ಶಿವಮೊಗ್ಗ: ಇಲ್ಲಿನ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಯ ವೈದ್ಯರು ಶಸ್ತ್ರ ಚಿಕಿತ್ಸೆ ನಡೆಸಿ ಸೋಗಾನೆಯ ಕೇಂದ್ರ ಕಾರಾಗೃಹದ ಕೈದಿಯೊಬ್ಬನ ಹೊಟ್ಟೆಯಿಂದ ಮೊಬೈಲ್ ಫೋನ್ ಹೊರಗೆ ತೆಗೆದಿದ್ದಾರೆ.
ಕೈದಿ ದೌಲತ್ ಖಾನ್ ಅಲಿಯಾಸ್ ಗುಂಡಾ (30) ಎಂಬಾತನ ಹೊಟ್ಟೆಯಲ್ಲಿ ಮೊಬೈಲ್ ಫೋನ್ ಪತ್ತೆಯಾಗಿದೆ. ಪ್ರಕರಣವೊಂದರಲ್ಲಿ 10 ವರ್ಷ ಜೈಲು ಶಿಕ್ಷೆಗೆ ಅನುಭವಿಸುತ್ತಿರುವ ದೌಲತ್ ಖಾನ್ ಗೆ, ಕಳೆದ ಜೂನ್ 24 ರಂದು ಹೊಟ್ಟೆ ನೋವು ತೀವ್ರವಾಗಿದ್ದು, ಜೈಲಿನ ಆಸ್ಪತ್ರೆಗೆ ಬಂದು, ತಾನು ಕಲ್ಲು ನುಂಗಿದ್ದೇನೆ ಎಂದು ವೈದ್ಯರಿಗೆ ತಿಳಿಸಿದ್ದ.
ಔಷಧಿ ಕೊಟ್ಟಿದ್ದರು ಹೊಟ್ಟೆನೋವು ಹೆಚ್ಚಾದಾಗ ಪರೀಕ್ಷಿಸಿದ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಿದ್ದರು. ನಂತರ ಎಕ್ಸ್ ರೇ ಮಾಡಿದ್ದ ವೈದ್ಯರಿಗೆ ಅಚ್ಚರಿ ಕಾದಿತ್ತು. ಕೈದಿ ದೌಲತ್ ನ ಹೊಟ್ಟೆಯಲ್ಲಿ ಒಂದು ಇಂಚು ಅಗಲ, ಮೂರು ಇಂಚು ಉದ್ದದ ಮೊಬೈಲ್ ಫೋನ್ ಪತ್ತೆಯಾಗಿದೆ. ಅದನ್ನು ಯಶಸ್ವಿಯಾಗಿ ಹೊರಗೆ ತಂದಿದ್ದಾರೆ.
ಆ ಪೋನ್ ನ್ನು ಜೈಲು 8 ರಂದು ಮುಚ್ಚಿದ ಕವರ್ ನಲ್ಲಿ ಜೈಲು ಅಧಿಕಾರ ವಶಕ್ಕೆ ನೀಡಲಾಗಿದೆ.ಮೊಬೈಲ್ ಬಳಕೆಗೆ ಜೈಲಿನಲ್ಲಿ ನಿರ್ಬಂಧವಿದ್ದರೂ ಹೇಗೆ ಮೊಬೈಲ್ ಜೈಲಿಗೆ ತಲುಪಿತು ಎಂಬುದರ ಕುರಿತು ತನಿಖೆಗೆ ಅಧಿಕಾರಿಗಳು ಆದೇಶಿಸಿದ್ದಾರೆ. ಕೈದಿ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಕ್ರಿಮಿನಲ್ ಪ್ರಕರಣವನ್ನು ಸಹ ದಾಖಲಿಸಲಾಗಿದೆ.
ಈ ಸಂಬಂಧ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಜೈಲು ಅಧಿಕಾರಿ ಪಿ. ರಂಗನಾಥ್ ಔಪಚಾರಿಕವಾಗಿ ದೂರು ದಾಖಲಿಸಿದ್ದು, ಜೈಲಿನೊಳಗೆ ಕೈದಿಗೆ ಹೇಗೆ ಮೊಬೈಲ್ ಫೋನ್ ತಲುಪಿತು ಎಂಬುದರ ಬಗ್ಗೆ ಸಮಗ್ರ ತನಿಖೆಗೆ ಆದೇಶಿಸಿದ್ದಾರೆ.
ಇದರಲ್ಲಿ ಕೆಲವು ಜೈಲು ಸಿಬ್ಬಂದಿ ತೊಡಗಿಸಿಕೊಡಿರುವ ಆರೋಪವೂ ಕೇಳಿಬಂದಿದೆ. ಭದ್ರತೆಯಲ್ಲಿನ ಲೋಪದೋಷ ಕುರಿತು ಅಧಿಕಾರಿಗಳು ಇದೀಗ ತನಿಖೆಗೆ ಮುಂದಾಗಿದ್ದಾರೆ.