ಸಂಗ್ರಹ ಚಿತ್ರ PTI
ರಾಜ್ಯ

ರಾಜ್ಯದಲ್ಲಿ 3,200 ಕೋಟಿ ರೂ ಬೃಹತ್ GST ವಂಚನೆ ಬಯಲು: ಇಬ್ಬರನ್ನು ಬಂಧಿಸಿದ DGGI

ಡಿಜಿಜಿಐನ ಬೆಂಗಳೂರು ವಲಯ ಘಟಕವು ಬೆಂಗಳೂರು ಮತ್ತು ಮುಂಬೈನಾದ್ಯಂತ 30ಕ್ಕೂ ಹೆಚ್ಚು ಸ್ಥಳಗಳಲ್ಲಿ ಶೋಧ ನಡೆಸಿ ಸಂಕೀರ್ಣ ಹಗರಣವನ್ನು ಬಯಲು ಮಾಡಿದೆ.

ಬೆಂಗಳೂರು: ಬೆಂಗಳೂರಿನ ಜಿಎಸ್‌ಟಿ ಗುಪ್ತಚರ ನಿರ್ದೇಶನಾಲಯ (DGGI) ಬರೋಬ್ಬರಿ 3,200 ಕೋಟಿ ರೂ.ಗಳ ಬೃಹತ್ GST ವಂಚನೆಯನ್ನು ಬಯಲು ಮಾಡಿದ್ದ ಪ್ರಕರಣ ಸಂಬಂಧ ಇಬ್ಬರನ್ನು ಬಂಧಿಸಿದೆ.

ಡಿಜಿಜಿಐನ ಬೆಂಗಳೂರು ವಲಯ ಘಟಕವು ಬೆಂಗಳೂರು ಮತ್ತು ಮುಂಬೈನಾದ್ಯಂತ 30ಕ್ಕೂ ಹೆಚ್ಚು ಸ್ಥಳಗಳಲ್ಲಿ ಶೋಧ ನಡೆಸಿ ಸಂಕೀರ್ಣ ಹಗರಣವನ್ನು ಬಯಲು ಮಾಡಿದೆ. ಈ ಸಂಬಂಧ ಇಬ್ಬರನ್ನು ಬಂಧಿಸಿದ್ದು ಮತ್ತೋರ್ವ ಶಂಕಿತನು ತಲೆಮರೆಸಿಕೊಂಡಿದ್ದಾನೆ ಎಂದು ಡಿಜಿಜಿಐ ಬೆಂಗಳೂರು ವಲಯದ ಹೆಚ್ಚುವರಿ ಮಹಾನಿರ್ದೇಶಕಿ ಸುಚೇತಾ ಶ್ರೀಜೇಶ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಆರೋಪಿಗಳು ಯಾವುದೇ ಕಾನೂನುಬದ್ಧ ವ್ಯಾಪಾರ ನಡೆಸದೆ ನಕಲಿ ಕಂಪನಿಗಳನ್ನು ಸೃಷ್ಟಿಸಿಕೊಂಡಿದ್ದು ವಹಿವಾಟು ಹೆಚ್ಚಿಸಲು ಚೈನ್ ಲಿಂಗ್ ವ್ಯಾಪಾರದಲ್ಲಿ ತೊಡಗಿದ್ದರು. ಈ ಕಂಪನಿಗಳನ್ನು ಷೇರು ವಿನಿಮಯ ಕೇಂದ್ರಗಳಲ್ಲಿ ಪಟ್ಟಿ ಮಾಡಲಾಗಿತ್ತು. ಒಟ್ಟು 665 ಕೋಟಿ ರೂ.ಗಳ ನಕಲಿ ಇನ್‌ಪುಟ್ ತೆರಿಗೆ ಕ್ರೆಡಿಟ್ ಅನ್ನು ಮೋಸದಿಂದ ಪಡೆಯಲು ಮತ್ತು ರವಾನಿಸಲು ಅನುಕೂಲ ಮಾಡಿಕೊಟ್ಟಿದ್ದಾರೆ. “ಹಗರಣದಲ್ಲಿ ಭಾಗಿಯಾಗಿರುವ ನಕಲಿ ಇನ್‌ವಾಯ್ಸ್‌ಗಳ ಒಟ್ಟು ಮೌಲ್ಯ 3,200 ಕೋಟಿ ರೂ.ಗಳಿಗಿಂತ ಹೆಚ್ಚು ಎಂದು ಸುಚೇತಾ ಹೇಳಿದ್ದಾರೆ.

