ಅಮಲಿನಲ್ಲಿದ್ದ ಚಾಲಕನಿಂದ ತಪ್ಪಿಸಿಕೊಳ್ಳಲು ಆಟೋದಿಂದ ಜಿಗಿದ ಮಹಿಳೆ (ಸಾಂಕೇತಿಕ ಚಿತ್ರ) online desk
ರಾಜ್ಯ

ಮದ್ಯದ ಅಮಲಿನಲ್ಲಿದ್ದ ಚಾಲಕನಿಂದ ತಪ್ಪಿಸಿಕೊಳ್ಳಲು, ಚಲಿಸುತ್ತಿದ್ದ ಆಟೋದಿಂದ ಜಿಗಿದ ಮಹಿಳೆ!

ನಮ್ಮ ಯಾತ್ರಿ' ಸೇವೆಯ ದೊಡ್ಡ ಕೊರತೆಯೆಂದರೆ ಗ್ರಾಹಕರ ಕುಂದುಕೊರತೆಗಳನ್ನು ಆಲಿಸಲು ಸೂಕ್ತ ವ್ಯವಸ್ಥೆ ಇಲ್ಲದಿರುವುದಾಗಿದೆ ಎಂದು ವ್ಯಕ್ತಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು: ಕುಡಿದ ಅಮಲಿನಲ್ಲಿದ್ದ ಚಾಲಕನಿಂದ ರಕ್ಷಿಸಿಕೊಳ್ಳಲು ಮಹಿಳೆಯೊಬ್ಬರು ಚಲಿಸುತ್ತಿದ್ದ ಆಟೋರಿಕ್ಷಾದಿಂದ ಜಿಗಿದ ಘಟನೆ ಗುರುವಾರ ರಾತ್ರಿ ಬೆಂಗಳೂರಿನಲ್ಲಿ ನಡೆದಿದೆ.

ಘಟನೆಯ ಬಗ್ಗೆ ಮಹಿಳೆಯ ಪತಿ ಮಾಹಿತಿ ನೀಡಿದ್ದು, ಮಹಿಳೆ ಹೊರಮಾವು-ಥಣಿಸಂದ್ರಕ್ಕೆ ಆಟೋರಿಕ್ಷಾವನ್ನು ನಮ್ಮ ಯಾತ್ರಿ' ಮೂಲಕ ಬುಕ್ ಮಾಡಿದ್ದಾರೆ.

"ನನ್ನ ಪತ್ನಿ ಹೊರಮಾವು ನಿಂದ ಬೆಂಗಳೂರಿನ ಥಣಿಸಂದ್ರಕ್ಕೆ ಆಟೋವನ್ನು ಬುಕ್ ಮಾಡಿದ್ದಳು, ಆದರೆ ಡ್ರೈವರ್ ಕುಡಿದು ಹೆಬ್ಬಾಳದ ಬಳಿ ತಪ್ಪಾದ ಸ್ಥಳಕ್ಕೆ ಕರೆದೊಯ್ದನು. ಪದೇ ಪದೇ ನಿಲ್ಲಿಸುವಂತೆ ಕೇಳಿಕೊಂಡರೂ ಕೇಳಲಿಲ್ಲ, ಇದು ಆಕೆಯನ್ನು ಚಲಿಸುತ್ತಿದ್ದ ಆಟೋದಿಂದ ಜಿಗಿಯುವಂತೆ ಮಾಡಿದೆ' ಎಂದು ವ್ಯಕ್ತಿ ಶುಕ್ರವಾರ X' ನಲ್ಲಿ ಪೋಸ್ಟ್ ಮಾಡಿದ್ದಾರೆ.

ತ್ವರಿತವಾಗಿ ಸ್ಪಂದಿಸದ ನಮ್ಮ ಯಾತ್ರಿ customer care

ತುರ್ತು ಸಂದರ್ಭದಲ್ಲಿ ಸಂಪರ್ಕಿಸಲು ನಮ್ಮ ಯಾತ್ರಿ ಕಸ್ಟಮರ್ ಕೇರ್ ನಂಬರ್ ಸಹ ಇಲ್ಲ ಎಂದು ವ್ಯಕ್ತಿ ದೂರಿದ್ದಾರೆ. ನಮ್ಮ ಯಾತ್ರಿ' ಸೇವೆಯ ದೊಡ್ಡ ಕೊರತೆಯೆಂದರೆ ಗ್ರಾಹಕರ ಕುಂದುಕೊರತೆಗಳನ್ನು ಆಲಿಸಲು ಸೂಕ್ತ ವ್ಯವಸ್ಥೆ ಇಲ್ಲದಿರುವುದಾಗಿದೆ ಎಂದು ವ್ಯಕ್ತಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

