕಳೆದ ವರ್ಷಾಂತ್ಯದಲ್ಲಿ ರಸ್ತೆಯನ್ನು ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಹತ್ತಿರದಲ್ಲಿ ವಾಸಿಸುವ ಮತ್ತು ದೀರ್ಘ ಪ್ರಯಾಣ ಮಾಡಲು ಬಯಸುವ ಗ್ರಾಮಸ್ಥರು ಈ ಪ್ರದೇಶವನ್ನು ಬಳಸುತ್ತಿದ್ದಾರೆ ” ಎಂದು ಅವರು ತಿಳಿಸಿದ್ದಾರೆ.
ಎಕ್ಸ್‌ಪ್ರೆಸ್‌ವೇಯ ಸಂಪೂರ್ಣ ಮಾರ್ಗವು ಇನ್ನೂ ಅಧಿಕೃತವಾಗಿ ಸಂಚಾರಕ್ಕೆ ಮುಕ್ತಗೊಳಿಸಿಲ್ಲ. ಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲಿ ಕೆಲಸ ಪ್ರಗತಿಯಲ್ಲಿರುವ ಕಾರಣ ಇನ್ನೂ ಕೆಲವು ತಿಂಗಳುಗಳನ್ನು ತೆಗೆದುಕೊಳ್ಳುತ್ತದೆ ಎಂದು ಅವರು ಸ್ಪಷ್ಟಪಡಿಸಿದರು.
"ಚೆನ್ನೈಗೆ ಹೋಗಲು ಬಯಸಿದರೆ, ಅವರು ಅಸ್ತಿತ್ವದಲ್ಲಿರುವ ಹೆದ್ದಾರಿಗಳನ್ನು ಬಳಸಬೇಕು ಮತ್ತು ಅಪೂರ್ಣ ಎಕ್ಸ್‌ಪ್ರೆಸ್‌ವೇಯನ್ನು ಬಳಸಬಹುದು ಎಂದು ಅವರು ಸಲಹೆ ನೀಡಿದರು".
"ಈ ಎಕ್ಸ್‌ಪ್ರೆಸ್‌ವೇ ಪೂರ್ಣಗೊಳ್ಳದ ಕಾರಣ, ನಾವು ರಸ್ತೆ ಬಳಕೆದಾರರ ಮೇಲೆ ಇನ್ನೂ ಯಾವುದೇ ಟೋಲ್ ವಿಧಿಸುತ್ತಿಲ್ಲ". ಈ ವರ್ಷಾಂತ್ಯ ಅಥವಾ ಮುಂದಿನ ವರ್ಷದ ವೇಳೆಗೆ ಇಡೀ ಎಕ್ಸ್ ಪ್ರೆಸ್ ವೇ ಸಂಚಾರಕ್ಕೆ ಮುಕ್ತಗೊಳಿಸಬಹುದು ಎಂದು ಅಧಿಕಾರಿ ತಿಳಿಸಿದ್ದಾರೆ.