ಸಾಂದರ್ಭಿಕ ಚಿತ್ರ 
ರಾಜ್ಯ

ಹಾಸನ ಜಿಲ್ಲೆಯಲ್ಲಿ ಹಠಾತ್ ಹೃದಯಾಘಾತದಿಂದ ಸಾವುಗಳ ಸಂಖ್ಯೆ ಹೆಚ್ಚಳವಾಗಿಲ್ಲ: ತನಿಖಾ ವರದಿ ಹೇಳುವುದೇನು?

ಕಿರಿಯ ವಯಸ್ಕರಲ್ಲಿ ಹಠಾತ್ ಸಾವುಗಳು ಸಂಭವಿಸುತ್ತಿರುವುದು ಅಕಾಲಿಕ ಹೃದಯರಕ್ತನಾಳದ ಕಾಯಿಲೆಯ ಹೆಚ್ಚುತ್ತಿರುವ ಹೊರೆಯನ್ನು ಒತ್ತಿಹೇಳುತ್ತದೆ ಎಂದು ವರದಿ ಹೇಳಿದೆ.

ಮೇ-ಜೂನ್‌ ತಿಂಗಳಲ್ಲಿ ಹಾಸನ ಜಿಲ್ಲೆಯೊಂದರಲ್ಲಿಯೇ 40 ದಿನಗಳಲ್ಲಿ ಹೃದಯ ಸಂಬಂಧಿ ಸಮಸ್ಯೆಗಳಿಂದ 24 ಮಂದಿ ಹಠಾತ್ ಸಾವು ಕಂಡಿದ್ದಾರೆ. ಈ ಸಾವುಗಳಲ್ಲಿ 14 ಸಾವುಗಳು 45 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದರೆ, 10 ಮಂದಿ 45 ವರ್ಷ ಮೇಲ್ಪಟ್ಟವರಾಗಿದ್ದಾರೆ.

ಸಾವುಗಳ ಹಿಂದಿನ ಸಂಗತಿಗಳು ದೃಢಪಡುವ ಮೊದಲೇ, ತಜ್ಞರು, ರಾಜಕಾರಣಿಗಳು ಮತ್ತು ಸಾರ್ವಜನಿಕರ ಒಂದು ವಿಭಾಗವು ಹೃದಯ ಸಂಬಂಧಿ ಸಾವುಗಳಲ್ಲಿ ಹಠಾತ್ ಹೆಚ್ಚಳವು ಕೋವಿಡ್ -19 ಲಸಿಕೆಯಿಂದ ರಕ್ತ ಹೆಪ್ಪುಗಟ್ಟುವಿಕೆಯಿಂದ ಉಂಟಾಗಿದೆ, ಕೋವಿಡ್ ಲಸಿಕೆ ಹೃದಯರಕ್ತನಾಳ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ಭಾವಿಸಿ ಸುದ್ದಿ ಹರಿಸಿದ್ದಾರೆ.

ರಾಜ್ಯ ಸರ್ಕಾರವು ಬೆಂಗಳೂರಿನ ಜಯದೇವ ಹೃದಯ ಸಂಬಂಧಿ ವಿಜ್ಞಾನ ಸಂಸ್ಥೆ (SJICS) ನಿರ್ದೇಶಕರಿಗೆ ಸಾವುಗಳ ತನಿಖೆಗೆ ಆದೇಶಿಸಿತು. ಜುಲೈ 10 ರಂದು ಹೊರಬಂದ ತನಿಖಾ ವರದಿಯು, ಜಿಲ್ಲೆಯಲ್ಲಿ ಸಂಭವಿಸಿದ ಹಠಾತ್ ಸಾವುಗಳಲ್ಲಿ ಹಠಾತ್ ಸಾವಿನ ಹೆಚ್ಚಳದ ಬಗ್ಗೆ ವರದಿಯಾಗಿಲ್ಲ.

ಹಾಸನ ಜಿಲ್ಲೆಯಲ್ಲಿ ಹಿಂದಿನ ತಿಂಗಳುಗಳಂತೆಯೇ ಮೇ ಜೂನ್ ತಿಂಗಳಲ್ಲಿ ಕಂಡುಬಂದಿತ್ತು. ಕಳೆದ ಆರು ತಿಂಗಳಲ್ಲಿ ಬೆಂಗಳೂರಿನ SJICS ಮತ್ತು ಮೈಸೂರು ಮತ್ತು ಕಲಬುರಗಿಯಲ್ಲಿರುವ ಅದರ ಬಾಹ್ಯ ಕೇಂದ್ರಗಳಲ್ಲಿನ ಹೃದಯ ಪ್ರಕರಣಗಳ ವಿಶ್ಲೇಷಣೆಯು ಹೃದಯ ಸಂಬಂಧಿ ಸಾವುಗಳಲ್ಲಿ ಯಾವುದೇ ಹೆಚ್ಚಳವನ್ನು ತೋರಿಸಿಲ್ಲ.

