ನಂದಿ ಬೆಟ್ಟ 
ರಾಜ್ಯ

ನಾಲ್ಕುವರೆ ಗಂಟೆ ಪ್ರಯಾಣ, ಕಳಪೆ ರಸ್ತೆ ಸೇರಿ ಹಲವು ಸಮಸ್ಯೆ: MM Hills ನಲ್ಲಿ ನಡೆಯಬೇಕಿದ್ದ ಸಂಪುಟ ಸಭೆ ನಂದಿ ಬೆಟ್ಟಕ್ಕೆ ಶಿಫ್ಟ್!

ಪ್ರಾದೇಶಿಕ ಅಸಮತೋಲನವನ್ನು ನಿವಾರಿಸುವ ಉದ್ದೇಶದಿಂದ ಎಂಎಂ ಹಿಲ್ಸ್‌ನಲ್ಲಿ ಸಭೆ ನಡೆಸಲು ನಿರ್ಧರಿಸಲಾಗಿತ್ತು.

ಬೆಂಗಳೂರು: ಅಚ್ಚರಿಯ ಬೆಳವಣಿಗೆಯೊಂದರಲ್ಲಿ, ಜನವರಿ 16 ರಂದು ನಡೆಯಲಿರುವ ತನ್ನ ಸಚಿವ ಸಂಪುಟ ಸಭೆಯ ಸ್ಥಳವನ್ನು ಚಾಮರಾಜನಗರ ಜಿಲ್ಲೆಯ ಮಲೈ ಮಹದೇಶ್ವರ ಬೆಟ್ಟದಿಂದ ಬೆಂಗಳೂರಿನ ಹೊರವಲಯದ ನಂದಿ ಬೆಟ್ಟಕ್ಕೆ ಸ್ಥಳಾಂತರಿಸಲು ಆಡಳಿತಾರೂಢ ಕಾಂಗ್ರೆಸ್ ನಿರ್ಧರಿಸಿದೆ.

ಪ್ರಾದೇಶಿಕ ಅಸಮತೋಲನವನ್ನು ನಿವಾರಿಸುವ ಉದ್ದೇಶದಿಂದ ಎಂಎಂ ಹಿಲ್ಸ್‌ನಲ್ಲಿ ಸಭೆ ನಡೆಸಲು ನಿರ್ಧರಿಸಲಾಗಿತ್ತು, ಆದರೆ ಇಲ್ಲಿ ಸಂಪುಟ ಸಭೆ ನಡೆಸಲು ಹಲವು ಅಟಚಣೆಗಳು ಎದುರಾಗಿದ್ದರಿಂದ ಸ್ಥಳ ಬದಲಾವಣೆ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಮತ್ತು ಅವರ ತಂಡವು ವಿವಿಧ ಅಂಶಗಳ ಅಧ್ಯಯನದ ನಂತರ ಚಿಕ್ಕಬಳ್ಳಾಪುರ ಜಿಲ್ಲೆಯ ಐಕಾನಿಕ್ ನಂದಿ ಬೆಟ್ಟಕ್ಕೆ ಸ್ಥಳಾಂತರಿಸಲು ನಿರ್ಧರಿಸಿತು.

ಸರ್ಕಾರವು ಎಂಎಂ ಹಿಲ್ಸ್‌ನಲ್ಲಿ ಸಂಪುಟ ಸಭೆ ನಡೆಸುವ ಆಲೋಚನೆಯನ್ನು ಕೈಬಿಡುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ "ಇಲ್ಲ ಇಲ್ಲ, ನಾವು ಆ ಆಲೋಚನೆಯನ್ನು ಕೈಬಿಟ್ಟಿಲ್ಲ, ಮುಂದಿನ ಬಾರಿ ನಾವು ಅಲ್ಲಿಯೇ ನಡೆಸುತ್ತೇವೆ ಎಂದು ಹೇಳಿದರು.

