ಕೋರ್ಟ್ ಮುಂದೆ ಹಾಜರಾದ ದೂರದಾರ (ಗುರುತನ್ನು ಮರೆಮಾಡಲು ಮುಖವನ್ನು ಕಪ್ಪು ಬಟ್ಟೆಯಿಂದ ಮುಚ್ಚಿರುವ ವ್ಯಕ್ತಿ) Photo | Express
ರಾಜ್ಯ

Dharmasthala ಹಲವು ಶವಗಳ ಅಂತ್ಯಕ್ರಿಯೆ ಕೇಸ್: ಬಿಗಿ ಭದ್ರತೆಯಲ್ಲಿ ಕೋರ್ಟ್ ಮುಂದೆ ಹೇಳಿಕೆ ದಾಖಲಿಸಿದ ಹೆಣಗಳ ಹೂತ್ತಿದ್ದ ವ್ಯಕ್ತಿ!

ಧರ್ಮಸ್ಥಳ ಸಾಮೂಹಿಕ ಅಂತ್ಯಕ್ರಿಯೆ ಪ್ರಕರಣದ ದೂರುದಾರರಿಗೆ ಸಾಕ್ಷಿಗಳ ರಕ್ಷಣಾ ಯೋಜನೆ, 2018ರ ಅಡಿಯಲ್ಲಿ ಸೂಕ್ತ ಭದ್ರತೆ ಮತ್ತು ರಕ್ಷಣೆ ನೀಡಲಾಗಿದೆ.

ಮಂಗಳೂರು: ಧರ್ಮಸ್ಥಳ ಸಾಮೂಹಿಕ ಅಂತ್ಯಕ್ರಿಯೆ ಪ್ರಕರಣ ಸಂಬಂಧ ಇಂದು ದಕ್ಷಿಣ ಕನ್ನಡದ ಬೆಳ್ತಂಗಡಿಯ ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್‌ಸಿ ನ್ಯಾಯಾಲಯದ ಮುಂದೆ ಹೆಣಗಳನ್ನು ಹೂತಿದ್ದ ವ್ಯಕ್ತಿ ತಮ್ಮ ಹೇಳಿಕೆ ದಾಖಲಿಸಿದ್ದಾರೆ. BNSSನ ಸೆಕ್ಷನ್ 183 (CRPCಯ ಸೆಕ್ಷನ್ 164) ಅಡಿಯಲ್ಲಿ ಹೇಳಿಕೆ ದಾಖಲಾಗಿದೆ.

ದೂರುದಾರರನ್ನು ಪ್ರತಿನಿಧಿಸುವ ವಕೀಲರಾದ ಓಜಸ್ವಿ ಗೌಡ ಮತ್ತು ಸಚಿನ್ ದೇಶಪಾಂಡೆ, ದೂರುದಾರರು ನ್ಯಾಯಾಲಯಕ್ಕೆ ಹೇಳಿಕೆ ನೀಡುವಾಗ ತಮ್ಮಲ್ಲಿ ಒಬ್ಬರು ನ್ಯಾಯಾಲಯದಲ್ಲಿ ಹಾಜರಿರಬೇಕು ಎಂದು ಮೊದಲೇ ದೃಢವಾಗಿ ಮತ್ತು ಸ್ಪಷ್ಟವಾಗಿ ಸೂಚಿಸಿದ್ದರು. ದೂರುದಾರರು ತಾನು ಅನಕ್ಷರಸ್ಥ, ಇದುವರೆಗೆ ಯಾವುದೇ ನ್ಯಾಯಾಲಯಕ್ಕೆ ಹೋಗಿಲ್ಲ ಮತ್ತು ಪ್ರಕ್ರಿಯೆಯಲ್ಲಿ ಗಂಭೀರ ತೊಂದರೆ ವ್ಯಕ್ತಪಡಿಸಿದ್ದರು. ಹೀಗಾಗಿ ನಾವು ಈ ಅಂಶದ ಬಗ್ಗೆ ನ್ಯಾಯಾಲಯಕ್ಕೆ ಸ್ಪಷ್ಟವಾಗಿ ತಿಳಿಸಿದ್ದೇವು. ಆದಾಗ್ಯೂ, ಕೋರ್ಟ್ ವಕೀಲರ ಉಪಸ್ಥಿತಿಯನ್ನು ಒಪ್ಪಲಿಲ್ಲ. ನಮ್ಮ ಅನುಪಸ್ಥಿತಿಯಲ್ಲಿ ದೂರುದಾರನ ಹೇಳಿಕೆಗಳನ್ನು ದಾಖಲಿಸಿಕೊಳ್ಳಲು ಪ್ರಾರಂಭಿಸಿತು ಎಂದು ವಕೀಲರು ಹೇಳಿದರು.

