ಮೃತ ವ್ಯಕ್ತಿ 
ರಾಜ್ಯ

ಮಡಿಕೇರಿ: ತನ್ನದೇ ಬಂದೂಕಿನ ಗುಂಡು ತಗುಲಿ ವೈನ್ ಶಾಪ್ ಮಾಲೀಕ ಸಾವು

ದಿನದ ವ್ಯವಹಾರ ಮುಗಿಸಿ ವೈನ್ ಶಾಪ್ ಮುಚ್ಚಿ ಸ್ಕೂಟಿ ಬಳಿ ತೆರಳಿದಾಗ ಆಕಸ್ಮಿಕವಾಗಿ ಒಂಟಿ ನಳಿಕೆ ಬಂದೂಕು ಕೆಳಗೆ ಬಿದ್ದು, ಗುಂಡು ಸಿಡಿದು ದುರ್ಘಟನೆ ಸಂಭವಿಸಿದೆ. ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಮಡಿಕೇರಿ: ತನ್ನದೇ ಬಂದೂಕಿನಿಂದ ಆಕಸ್ಮಿಕವಾಗಿ ಸಿಡಿದ ಗುಂಡು ತಗುಲಿ ವೈನ್ ಶಾಪ್ ಮಾಲೀಕ ಮೃತಪಟ್ಟಿರುವ ಘಟನೆ ತಾಲೂಕಿನ ಚೇರಂಬಾಣೆಯಲ್ಲಿ ಬುಧವಾರ ತಡರಾತ್ರಿ ನಡೆದಿದೆ.

ಚೇರಂಬಾಣೆಯ ಪೊನ್ನಚೆಟ್ಟಿರ ಮಿತ್ರ ಚಿಂಗಪ್ಪ (49) ಮೃತ ದುರ್ದೈವಿ. ತಮ್ಮದೇ ಒಡೆತದನದ ವೈನ್ ಶಾಪ್ ಎದುರು ರಾತ್ರಿ 12 ಗಂಟೆ ವೇಳೆಗೆ ದುರ್ಘಟನೆ ಸಂಭವಿಸಿದೆ.

ಪ್ರತಿನಿತ್ಯ ದಿನದ ವ್ಯವಹಾರ ಮುಗಿಸಿ ವೈನ್ ಶಾಪ್ ಮುಚ್ಚಿ ಸ್ಕೂಟಿ ಬಳಿ ತೆರಳಿದಾಗ ಆಕಸ್ಮಿಕವಾಗಿ ಒಂಟಿ ನಳಿಕೆ ಬಂದೂಕು ಕೆಳಗೆ ಬಿದ್ದು, ಗುಂಡು ಸಿಡಿದು ದುರ್ಘಟನೆ ಸಂಭವಿಸಿದೆ. ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಮಡಿಕೇರಿಯ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಮಡಿಕೇರಿ ಗ್ರಾಮಾಂತರ ವ್ಯಾಪ್ತಿಯ ಭಾಗಮಂಡಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಖಾರ್ಗ್ ದ್ವೀಪದ ಮೇಲೆ ಅಮೆರಿಕ ದಾಳಿ ನಂತರವೂ ತೈಲ ಕಾರ್ಯಾಚರಣೆ ಎಂದಿನಂತೆ ಮುಂದುವರೆದಿದೆ: ಇರಾನ್

ಮೋದಿ ರ‍್ಯಾಲಿಗೆ ಮುನ್ನ ಕೋಲ್ಕತ್ತಾದಲ್ಲಿ TMC, BJP ಕಾರ್ಯಕರ್ತರ ನಡುವೆ ಮಾರಾಮಾರಿ; ಪರಸ್ಪರ ಕಲ್ಲು ತೂರಾಟ

'ರನ್-ಔಟ್ ಹೆಸರಿನಲ್ಲಿ ನಂಬಿಕೆ ದ್ರೋಹ': ಭಾರತದ ಮಾಜಿ ಕ್ರಿಕೆಟಿಗ Mohammad Kaif ಕಿಡಿ, ಹೇಳಿದ್ದು ಯಾರಿಗೆ?

4,824 ಕೋಟಿ ಮೊತ್ತದ ಬಂಡವಾಳ ಹೂಡಿಕೆಗೆ ಸರ್ಕಾರ ಸಮ್ಮತಿ: ರಾಜ್ಯದಲ್ಲಿ 14,525 ಉದ್ಯೋಗ ಅವಕಾಶ ಸೃಷ್ಟಿ!

ನಿಮ್ ಕೈಲಾಗಲ್ಲ ಅಂದ್ರೆ ರಾಜಿನಾಮೆ ನೀಡಿ: 'ನಮಾಜ್ ಆದೇಶ' ಪಾಲನೆ ಕುರಿತು ಹೈಕೋರ್ಟ್ ಕೆಂಡಾಮಂಡಲ!

SCROLL FOR NEXT