ತನಿಖೆಯಲ್ಲಿ 15 ಸಂಶಯಾಸ್ಪದ ಕಂಪನಿಗಳ ನಕಲಿ ವ್ಯವಹಾರ ಬಯಲಾಗಿದೆ. ಈ ಸಂಸ್ಥೆಗಳು ನೂರಾರು ಕೋಟಿ ಮೌಲ್ಯದ FMCG ಸರಕುಗಳನ್ನು ಸ್ವೀಕರಿಸಿರುವುದಾಗಿ ವರದಿ ಮಾಡಿದ್ದವು, ಆದರೆ ಐಟಿ ಬೆಂಬಲ, ನಿರ್ವಹಣಾ ಸಲಹಾ ಮತ್ತು ಜಾಹೀರಾತುಗಳಂತಹ ಸೇವೆಗಳಿಗೆ ಮಾತ್ರ ಇನ್‌ವಾಯ್ಸ್‌ಗಳನ್ನು ನೀಡಿವೆ. ಹೆಚ್ಚಿನ ಸಂಖ್ಯೆಯ ಇನ್‌ವರ್ಡ್ ಇ-ವೇ ಬಿಲ್‌ಗಳ ಹೊರತಾಗಿಯೂ, ಯಾವುದೇ ಕಂಪನಿಗಳು ಯಾವುದೇ ಬಾಹ್ಯ ಇ-ವೇ ಬಿಲ್‌ಗಳನ್ನು ಹೊಂದಿರಲಿಲ್ಲ.

ಅಧಿಕಾರಿಗಳ ಪ್ರಕಾರ, ಭಾರತೀಯ ಷೇರು ವಿನಿಮಯ ಕೇಂದ್ರಗಳಲ್ಲಿ ಈ ಪೈಕಿ 9 ಕಂಪನಿಗಳನ್ನು ಪಟ್ಟಿ ಮಾಡಲಾಗಿದೆ. ಈ ನಕಲಿ ಕಂಪನಿಗಳ ಪ್ರವರ್ತಕರು ವಹಿವಾಟು ಹೆಚ್ಚಿಸಲು, ಷೇರು ಬೆಲೆಯನ್ನು ಹೆಚ್ಚಿಸಲು, ನಂತರ ಷೇರುಗಳನ್ನು ಮಾರಾಟ ಮಾಡಲು ಮತ್ತು ಕಂಪನಿಯಿಂದ ನಿರ್ಗಮಿಸಲು ನಕಲಿ ಇನ್‌ವಾಯ್ಸ್‌ಗಳ ವೃತ್ತಾಕಾರದ ವ್ಯಾಪಾರವನ್ನು ಆಶ್ರಯಿಸಿದ್ದರು. ಅಂತಹ ಕಂಪನಿಗಳ ಷೇರುಗಳಲ್ಲಿ ಹೂಡಿಕೆ ಮಾಡಿದ್ದ ಸಾರ್ವಜನಿಕರಿಗೂ ಹಣವನ್ನು ವಂಚಿಸಿದ್ದಾರೆ ಎಂದು ತನಿಖೆಯಲ್ಲಿ ಬಯಲಾಗಿದೆ ಎಂದರು.

ಈ ಹೆಚ್ಚಿನ ಕಂಪನಿಗಳ GST ರಿಟರ್ನ್‌ಗಳನ್ನು ಸಾಮಾನ್ಯ IP ವಿಳಾಸಗಳಿಂದ ಸಲ್ಲಿಸಲಾಗಿದೆ ಎಂದು ತನಿಖೆಯು ಬಹಿರಂಗಪಡಿಸಿದೆ. ಇದೆಲ್ಲವನ್ನು ಒಬ್ಬನೇ ನಿರ್ವಹಿಸುತ್ತಿದ್ದನು. ವಂಚನೆಯ ಪ್ರಮಾಣ ಮತ್ತು ಸಾಮಾನ್ಯ ಜನರ ಮೇಲಿನ ಅದರ ಪರಿಣಾಮವನ್ನು ಪರಿಗಣಿಸಿ, ಬೆಂಗಳೂರು ವಲಯ ಘಟಕದ ಜಿಎಸ್‌ಟಿ ಗುಪ್ತಚರ ನಿರ್ದೇಶನಾಲಯವು ಈ ವಿಷಯದಲ್ಲಿ ಸಂಪೂರ್ಣ ತನಿಖೆಯನ್ನು ಪ್ರಾರಂಭಿಸಿದೆ ಎಂದು ಶ್ರೀಜೇಶ್ ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಸಿಎಂ ಹುದ್ದೆ ಗುದ್ದಾಟ: ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್ ಗೆ ಹೈಕಮಾಂಡ್ ದೆಹಲಿಗೆ ಬುಲಾವ್ ಸಾಧ್ಯತೆ

ನವೆಂಬರ್ 28ರಂದು ಉಡುಪಿಗೆ ಪ್ರಧಾನಿ ಮೋದಿ: ಬನ್ನಂಜೆಯಿಂದ ಕಲ್ಸಂಕ ಜಂಕ್ಷನ್‌ವರೆಗೆ ರೋಡ್ ಶೋ

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

SCROLL FOR NEXT