4.5 ಗಂಟೆಗಳ ಪ್ರಯಾಣದ ಸಮಯ, ಎಂಎಂ ಹಿಲ್ಸ್‌ನಲ್ಲಿನ ಕಳಪೆ ರಸ್ತೆ ಸ್ಥಿತಿ ಮತ್ತು ಮೂಲಸೌಕರ್ಯವನ್ನು ಪರಿಗಣಿಸಿ, ಬೆಂಗಳೂರಿನಿಂದ ಒಂದು ಗಂಟೆಯ ಪ್ರಯಾಣದ ದೂರದಲ್ಲಿರುವ ನಂದಿ ಬೆಟ್ಟಕ್ಕೆ ಸಭೆ ಸ್ಥಳಾಂತರಿಸಲು ನಿರ್ಧರಿಸಿತು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ, ಜನವರಿ 16 ಕ್ರಿಯಾಶೀಲ ದಿನವಾಗಲಿದೆ. ಸಂಪುಟ ಸಭೆಗೂ ಮುನ್ನ, ಅವರು ಜನವರಿ 14 ರಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಭಾಗವಹಿಸಲಿದ್ದಾರೆ ಮತ್ತು ನಂತರ ಜನವರಿ 15 ರಂದು ಎಐಸಿಸಿ ಕಚೇರಿ ಉದ್ಘಾಟನೆಗಾಗಿ ನವದೆಹಲಿಗೆ ತೆರಳಲಿದ್ದಾರೆ.

ಏತನ್ಮಧ್ಯೆ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಹಲವು ಕಾರ್ಯಕ್ರಮಗಳಲ್ಲಿ ಬ್ಯುಸಿಯಾಗಿದ್ದಾರೆ, ವಿಶೇಷವಾಗಿ ದೇವಾಲಯಗಳಿಗೆ ಭೇಟಿ ನೀಡುತ್ತಿದ್ದಾರೆ, ಇದು ಅವರ ರಾಜಕೀಯ ಮಹತ್ವಾಕಾಂಕ್ಷೆಗಳ ಬಗ್ಗೆ ಊಹಾಪೋಹಗಳಿಗೆ ಕಾರಣವಾಗಿದೆ.

ಮುಖ್ಯಮಂತ್ರಿ ಮತ್ತು ಅವರ ಸಚಿವರು ಒಂದು ಬಸ್‌ನಲ್ಲಿ ಒಟ್ಟಿಗೆ ಪ್ರಯಾಣಿಸುವ ನಿರೀಕ್ಷೆಯಿದೆ, ಅಧಿಕಾರಿಗಳು ಇನ್ನೊಂದು ಬಸ್‌ನಲ್ಲಿ ಪ್ರಯಾಣಿಸುತ್ತಾರೆ. ಇತರ ಸಿಬ್ಬಂದಿ ಕಾರುಗಳು ಮತ್ತು ಇತರ ವಾಹನಗಳಲ್ಲಿ ಪ್ರಯಾಣಿಸುತ್ತಾರೆ ಎಂದು ಮೂಲಗಳು ತಿಳಿಸಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Video: 17 ಮಕ್ಕಳು ಸೇರಿ 19 ಜನರನ್ನು ಒತ್ತೆಯಾಳಾಗಿ ಇಟ್ಟುಕೊಂಡಿದ್ದ ವ್ಯಕ್ತಿ ಮುಂಬೈ ಪೊಲೀಸ್ ಗುಂಡಿಗೆ ಬಲಿ!

2025 ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ: ನಟ ಪ್ರಕಾಶ್‌ ರಾಜ್‌ ಸೇರಿ 70 ಮಂದಿ ಆಯ್ಕೆ

Bihar Poll: ನಿತೀಶ್ ಕುಮಾರ್ ಸಿಎಂ ಆಗಲ್ವಾ? ದೊಡ್ಡ ಸುಳಿವು ನೀಡಿದ ಅಮಿತ್ ಶಾ!

ಡಿಕೆಶಿ, ತೇಜಸ್ವಿ ಸೂರ್ಯ ಜಟಾಪಟಿ; ಬೆಂಗಳೂರಿನಲ್ಲಿ ಟನಲ್ ರಸ್ತೆ ಬಗ್ಗೆ ಕೇಂದ್ರ ಸಚಿವ ಖಟ್ಟರ್ ಹೇಳಿದ್ದೇನು?

ಮಹಾರಾಷ್ಟ್ರದ ಎಲ್ಲಾ ಶಾಲೆಗಳಿಗೆ 'ವಂದೇ ಮಾತರಂ' ಪೂರ್ಣ ಹಾಡಲು ಸೂಚನೆ

SCROLL FOR NEXT