ಶ್ವಾಸಕೋಶದಲ್ಲಿ ಪಿನ್ ಸಿಲುಕಿಕೊಂಡಿರುವುದು. 
ರಾಜ್ಯ

ಸೀನುವಾಗ ಮಹಿಳೆ ಶ್ವಾಸಕೋಶ ಸೇರಿದ ಬಟ್ಟೆ ಪಿನ್; ತಿಂಗಳ ಬಳಿಕ ವೈದ್ಯರಿಂದ ಯಶಸ್ವಿ ಶಸ್ತ್ರಚಿಕಿತ್ಸೆ..!

55 ವರ್ಷದ ಮಹಿಳೆ ಅಂಗಡಿಯಲ್ಲಿ ಬಟ್ಟೆ ಶಾಪಿಂಗ್ ಮಾಡವಾಗ ಮಹಿಳೆ ಪಿನ್ ಅನ್ನು ತನ್ನ ಬಾಯಿಯಲ್ಲಿ ಇರಿಸಿಕೊಂಡಿದ್ದು, ಈ ವೇಲೆ ಸೀನುವಾರ ಪಿನ್, ಬಲ ಶ್ವಾಸಕೋಶದ ಬ್ರಾಂಕಸ್ ಇಂಟರ್ಮೀಡಿಯಸ್ ಎಂಬ ಭಾಗದಲ್ಲಿ ಸಿಲುಕಿಕೊಂಡಿದೆ.

ಬೆಂಗಳೂರು: ಶಾಪಿಂಗ್ ಮಾಡುವಾದ ತಿಳಿಯದೆ ಬಾಯಲ್ಲಿಟ್ಟುಕೊಂಡಿದ್ದ ಬಟ್ಟೆ ಪಿನ್'ವೊಂದು ಮಹಿಳೆಯ ಶ್ವಾಸಕೋಶ ಸೇರಿದ್ದು, ಒಂದು ತಿಂಗಳ ಕಾಲ ಉಸಿರಾಟದ ಸಮಸ್ಯೆ ಎದುರಿಸಿದ ಮಹಿಳೆಗೆ ವೈದ್ಯರು ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಿದ್ದಾರೆ.

55 ವರ್ಷದ ಮಹಿಳೆ ಅಂಗಡಿಯಲ್ಲಿ ಬಟ್ಟೆ ಶಾಪಿಂಗ್ ಮಾಡವಾಗ ಮಹಿಳೆ ಪಿನ್ ಅನ್ನು ತನ್ನ ಬಾಯಿಯಲ್ಲಿ ಇರಿಸಿಕೊಂಡಿದ್ದು, ಈ ವೇಲೆ ಸೀನುವಾರ ಪಿನ್, ಬಲ ಶ್ವಾಸಕೋಶದ ಬ್ರಾಂಕಸ್ ಇಂಟರ್ಮೀಡಿಯಸ್ ಎಂಬ ಭಾಗದಲ್ಲಿ ಸಿಲುಕಿಕೊಂಡಿದೆ.

ಇದಾದ ಕೆಲವು ವಾರಗಳಲ್ಲಿ ಮಹಿಳೆಗೆ ಒಣ ಕೆಮ್ಮು ಮತ್ತು ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದೆ. ಹಲವಾರು ಆಸ್ಪತ್ರೆಗಳಿಗೆ ಭೇಟಿ ನೀಡಿದ್ದರು ಕಾರಣ ತಿಳಿದುಬಂದಿಲ್ಲ.

ಬಳಿಕ ಆಸ್ಟರ್ ಸಿಎಂಐ ವೈದ್ಯರು ಚೆಸ್ಟ್ ಎಕ್ಸ್-ರೇ ಮತ್ತು ಸಿಟಿ ಸ್ಕ್ಯಾನ್ ಸೇರಿದಂತೆ ವಿವರವಾದ ಸ್ಕ್ಯಾನ್‌ಗಳನ್ನು ಮಾಡಿಸಿದ್ದಾರೆ. ಈ ವೇಳೆ ಶ್ವಾಸಕೋಶದಲ್ಲಿ ಪಿನ್ ಸಿಲುಕಿಕೊಂಡಿರುವುದು ಕಂಡು ಬಂದಿದೆ.

