ಬೆಂಗಳೂರು: ಸೋಮವಾರ ಸಂಜೆ ಹುಳಿಮಾವು ಪೊಲೀಸ್ ಠಾಣಾ ವ್ಯಾಪ್ತಿಯ ಲಾಡ್ಜ್‌ನಲ್ಲಿ 48 ವರ್ಷದ ಉದ್ಯಮಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತ ವ್ಯಕ್ತಿಯ ವ್ಯಾಪಾರದಲ್ಲಿ ಪಾಲುದಾರಾಗಿದ್ದವರ ವಿರುದ್ಧ ಪೊಲೀಸರು ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣ ದಾಖಲಿಸಿದ್ದಾರೆ.
ಮೃತರನ್ನು ಅಕ್ಷಯ್ ನಗರದ ನಿವಾಸಿ ಕಲೋಲ್ ದತ್ತಾ ಎಂದು ಗುರುತಿಸಲಾಗಿದ್ದು, ಇವರು ಖಾಸಗಿ ಆಸ್ಪತ್ರೆಗಳಲ್ಲಿ ಫುಡ್ ಕೇಟರಿಂಗ್ ವ್ಯವಹಾರ ನಡೆಸುತ್ತಿದ್ದರು.
ಅರಕೆರೆಯ ಬಿಎನ್‌ಎಸ್ ಕಂಫರ್ಟ್ಸ್ ಲಾಡ್ಜ್‌ನಲ್ಲಿ ದತ್ತಾ ಆತ್ಮಹತ್ಯೆಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಲಾಡ್ಜ್ ಸಿಬ್ಬಂದಿ ಬಾಗಿಲು ತಟ್ಟಿದರು ಬಹಳ ಸಮಯದವರೆಗೆ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ, ಕೀ ಬಳಸಿ ತೊಠಡಿ ತೆರೆದಾಗ ದತ್ತಾ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದುಕೊಂಡಿರುವುದು ಕಂಡುಬಂದಿದೆ.
ಕೂಡಲೇ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಧಾವಿಸಿ ಕೊಠಡಿ ಪರಿಶೀಲಿಸಿದರು. ದತ್ತಾ ಅವರ ಪತ್ನಿ ಆರ್.ಸಜಿನಿ ದತ್ತಾ ನೀಡಿದ ದೂರಿನ ಆಧಾರದ ಮೇಲೆ ದತ್ತಾ ಅವರ ವ್ಯಾಪಾರ ಪಾಲುದಾರ ಮರಿಸ್ವಾಮಿ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆಕೆಯ ಪತಿ ಮತ್ತು ಮರಿಸ್ವಾಮಿ ಖಾಸಗಿ ಆಸ್ಪತ್ರೆಗಳಿಗೆ ಆಹಾರ ಪೂರೈಕೆ ವ್ಯಾಪಾರ ಪ್ರಾರಂಭಿಸಿದ್ದರು. COVID-19 ಸಾಂಕ್ರಾಮಿಕದ ನಂತರ, ವ್ಯವಹಾರವು ನಷ್ಟವನ್ನು ಅನುಭವಿಸಿತು. ಆರ್ಥಿಕ ನಷ್ಟಕ್ಕೆ ಮರಿಸ್ವಾಮಿ ತನ್ನ ಪತಿಯನ್ನು ದೂಷಿಸಿದ್ದರು ಎಂದು ಸಜಿನಿ ದತ್ತಾ ಪೊಲೀಸರಿಗೆ ತಿಳಿಸಿದ್ದಾರೆ.
ವ್ಯಾಪಾರವನ್ನು ಉಳಿಸಿಕೊಳ್ಳಲು ದತ್ತಾ ಚಿನ್ನವನ್ನು ಅಡಮಾನವಿಟ್ಟಾಗ ಮರಿಸ್ವಾಮಿ ಕೆಲವು ಲಾಭದಾಯಕ ಆಸ್ಪತ್ರೆ ಗುತ್ತಿಗೆಗಳನ್ನು ವಹಿಸಿಕೊಂಡರು. ಮರಿಸ್ವಾಮಿ ತನ್ನ ಪತಿಗೆ ಮಾನಸಿಕ ಕಿರುಕುಳ ಮತ್ತು ಒತ್ತಡ ಹೇರುತ್ತಿದ್ದ ಎಂದು ಸಜಿನಿ ಹೇಳಿಕೊಂಡಿದ್ದಾರೆ.
ಹತ್ತು ದಿನಗಳ ಹಿಂದೆ ಮರಿಸ್ವಾಮಿ ಅವರು ದತ್ತಾ ಅವರಿಗೆ ಕರೆ ಮಾಡಿ, ಅವರ ಪಾಲು ನೀಡುವಂತೆ ಒತ್ತಾಯಿಸಿದರು ಮತ್ತು ದತ್ತಾ ಅವರನ್ನು ಅವಮಾನಿಸಿ ಬೆದರಿಕೆ ಹಾಕಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.