ಧರ್ಮಸ್ಥಳ ಸಾಮೂಹಿಕ ಅಂತ್ಯಕ್ರಿಯೆ ಪ್ರಕರಣದ ದೂರುದಾರರಿಗೆ ಸಾಕ್ಷಿಗಳ ರಕ್ಷಣಾ ಯೋಜನೆ, 2018ರ ಅಡಿಯಲ್ಲಿ ಸೂಕ್ತ ಭದ್ರತೆ ಮತ್ತು ರಕ್ಷಣೆ ನೀಡಲಾಗಿದೆ. ಇದಕ್ಕಾಗಿ ದಕ್ಷಿಣ ಕನ್ನಡ ಜಿಲ್ಲಾ ನ್ಯಾಯಾಂಗ, ದಕ್ಷಿಣ ಕನ್ನಡದ ಪೊಲೀಸ್ ಅಧಿಕಾರಿಗಳು ಮತ್ತು ಕರ್ನಾಟಕ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸುತ್ತೇವೆ ಎಂದು ದೂರುದಾರ ಪರ ವಕೀಲರು ತಿಳಿಸಿದ್ದಾರೆ.

ಧರ್ಮಸ್ಥಳದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅತ್ಯಾಚಾರ ಮತ್ತು ಹತ್ಯೆಯಾದ ಶಾಲಾ ಬಾಲಕಿಯರು ಮತ್ತು ಮಹಿಳೆಯರ ಶವಗಳನ್ನು ಹೂಳಲು ಬಲವಂತ ಮತ್ತು ಬೆದರಿಕೆ ಹಾಕಲಾಗಿತ್ತು ಎಂದು ಆರೋಪಿಸಿ ವ್ಯಕ್ತಿಯೊಬ್ಬರು ದಕ್ಷಿಣ ಕನ್ನಡ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಧರ್ಮಸ್ಥಳ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪುರುಷರು ಮತ್ತು ಮಹಿಳೆಯರ ಹತ್ಯೆಗಳ ಕುರಿತು ತನಿಖೆಯನ್ನು ಕೋರಿರುವ ವ್ಯಕ್ತಿ ಇದೇ ವೇಳೆ ತನಗೆ ಮತ್ತು ತನ್ನ ಕುಟುಂಬಕ್ಕೆ ರಕ್ಷಣೆ ಕೋರಿದ್ದಾರೆ. ತನ್ನ ಗುರುತನ್ನು ಬಹಿರಂಗಪಡಿಸದ ವ್ಯಕ್ತಿ ಸಲ್ಲಿಸಿದ ದೂರಿನಲ್ಲಿರುವ ವಿಷಯವು ಧರ್ಮಸ್ಥಳ ಗ್ರಾಮದಲ್ಲಿ ನಡೆದಿರುವ ಆಪಾದಿತ ಕೊಲೆಗಳು, ಅತ್ಯಾಚಾರ ಮತ್ತು ಕೊಲೆಗಳು ಮತ್ತು ಈ ಅಪರಾಧ ಚಟುವಟಿಕೆಗಳನ್ನು ಮುಚ್ಚಿಹಾಕಿರುವ ಕುರಿತಾಗಿದೆ. ಅವರ ದೂರಿನ ಆಧಾರದ ಮೇಲೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ರಾಜ್ಯದಲ್ಲಿ ಒಪ್ಪಂದವಿಲ್ಲದೆ 'ಮನೆಗೆಲಸದವರ' ನೇಮಕ ಮಾಡಿಕೊಳ್ಳುವಂತಿಲ್ಲ: ಕರಡು ಮಸೂದೆಯಲ್ಲಿ ಏನಿದೆ?

ಆಂಧ್ರ vs ಕರ್ನಾಟಕ: 'ಆಂಧ್ರ ಪ್ರದೇಶದ ಹೂಡಿಕೆಗಳೂ ಖಾರ, ನೆರೆಹೊರೆಯವರ ಹೊಟ್ಟೆ ಉರಿಯುತ್ತಿದೆ': ಕರ್ನಾಟಕ ಕುರಿತು ನಾರಾ ಲೋಕೇಶ್ ವ್ಯಂಗ್ಯ!

ನಕಲಿ ನೋಟು ಮುದ್ರಿಸುತ್ತಿದ್ದ ಬೃಹತ್ ಜಾಲ ಪತ್ತೆ, 1 ಕೋಟಿ ಮೌಲ್ಯದ 'fake currency' ಪತ್ತೆ

ಸಿಲಿಗುರಿಯಲ್ಲಿ 'ಮಹಾಕಾಲ' ದೇವಸ್ಥಾನ ನಿರ್ಮಾಣ: ಪಶ್ಚಿಮ ಬಂಗಾಳ ಸಿಎಂ ಮಮತಾ

ಬೆದರಿಕೆ ನಡುವೆ 'ಆರ್ ಎಸ್ ಎಸ್' ಕುರಿತು ಸಿಎಂಗೆ ಮತ್ತೊಂದು ಪತ್ರ ಬರೆದ ಪ್ರಿಯಾಂಕ್ ಖರ್ಗೆ! ಇದರಲ್ಲಿ ಏನಿದೆ?

SCROLL FOR NEXT