ಆಸ್ಪತ್ರೆಯ ಇಂಟರ್ವೆನ್ಷನಲ್ ಪಲ್ಮನಾಲಜಿಸ್ಟ್ ಪ್ರಮುಖ ಸಲಹೆಗಾರ ಡಾ. ಸುನಿಲ್ ಕುಮಾರ್ ಕೆ, ಪಿನ್‌ ಅವರು ಮಾತನಾಡಿ, ಪಿನ್'ನ ಚೂಪಾದ ತುದಿ ಶ್ವಾಸಕೋಶಕ್ಕೆ ಚುಚ್ಚಿಕೊಂಡಿದ್ದು, ಸಾಮಾನ್ಯ ಉಪಕರಣಗಳೊಂದಿಗೆ ಅದನ್ನು ತೆಗೆದುಹಾಕುವುದು ಅಪಾಯಕಾರಿಯಾಗಿತ್ತು. ಆದ್ದರಿಂದ, ಫೋಗಾರ್ಟಿ ಬಲೂನ್ ಅನ್ನು ಬಳಸಿಕೊಂಡು ನಿಧಾನವಾಗಿ ಹೊರತೆಗೆದು ನಂತರ ವಿಶೇಷ ಫೋರ್ಸ್‌ಪ್ಸ್ ಬಳಸಿ ಹೊರತೆಗೆಯಲಾಯಿತು. ಇದೆಲ್ಲವನ್ನೂ ರೋಗಿಯು ನಿದ್ರಾ ಸ್ಥಿತಿಯಲ್ಲಿದ್ದಾಗಲೇ ನಡೆಸಲಾಯಿತು ಎಂದು ಮಾಹಿತಿ ನೀಡಿದ್ದಾರೆ.

ಮಹಿಳೆಯ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದು, ಉಸಿರಾಟದ ಸಮಸ್ಯೆ ಇಲ್ಲದೆ ಸ್ಥಿರ ಸ್ಥಿತಿಯಲ್ಲಿ ಮನೆಗೆ ಕಳುಹಿಸಲಾಗಿದೆ. ಈ ಪ್ರಕರಣದಿಂದ ಸಾಮಾನ್ಯ ಕೆಮ್ಮನ್ನು ನಿರ್ಲಕ್ಷಿಸಬಾರದು ಹಾಗೂ ಬಾಯಿಯ ಬಳಿ ಚೂಪಾದ ವಸ್ತುಗಳನ್ನು ಇರಿಸುವಾಗ ಜಾಗರೂಕರಾಗಿಬೇಕು ಎಂಬುದನ್ನು ತಿಳಿಯಬೇಕಾಗುತ್ತದೆ ಎಂದು ಆಸ್ಪತ್ರೆ ಹೇಳಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!

Video: ಕುದಿಯುತ್ತಿದ್ದ ಬೆಲ್ಲದ ಪಾಕಕ್ಕೆ ಬಿದ್ದ ಯುವಕ; ಅಣ್ಣನ ಸಾಲ ತೀರಿಸಲು ಕೆಲಸಕ್ಕೆ ಹೋಗಿದ್ದ ಯುವಕ ದಾರುಣ ಅಂತ್ಯ

ಬಿಜೆಪಿ MLC ಎನ್. ರವಿಕುಮಾರ್‌ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್

Cricket: ಪಂತ್‌ರಂತೆ ಆಡಲು ಪ್ರಯತ್ನಿಸಲ್ಲ, ಅವರ ಜೊತೆ ಆಡೋದು ದೊಡ್ಡ ಅನುಭವ: ಫಿಟ್ನೆಸ್ ಅಪ್ಡೇಟ್ ಕೊಟ್ಟ Dhruv Jurel