ಬೆಂಗಳೂರು: ಪ್ರಧಾನಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಪಿ ಕೆ ಮಿಶ್ರಾ ಅವರು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ಗೆ ಭೇಟಿ ನೀಡಿ ಹಲವಾರು ಪ್ರಮುಖ ಸ್ಥಳೀಯ ರಕ್ಷಣಾ ಯೋಜನೆಗಳನ್ನು ಪರಿಶೀಲಿಸಿದರು.
ಪಿ ಕೆ ಮಿಶ್ರಾ ಅವರೊಂದಿಗೆ ಹೆಚ್ಎಎಲ್ ಸಿಎಂಡಿ ಡಿ ಕೆ ಸುನಿಲ್ ಮತ್ತು ಮಂಡಳಿಯ ಸದಸ್ಯರು ಸಾಥ್ ನೀಡಿದ್ದರು.
ಮಿಶ್ರಾ ಅವರು, ಎಲ್'ಸಿಎ ಎಂಕೆ 2 ಹ್ಯಾಂಗರ್, ತೇಜಸ್ ಅಸೆಂಬ್ಲಿ ಮತ್ತು ಏರೋಸ್ಪೇಸ್ ವಿಭಾಗಗಳಿಗೆ ಭೇಟಿ ನೀಡಿದರು. ಈ ವೇಳೆ ಎಲ್'ಸಿಎ ತೇಜಸ್ ಎಂಕೆ 1ಎ ನಿರ್ಮಾಣವನ್ನು ಪರಿಶೀಲಿಸಿದರು.
ಪ್ರಧಾನಮಂತ್ರಿಗಳ ಪ್ರಧಾನ ಕಾರ್ಯದರ್ಶಿಗಳಿಗೆ ಹೆಚ್ಎಎಲ್ ಪ್ರಚಂಡ್. LUH, ಧ್ರುವ್ ಮತ್ತು HTT 40 ಸೇರಿದಂತೆ ಸ್ಥಳೀಯ ಯೋಜನೆಗಳನ್ನು ಪ್ರಸ್ತುತ ಪಡಿಸಲಾಯಿತು.
ಮಿಶ್ರಾ ಅವರು ಏರೋಸ್ಪೇಸ್ ವಿಭಾಗದಲ್ಲಿ, GSLV Mk III, PSLV ಬಿಡಿ ಭಾಗಗಳು ಮತ್ತು HAL ನ ಗಗಯಾನ್ ಮಿಷನ್ ಘಟಕಗಳಿಗೆ ಭೇಟಿ ನೀಡಿದರು.
ಇಸ್ರೋ ಅಧ್ಯಕ್ಷ ವಿ ನಾರಾಯಣನ್, ಹೆಚ್ಎಎಲ್ ಹಿರಿಯ ಅಧಿಕಾರಿಗಳು SSLV ತಂತ್ರಜ್ಞಾನ ಸೇರಿದಂತೆ ಇತರ ಯೋಜನೆಗಳ ಬಗ್ಗೆ ವಿವರಿಸಿದರು. ಈ ವೇಳೆ ಭಾರತದ ರಕ್ಷಣಾ ಸ್ವಾವಲಂಬನೆಯನ್ನು ಬಲಪಡಿಸುವಲ್ಲಿ ಹೆಚ್ಎಎಲ್ ಪಾತ್ರವನ್ನು ಮಿಶ್ರಾ ಅವರು ಶ್ಲಾಘಿಸಿದರು.