customer care ಮೊರೆ ಹೋದರೆ ನಮ್ಮನ್ನು 24 ಗಂಟೆಗಳ ಕಾಲ ನಿರೀಕ್ಷಿಸುವಂತೆ ಕೇಳುತ್ತದೆ. ತುರ್ತು ಪರಿಸ್ಥಿತಿಯಲ್ಲಿ 24 ಗಂಟೆಗಳ ಕಾಲ ಕಾಯುವುದು ಹೇಗೆ? ಮಹಿಳೆಯರು ಎಷ್ಟು ಸುರಕ್ಷಿತರಾಗಿದ್ದಾರೆ ಎಂದು ಬೆಂಗಳೂರು ಪೊಲೀಸರನ್ನು ಪ್ರಶ್ನಿಸಿದ್ದಾರೆ.

ತಮ್ಮ ದೂರನ್ನು ಗಂಭೀರವಾಗಿ ಪರಿಗಣಿಸಿ ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸಂತ್ರಸ್ತೆಯ ಪತಿ ಪೊಲೀಸರಿಗೆ ಮನವಿ ಮಾಡಿದ್ದಾರೆ. ಬೆಂಗಳೂರು ಪೊಲೀಸರು ತಕ್ಷಣ ಸ್ಪಂದಿಸಿ ತನಿಖೆ ಆರಂಭಿಸಿದ್ದಾರೆ.

ದೂರಿಗೆ ಪ್ರತಿಕ್ರಿಯಿಸಿದ ನಮ್ಮ ಯಾತ್ರಿ, "ನಿಮ್ಮ ಪತ್ನಿಗೆ ಉಂಟಾದ ಅನಾನುಕೂಲತೆಯ ಬಗ್ಗೆ ನಾವು ವಿಷಾದಿಸುತ್ತೇವೆ ಮತ್ತು ಅವರು ಈಗ ಚೆನ್ನಾಗಿದ್ದಾರೆ ಎಂದು ನಾವು ಭಾವಿಸುತ್ತೇವೆ. ದಯವಿಟ್ಟು ನಮಗೆ ಸವಾರಿಯ ವಿವರಗಳನ್ನು DM ಮಾಡಿ ಮತ್ತು ಘಟನೆ ಬಗ್ಗೆ ತ್ವರಿತವಾಗಿ ಪರಿಶೀಲಿಸುತ್ತೇವೆ ಎಂದಷ್ಟೇ ಹೇಳಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

"ಸ್ವತಂತ್ರ ಭಾರತದ ಅತಿದೊಡ್ಡ ಸುಧಾರಣೆ"- GST ಸುಧಾರಣೆ ಶ್ಲಾಘಿಸಿದ ಪ್ರಧಾನಿ ಮೋದಿ

ಜಿಎಸ್‌ಟಿ ಕಡಿತ ಲಾಭ ಗ್ರಾಹಕರಿಗೆ ವರ್ಗಾಯಿಸುವುದಾಗಿ ಮುಖೇಶ್ ಅಂಬಾನಿ ಭರವಸೆ

ಕನಕಪುರದಲ್ಲಿ ಮೆಡಿಕಲ್ ಕಾಲೇಜ್; ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಬಳಕೆಗೆ ಸಂಪುಟ ಅಸ್ತು

ADR report: ದೇಶದಲ್ಲಿ ಶೇ. 47 ರಷ್ಟು ಸಚಿವರ ಮೇಲೆ ಕ್ರಿಮಿನಲ್ ಆರೋಪ, ಬಿಲಿಯನೇರ್ ಪೈಕಿ ಕರ್ನಾಟಕಕ್ಕೆ ಮೊದಲ ಸ್ಥಾನ, ಡಿಕೆಶಿ ಎಷ್ಟನೇ ಶ್ರೀಮಂತ?

ಉಕ್ರೇನ್‌ನಲ್ಲಿ ಶಾಂತಿ ನೆಲೆಸಲು ಭಾರತದ ಮೇಲಿನ 'ಸುಂಕಾಸ್ತ್ರ' ನಿರ್ಣಾಯಕ: US ಸುಪ್ರೀಂ ಕೋರ್ಟ್‌ಗೆ ಡೊನಾಲ್ಡ್ ಟ್ರಂಪ್ ಮಾಹಿತಿ

SCROLL FOR NEXT