ರಣದೀಪ್ ಸಿಂಗ್ ಸುರ್ಜೇವಾಲಾ 
ರಾಜ್ಯ

ಸಂಪತ್ತಿನ ಅಸಮತೋಲನ, ದೇಶದಲ್ಲಿ ಆರ್ಥಿಕ ಸಂಕಷ್ಟ; ನಿರುದ್ಯೋಗ ತಾಂಡವ: ರಣದೀಪ್ ಸಿಂಗ್ ಸುರ್ಜೇವಾಲಾ

ಆಧಾರ್-MGNREGA ಕಾರ್ಡ್ ಲಿಂಕ್ ಮಾಡುವುದರಿಂದ 7 ಕೋಟಿ ನೋಂದಾಯಿತ ಕಾರ್ಮಿಕರಿಗೆ ಅವರ ಸರಿಯಾದ ವೇತನ ಮತ್ತು ಉದ್ಯೋಗವೇ ಮಂಗಮಾಯವಾಗಿದೆ’ ಎಂದು ಟೀಕಿಸಿದ್ದಾರೆ.

ಬೆಂಗಳೂರು: ಬಿಜೆಪಿಯು MGNREGA ಸರಿಯಾಗಿ ನಿರ್ವಹಣೆ ಮಾಡದ ಕಾರಣಕ್ಕೆ ಸುಮಾರು 7 ಕೋಟಿ ಜನರು ಕೆಲಸವನ್ನೇ ಕಳೆದುಕೊಂಡಿದ್ದಾರೆ. ಈ ಯೋಜನೆಯು ಬಡವರಿಗೆ ಸಹಾಯ ಮಾಡುವ ಬದಲು ಅವರನ್ನು ಕೆಲಸದಿಂದ ಹೊರಗಿಡುವ ಸಾಧನವಾಗಿ ಬಳಸಲಾಗುತ್ತಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಸುರ್ಜೇವಾಲಾ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಆಧಾರ್-MGNREGA ಕಾರ್ಡ್ ಲಿಂಕ್ ಮಾಡುವುದರಿಂದ 7 ಕೋಟಿ ನೋಂದಾಯಿತ ಕಾರ್ಮಿಕರಿಗೆ ಅವರ ಸರಿಯಾದ ವೇತನ ಮತ್ತು ಉದ್ಯೋಗವೇ ಮಂಗಮಾಯವಾಗಿದೆ’ ಎಂದು ಟೀಕಿಸಿದ್ದಾರೆ.

MGNREGA ಅಡಿಯಲ್ಲಿ ಒಟ್ಟು ವ್ಯಕ್ತಿ-ದಿನಗಳ ಕೆಲಸದ ಅವಧಿ 2023–24ರಲ್ಲಿ 312.37 ಕೋಟಿಯಿಂದ ಫೆಬ್ರವರಿ 2025 ರ ವೇಳೆಗೆ ಕೇವಲ 239.67 ಕೋಟಿಗೆ ಇಳಿದಿದೆ ಮತ್ತು ಪ್ರತಿ ಮನೆಯ ಸರಾಸರಿ ಕೆಲಸದ ದಿನಗಳು 52.08 ರಿಂದ ಕೇವಲ 44.62 ಕ್ಕೆ ಇಳಿದಿವೆ. ಈ ವರ್ಷದ MGNREGA ಬಜೆಟ್ ₹86,000 ಕೋಟಿಯಿಂದ ಹಿಂದಿನ ಹಣಕಾಸು ವರ್ಷಕ್ಕೆ ಹೋಲಿಸಿದರೆ ರೂ. 9,754 ಕೋಟಿ ಕಡಿಮೆಯಾಗಿದೆ.

ಕಾಂಗ್ರೆಸ್ 100 ದಿನಗಳ ಕೆಲಸವನ್ನು ಖಾತರಿಪಡಿಸಿ ಕ್ರಾಂತಿಕಾರಿ ಯೋಜನೆಯನ್ನು ಜಾರಿಗೆ ತಂದಿತ್ತು. ಆದರೆ ಈ ಭ್ರಷ್ಟ ಬಿಜೆಪಿ ಅದನ್ನು ಕೇವಲ 45 ಕ್ಕೆ ಇಳಿಸಿದೆ, ಈ ಕ್ರಮವನ್ನು ಕಾರ್ಮಿಕ ಸಂಘಗಳು ತೀವ್ರವಾಗಿ ವಿರೋಧಿಸುತ್ತಿವೆ.

ಬಿಜೆಪಿ ಆಡಳಿತದಲ್ಲಿ, ಭಾರತವು 2023 ರ ಜಾಗತಿಕ ಹಸಿವು ಸೂಚ್ಯಂಕದಲ್ಲಿ 125 ದೇಶಗಳಲ್ಲಿ 111 ನೇ ಸ್ಥಾನಕ್ಕೆ ಕುಸಿದಿದೆ, ಪಾಕಿಸ್ತಾನ, ನೇಪಾಳ ಮತ್ತು ಬಾಂಗ್ಲಾದೇಶಕ್ಕಿಂತ ಕೆಳಗಿದೆ. ಈ ಆತಂಕಕಾರಿ ಕುಸಿತವು ಮಕ್ಕಳ ಅಪೌಷ್ಟಿಕತೆ, ಹಸಿವು ಮತ್ತು ವ್ಯಾಪಕ ಆಹಾರ ಅಭದ್ರತೆಯನ್ನು ಪರಿಹರಿಸುವಲ್ಲಿ ಬಿಜೆಪಿ ಸರ್ಕಾರದ ವೈಫಲ್ಯವನ್ನು ಎತ್ತಿ ಹಿಡಿಯುತ್ತದೆ’ ಎಂದು ಅಂಕಿ ಅಂಶ ಸಹಿತ ವಿವರಿಸಿದರು.

