ಪ್ರಿಯಕರ ಅಮರನಾಥ್-ಸಂಯುಕ್ತ 
ರಾಜ್ಯ

ಕೋಲಾರ: ಗಂಡನಿಗೆ ಕೈಕೊಟ್ಟು ಬಂದಿದ್ದ ಗೃಹಿಣಿಯನ್ನು ಗರ್ಭೀಣಿ ಮಾಡಿ ಬಿಟ್ಟು ಹೋದ ಪತಿಯ ಸ್ನೇಹಿತ; ಬೀದಿಗೆ ಬಿದ್ದ ಮಹಿಳೆ!

ಮದುವೆಯಾಗಿ ಸುಂದರ ಜೀವನ ನಡೆಸಬೇಕಿದ್ದ ಗೃಹಿಣಿಯೊಬ್ಬಳು ಗಂಡನ ಸ್ನೇಹಿತನೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದು ನಂತರ ಆತನಿಗಾಗಿ ಗಂಡನನ್ನೇ ತೊರೆದು ಬಂದಿದ್ದಳು.

ಕೋಲಾರ: ಮದುವೆಯಾಗಿ ಸುಂದರ ಜೀವನ ನಡೆಸಬೇಕಿದ್ದ ಗೃಹಿಣಿಯೊಬ್ಬಳು ಗಂಡನ ಸ್ನೇಹಿತನೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದು ನಂತರ ಆತನಿಗಾಗಿ ಗಂಡ ಹರೀಶ್ ನನ್ನು ತೊರೆದು ಬಂದಿದ್ದಳು. ಇದೀಗ ಐದು ತಿಂಗಳ ಗರ್ಭೀಣಿ ಅಂತ ಗೊತ್ತಾಗುತ್ತಲೇ ಪ್ರಿಯಕರ ಅಮರನಾಥ್ ಆಕೆಯನ್ನು ಬಿಟ್ಟು ಓಡಿ ಹೋಗಿದ್ದಾನೆ.

ಕೋಲಾರದ ಶ್ರೀನಿವಾಸಪುರ ಪಟ್ಟಣದ ಸುಭಾಶ್ ನಗರದ ಅಮರನಾಥ್ ವಂಚಿಸಿದ್ದಾನೆ ಎಂದು ತಿಮ್ಮಸಂದ್ರ ಗ್ರಾಮದ ಸಂತ್ರಸ್ತ ಮಹಿಳೆ ಸಂಯುಕ್ತ ಆರೋಪಿಸಿದ್ದಾಳೆ. ಅಲ್ಲದೆ ತಾನೂ ಐದು ತಿಂಗಳ ಗರ್ಭೀಣಿ ಎಂಬ ವಿಚಾರ ತಿಳಿಯುತ್ತಲೇ ಪ್ರಿಯಕರ ಮದುವೆಯಾಗಲು ನಿರಾಕರಿಸಿದ್ದಾನೆ ಎಂದು ಸಂಯುಕ್ತ ಆರೋಪಿಸಿದ್ದಾಳೆ. ಪ್ರಿಯಕರನಿಗಾಗಿ ಗಂಡನನ್ನೇ ಬಿಟ್ಟು ಬಂದಿದ್ದ ಮಹಿಳೆ ಇದೀಗ ಬೀದಿಗೆ ಬಿದ್ದಿದ್ದಾಳೆ. ಗಂಡನನ್ನು ಬಿಟ್ಟು ಬಂದಿದ್ದ ಸಂಯುಕ್ತಗೆ ಪ್ರಿಯಕರ ಸಹ ಕೈಕೊಟ್ಟಿದ್ದಾನೆ. ಈಗ ಯಾವುದೇ ಆಸರೆ ಇಲ್ಲದೆ ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾಳೆ. ನನಗೆ ನ್ಯಾಯ ಬೇಕು ಎಂದು ಸಂಯುಕ್ತ ಯುವಕನ ಮನೆಮುಂದೆ ಅಂಬೇಡ್ಕರ್ ಫೋಟೋ ಹಿಡಿದು ಪ್ರತಿಭಟನೆ ನಡೆಸುತ್ತಿದ್ದಾಳೆ. ಶ್ರೀನಿವಾಸಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತದ ಚುನಾವಣಾ ವ್ಯವಸ್ಥೆಯ ವಿಶ್ವಾಸಾರ್ಹತೆ ಬಗ್ಗೆ ಜಾಗತಿಕವಾಗಿ ಅತ್ಯುತ್ತಮ ಸ್ಪಷ್ಟ ಅಭಿಪ್ರಾಯ- ಟ್ರಂಪ್ ಹೇಳಿಕೆ ಬೆನ್ನಲ್ಲೇ MEA ಪ್ರತಿಕ್ರಿಯೆ!

ಮಾಜಿ ಸಚಿವ ಬಿ. ಸಿ. ನಾಗೇಶ್ ನಿಧನ: ನಾಳೆ ತಿಪಟೂರಿನಲ್ಲಿ ಅಂತ್ಯಕ್ರಿಯೆ!

ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ನಕಲಿ ಔಷಧಿ ಮರುಪ್ಯಾಕಿಂಗ್ ಬೃಹತ್ ಜಾಲ ಪತ್ತೆ: 5 ಕೋಟಿ ರೂ. ಮೌಲ್ಯದ ವಸ್ತುಗಳು ವಶಕ್ಕೆ!

ಪಸಿಂದು ಗೋಲ್ಡನ್ ಡಕೌಟ್: ಆಡಿದ 2ನೇ ಪಂದ್ಯದಲ್ಲೇ ಕುಂಬ್ಳೆ ದಾಖಲೆ ಸರಿಗಟ್ಟಿದ Team India ಯುವ ಸ್ಪಿನ್ನರ್ ಮಾನವ್ ಸುತಾರ್!

ದೇವೇಗೌಡರ ಕೂಸನ್ನು ಹಾದಿ ತಪ್ಪಿಸಿ ಯಾರಪ್ಪನಿಗೆ ಕೊಡಲು ಹೊರಟಿದ್ದೀರಿ ಮಿಸ್ಟರ್ ಡಿ.ಕೆ. ಶಿವಕುಮಾರ್? ತಾಕತ್ ಇದ್ರೆ ಚರ್ಚೆಗೆ ಬನ್ನಿ, ಕುಮಾರಸ್ವಾಮಿ ಸವಾಲು!