ಪ್ರಾತಿನಿಧಿಕ ಚಿತ್ರ 
ರಾಜ್ಯ

ಮಂಗಳೂರು: ಸೈಬರ್ ವಂಚನೆ ಪ್ರಕರಣದಲ್ಲಿ ಕೇರಳದ ವ್ಯಕ್ತಿ ಬಂಧನ

ಇತರ ಆರೋಪಿಗಳ ಪತ್ತೆಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.

ಮಂಗಳೂರು: ಸೈಬರ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ನಗರ ಸೈಬರ್ ಎಕನಾಮಿಕ್ ಅಂಡ್ ನಾರ್ಕೋಟಿಕ್ಸ್ (ಸಿಇಎನ್) ಕ್ರೈಂ ಪೊಲೀಸರು ಕೇರಳ ಮೂಲದ ವ್ಯಕ್ತಿಯನ್ನು ಬಂಧಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಪರಿಚಿತ ವ್ಯಕ್ತಿಯೊಬ್ಬ ಸಂತ್ರಸ್ತೆಯನ್ನು ವಾಟ್ಸಾಪ್ ಮೂಲಕ ಸಂಪರ್ಕಿಸಿ, ಷೇರು ಮಾರುಕಟ್ಟೆಯ ಹೂಡಿಕೆಯ ಮೇಲೆ ಹೆಚ್ಚಿನ ಆದಾಯ ನೀಡುವುದಾಗಿ ಆಮಿಷವೊಡ್ಡಿದ್ದಾರೆ.

ಇದನ್ನು ನಂಬಿದ ಸಂತ್ರಸ್ತೆಯು ಹಲವಾರು ವಹಿವಾಟುಗಳಲ್ಲಿ ಒಟ್ಟು 10.32 ಲಕ್ಷ ರೂ.ಗಳನ್ನು ವರ್ಗಾವಣೆ ಮಾಡಿದ್ದಾರೆ.

ಕೇರಳದ ತ್ರಿಶೂರ್‌ ಮೂಲದ ನಿಧಿನ್‌ ಕುಮಾರ್‌ ಕೆಎಸ್‌ ಎಂಬಾತನ ಬ್ಯಾಂಕ್‌ ಖಾತೆಗೆ 1 ಲಕ್ಷ ರೂಪಾಯಿ ಜಮೆ ಆಗಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ. ಆರೋಪಿಯು ನಂತರ ಹಣವನ್ನು ಕಮಿಷನ್‌ಗಾಗಿ ಇತರ ಅನೇಕ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿರುವುದಾಗಿ ತಿಳಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಗುರುವಾರ ಆತನನ್ನು ಬಂಧಿಸಲಾಗಿದ್ದು, ನಂತರ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು ಎಂದು ಪ್ರಕಟಣೆ ತಿಳಿಸಿದೆ.

ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ (ಐಪಿಎಸ್), ಉಪ ಪೊಲೀಸ್ ಆಯುಕ್ತರು (ಡಿಸಿಪಿ) ಸಿದ್ಧಾರ್ಥ್ ಗೋಯಲ್ ಮತ್ತು ರವಿಶಂಕರ್ ಅವರ ಮೇಲ್ವಿಚಾರಣೆಯಲ್ಲಿ ಕಾರ್ಯಾಚರಣೆ ನಡೆಸಲಾಗಿದ್ದು, ಸಿಇಎನ್ ಸಹಾಯಕ ಪೊಲೀಸ್ ಕಮಿಷನರ್ ರವೀಶ್ ನಾಯಕ್ ತನಿಖೆಯ ನೇತೃತ್ವ ವಹಿಸಿದ್ದಾರೆ. ಇತರ ಆರೋಪಿಗಳ ಪತ್ತೆಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಂಫಾಲ್ ಬಳಿ ಉಗ್ರರಿಂದ ಗುಂಡಿನ ದಾಳಿ: ಅಸ್ಸಾಂ ರೈಫಲ್ಸ್ ನ 2 ಸೈನಿಕರು ಹುತಾತ್ಮ, 5 ಮಂದಿಗೆ ಗಾಯ

'Saudi Arabia ಪರಸ್ಪರ ಹಿತಾಸಕ್ತಿ, ಸೂಕ್ಷ್ಮತೆಗಳ ಗಣನೆಗೆ ತೆಗೆದುಕೊಳ್ಳಬೇಕೆಂದು ನಿರೀಕ್ಷಿಸುತ್ತೇವೆ': Saudi-Pak ಒಪ್ಪಂದದ ಕುರಿತು ಭಾರತ ಖಡಕ್ ಮಾತು!

Asia Cup 2025: oman ವಿರುದ್ಧ ಭಾರತಕ್ಕೆ 21 ರನ್ ಭರ್ಜರಿ ಜಯ, Arshdeep Singh ಅಪರೂಪದ ದಾಖಲೆ, ಮೊದಲ ಬೌಲರ್!

Asia Cup 2025: ವಿಶ್ವ ಚಾಂಪಿಯನ್ ಭಾರತದ ವಿರುದ್ಧ oman ಆಟಗಾರ Amir Kaleem ದಾಖಲೆ, ಏನದು ಸಾಧನೆ?

ಆರ್ಡರ್ ತಡವಾಗಿದ್ದಕ್ಕೆ ಡೆಲಿವರಿ ಬಾಯ್ ಮೇಲೆ ಹಲ್ಲೆ, Mubarak, Shahrukh ಬಂಧನ, Video

SCROLL FOR NEXT