ಮೃತದೇಹಗಳ ಪರೀಕ್ಷೆಯ ದತ್ತಾಂಶ, ಕ್ಲಿನಿಕಲ್ ದತ್ತಾಂಶ ಮತ್ತು ಕುಟುಂಬ ಸದಸ್ಯರಿಂದ ಪಡೆದ ಮೃತ ವ್ಯಕ್ತಿಯ ಹಿನ್ನೆಲೆ ನೋಡಿದಾಗ, ಪ್ರತಿ ಪ್ರಕರಣದಲ್ಲೂ ಸಾವಿನ ಕಾರಣದ ಬಗ್ಗೆ ನಿರ್ಣಾಯಕ ತೀರ್ಮಾನಗಳು ಸೀಮಿತವಾಗಿವೆ ಎಂದು ವರದಿ ಹೇಳಿದೆ.

ಕಿರಿಯ ವಯಸ್ಕರಲ್ಲಿ ಹಠಾತ್ ಸಾವುಗಳು ಸಂಭವಿಸುತ್ತಿರುವುದು ಅಕಾಲಿಕ ಹೃದಯರಕ್ತನಾಳದ ಕಾಯಿಲೆಯ ಹೆಚ್ಚುತ್ತಿರುವ ಹೊರೆಯನ್ನು ಒತ್ತಿಹೇಳುತ್ತದೆ ಎಂದು ವರದಿ ಹೇಳಿದೆ.

ಹಾಸನ ಜಿಲ್ಲೆಗಳಲ್ಲಿನ ಸಾವುಗಳು ಹಲವರನ್ನು ಬೆಚ್ಚಿಬೀಳಿಸಿದೆ. ಹೃದಯರಕ್ತನಾಳದ ಕಾಯಿಲೆ (CVD) ಕರ್ನಾಟಕದಲ್ಲಿ ಮಾತ್ರವಲ್ಲದೆ, ಭಾರತದಾದ್ಯಂತ, ಕೋವಿಡ್ -19 ಸಾಂಕ್ರಾಮಿಕ ರೋಗ ಮತ್ತು ಲಸಿಕೆಗಳು ಬರುವ ಮೊದಲೇ ಆರೋಗ್ಯ ಕಾಳಜಿ ವಿಷಯವಾಗಿತ್ತು. ಕೋವಿಡ್ -19 ಲಸಿಕೆಗಳು ಮತ್ತು ಹೃದಯ ಸಂಬಂಧಿತ ಘಟನೆಗಳು ಅಥವಾ ಸಾವುಗಳ ನಡುವಿನ ಸಂಬಂಧವನ್ನು ನಿರ್ಣಾಯಕವಾಗಿ ಸಾಬೀತುಪಡಿಸುವಲ್ಲಿ ಅಂತಾರಾಷ್ಟ್ರೀಯ ಅಧ್ಯಯನಗಳು ವಿಫಲವಾಗಿವೆ.

ಗ್ಲೋಬಲ್ ಬರ್ಡನ್ ಆಫ್ ಡಿಸೀಸ್ ಅಧ್ಯಯನದ ಪ್ರಕಾರ, ಭಾರತದಲ್ಲಿ ಸಿವಿಡಿ ಸಾವಿನ ಪ್ರಮಾಣ 1 ಲಕ್ಷ ಜನಸಂಖ್ಯೆಗೆ 272 ರಷ್ಟಿದ್ದು, ಇದು ಜಾಗತಿಕ ಸರಾಸರಿ 235/1 ಲಕ್ಷ ಜನಸಂಖ್ಯೆಗಿಂತ ಹೆಚ್ಚಾಗಿದೆ.

ಇಂಡಿಯನ್ ಜರ್ನಲ್ ಆಫ್ ಫೋರೆನ್ಸಿಕ್ ಅಂಡ್ ಕಮ್ಯುನಿಟಿ ಮೆಡಿಸಿನ್ ಹೇಳುವಂತೆ ಕರ್ನಾಟಕದಲ್ಲಿ ಸಿವಿಡಿ ಒಂದು ಪ್ರಮುಖ ಆರೋಗ್ಯ ಕಾಳಜಿಯಾಗಿದ್ದು, 40 ವರ್ಷಕ್ಕಿಂತ ಹೆಚ್ಚಿನವರಲ್ಲಿ ಸಾವಿಗೆ ಪ್ರಮುಖ ಕಾರಣವಾಗಿದೆ. ರಾಜ್ಯದ ನಗರ ಪ್ರದೇಶಗಳಲ್ಲಿ ಸುಮಾರು ಶೇಕಡಾ 18ರಷ್ಟು ವಯಸ್ಕರು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಸುಮಾರು ಶೇಕಡಾ 16ರಷ್ಟು ಜನರು ಮುಂದಿನ ದಶಕದಲ್ಲಿ ಹೃದಯಾಘಾತ ಅಥವಾ ಪಾರ್ಶ್ವವಾಯುವಿನಂತಹ ಗಂಭೀರ ಹೃದಯ ಸಂಬಂಧಿ ಸಮಸ್ಯೆಗಳನ್ನು ಅನುಭವಿಸುವ ನಿರೀಕ್ಷೆಯಿದೆ.