ಭಾರತ ಸರ್ಕಾರದ ವಿವಿಧ ಇಲಾಖೆಗಳು ಮತ್ತು ಸಾರ್ವಜನಿಕ ವಲಯದ ಉದ್ಯಮಗಳಲ್ಲಿ 30 ಲಕ್ಷಕ್ಕೂ ಹೆಚ್ಚು ಹುದ್ದೆಗಳು ಖಾಲಿಯಿದ್ದು, ಬಿಜೆಪಿ ಸರ್ಕಾರವು ಸಾಕಷ್ಟು ಉದ್ಯೋಗಾವಕಾಶಗಳನ್ನು ಒದಗಿಸುವಲ್ಲಿ ವಿಫಲವಾಗಿದೆ ಎಂದು ಹೇಳಿದರು. ಭಾರತದಲ್ಲಿ ನಿರುದ್ಯೋಗವು ಆತಂಕಕಾರಿ ಮಟ್ಟವನ್ನು ತಲುಪಿದೆ, ಆದರೆ ಸರ್ಕಾರವು ಪರಿಣಾಮಕಾರಿ ಕ್ರಮ ಕೈಗೊಳ್ಳಲು ವಿಫಲವಾಗಿದೆ ಎಂದು ಅವರು ಹೇಳಿದರು.

ಬಡವರು ಬಳಲುತ್ತಿರುವಾಗ ಶ್ರೀಮಂತರು ಶ್ರೀಮಂತರಾಗುತ್ತಿರುವುದರಿಂದ ಭಾರತದಲ್ಲಿ ಸಂಪತ್ತಿನ ಅಸಮಾನತೆ ಹೆಚ್ಚುತ್ತಿದೆ ಎಂದು ಅವರು ಹೇಳಿದರು. 2023 ರ ಜಾಗತಿಕ ಹಸಿವು ಸೂಚ್ಯಂಕದಲ್ಲಿ ಭಾರತವು 125 ದೇಶಗಳಲ್ಲಿ 111 ನೇ ಸ್ಥಾನಕ್ಕೆ ಕುಸಿದಿದೆ ಮತ್ತು ಜೀವಿತಾವಧಿ, ಶಿಕ್ಷಣ ಮತ್ತು ಆದಾಯವನ್ನು ಅಳೆಯುವ UNDP ಯ ಮಾನವ ಅಭಿವೃದ್ಧಿ ಸೂಚ್ಯಂಕ (2022)ದಲ್ಲಿ ಭಾರತವು 193 ರಲ್ಲಿ 134 ನೇ ಸ್ಥಾನದಲ್ಲಿದೆ ಎಂದಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕರ್ನಾಟಕ ಜಾಗತಿಕ ನಾವೀನ್ಯತೆ ತಾಣವಾಗಿ ಪರಿವರ್ತಿಸಲು ಮೂರು ನೀತಿ ಅನಾವರಣಗೊಳಿಸಿದ ಸಿಎಂ

'Glad Was In Audience': ಮತ್ತೆ ಪ್ರಧಾನಿಯನ್ನು ಹಾಡಿ ಹೊಗಳಿದ ಶಶಿ ತರೂರ್, ಗುಲಾಮ ಮನಸ್ಥಿತಿ ಕುರಿತ ಹೇಳಿಕೆ, ಕಾಂಗ್ರೆಸ್ ಕೆಂಡ!

'ವಾರಕ್ಕೆ 72 ಗಂಟೆ ಕೆಲಸ, ಮನಸ್ಥಿತಿ ಬದಲಾಗಬೇಕು, ಪ್ರಧಾನಿ ಮೋದಿ ಆದರ್ಶ': ಚೀನಾ ಹಿಂದಿಕ್ಕಲು ಇನ್ಫೋಸಿಸ್ ನಾರಾಯಣ ಮೂರ್ತಿ '9,9,6' ಸೂತ್ರ!

Delhi blast: ಸ್ಫೋಟಕ್ಕೂ ಮುನ್ನ 'ಆತ್ಮಾಹುತಿ ಬಾಂಬ್ ದಾಳಿ' ಬಗ್ಗೆ ಮಾತಾಡಿದ ಡಾ. ಉಮರ್; ವಿಡಿಯೋದಲ್ಲಿ ಉಗ್ರ ಹೇಳಿದ್ದೇನು?

'ಬೆಂಗಳೂರು ಟೆಕ್ ಸಮ್ಮಿಟ್ 2025'ಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ

SCROLL FOR NEXT