ಹಾಸನ ಜಿಲ್ಲೆಯಲ್ಲಿ ಮೃತಪಟ್ಟವರಲ್ಲಿ ಅನೇಕರು ಧೂಮಪಾನ, ಮದ್ಯಪಾನ, ಬೊಜ್ಜು, ಅಧಿಕ ರಕ್ತದೊತ್ತಡ ಅಥವಾ ಹೃದಯ ಕಾಯಿಲೆಯ ಕುಟುಂಬದ ಇತಿಹಾಸದಂತಹ ಗುರುತಿಸಬಹುದಾದ ಅಪಾಯಕಾರಿ ಅಂಶಗಳನ್ನು ಹೊಂದಿದ್ದರು. 24 ಸಾವುಗಳಲ್ಲಿ ನಾಲ್ಕು ಸಾವುಗಳು ಹೃದಯ ಸಂಬಂಧಿಯಲ್ಲದವು - ಒಂದು ದೀರ್ಘಕಾಲದ ಮೂತ್ರಪಿಂಡ ಕಾಯಿಲೆಯಿಂದ ಬಳಲುತ್ತಿದೆ, ಒಬ್ಬರು ರಸ್ತೆ ಅಪಘಾತ ಸಂಬಂಧಿತ ಸಮಸ್ಯೆಗಳಿಂದ, ಒಂದು ತೀವ್ರವಾದ ಗ್ಯಾಸ್ಟ್ರೋಎಂಟರೈಟಿಸ್ ಸೋಂಕಿನಿಂದ ಮತ್ತು ಒಂದು ಶಂಕಿತ ವಿದ್ಯುತ್ ಆಘಾತದಿಂದ ಆಗಿದೆ.

ಉಳಿದ 20 ಸಾವುಗಳಲ್ಲಿ ಹತ್ತು ದೃಢಪಡಿಸಿದ ಹೃದಯ ಸಾವುಗಳು - ಮೂರು ಕೇಸುಗಳು ಬೈಪಾಸ್ ಶಸ್ತ್ರಚಿಕಿತ್ಸೆಯ ನಂತರದ, ಆಂಜಿಯೋಪ್ಲ್ಯಾಸ್ಟಿ ನಂತರದ ಮತ್ತು ಡೈಲೇಟೆಡ್ ಕಾರ್ಡಿಯೊಮಯೋಪತಿ (ಹೃದಯ ವೈಫಲ್ಯ), ಉಳಿದ ಏಳು ದೃಢಪಡಿಸಿದ ಹೃದಯ ಸಾವುಗಳಲ್ಲಿ ನಾಲ್ಕು ಶವಪರೀಕ್ಷೆಯ ಸಾಕ್ಷ್ಯಗಳ ಆಧಾರದ ಮೇಲೆ ಪತ್ತೆಯಾಗಿವೆ ಮತ್ತು ಮೂರು ಹೃದಯಾಘಾತದ ಇಸಿಜಿ ಪುರಾವೆಗಳಲ್ಲಿ ಸೇರಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

ವಿಧಾನಪರಿಷತ್'ಗೆ ನಾಮನಿರ್ದೇಶನ: ನಾಲ್ವರು MLC ಅಭ್ಯರ್ಥಿಗಳು ಹೆಸರು ಬದಲು, ಪಟ್ಟಿಯಲ್ಲಿ TNIE ಮೈಸೂರು ವಿಭಾಗದ ಮುಖ್ಯಸ್ಥನಿಗೆ ಸ್ಥಾನ

ಬಾನು ಮುಷ್ತಾಕ್‌ ದಸರಾ ಉದ್ಘಾಟನೆಗೆ ಆಕ್ಷೇಪ; ಮುಸ್ಲಿಂ ದ್ವೇಷ ಮನಸ್ಥಿತಿಯನ್ನು ಬದಿಗಿಟ್ಟು, ಸಂವಿಧಾನದ ಆಶಯ ಅರ್ಥ ಮಾಡಿಕೊಳ್ಳಿ: ಸಚಿವ ಹೆಚ್.ಸಿ.ಮಹದೇವಪ್ಪ

ಚಾಮುಂಡೇಶ್ವರಿ ದೇವಿ ಬಗ್ಗೆ ಗೌರವವಿದ್ದು, ಧಾರ್ಮಿಕ ಭಾವನೆಗಳ ಗೌರವಿಸುತ್ತೇನೆ; ಬಾನು ಮುಷ್ತಾಕ್

JC ರಸ್ತೆಯಲ್ಲಿ White-topping ಕಾಮಗಾರಿ: ಆ.30ರವರೆಗೆ ಭಾರಿ ಗಾತ್ರದ ವಾಹನಗಳ ಸಂಚಾರಕ್ಕೆ ನಿರ್ಬಂಧ

SCROLL FOR NEXT