ಗುಹೆಯಲ್ಲಿ ವಾಸಿಸುತ್ತಿದ್ದ ಮಹಿಳೆ ರಕ್ಷಣೆ 
ರಾಜ್ಯ

ಗೋಕರ್ಣ: ದಟ್ಟ ಕಾಡಿನ ಗುಹೆಯಲ್ಲಿ ಪುಟ್ಟ ಮಕ್ಕಳೊಂದಿಗೆ ವಾಸಿಸುತ್ತಿದ್ದ ರಷ್ಯಾದ ಮಹಿಳೆ ರಕ್ಷಣೆ! video

ರಷ್ಯಾದ ಮೋಹಿಗೆ ಆಧ್ಯಾತ್ಮದ ಕಡೆ ಹೆಚ್ಚು ಆಸಕ್ತಿ ಇರುವುದರಿಂದ ಪ್ರಕೃತಿಯಲ್ಲಿ ಇರಬೇಕು ಎಂದು ತನ್ನ ಮಕ್ಕಳೊಂದಿಗೆ ಏಕಾಂಗಿಯಾಗಿ ಗುಹೆ ಸೇರಿದ್ದಳು.

ಗೋಕರ್ಣ (ಉತ್ತರ ಕನ್ನಡ): ಉತ್ತರ ಕನ್ನಡದ ಗೋಕರ್ಣದ ಕಾಡಿನ ಮಧ್ಯ ಗುಹೆಯಲ್ಲಿ ಸಣ್ಣ ಸಣ್ಣ ಮಕ್ಕಳೊಂದಿಗೆ ವಾಸಿಸುತ್ತಿದ್ದ 40 ವರ್ಷದ ರಷ್ಯಾದ ಮಹಿಳೆಯನ್ನು ಗಸ್ತು ತಿರುಗುತ್ತಿದ್ದ ಗೋಕರ್ಣ ಪೊಲೀಸರು ರಕ್ಷಿಸಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣದ ರಾಮತೀರ್ಥದ ಅರಣ್ಯದಲ್ಲಿ ಗಸ್ತು ತಿರುಗುತ್ತಿದ್ದ ಪೊಲೀಸರು ಮೋಹಿ (40), ಅವರ ಪುಟ್ಟ ಮಕ್ಕಳಾದ ಪ್ರೆಯಾ (06) ಹಾಗೂ ಅಮಾ (4) ರನ್ನು ರಕ್ಷಿಸಿದ್ದಾರೆ.

ರಷ್ಯಾದಿಂದ ಗೋವಾಕ್ಕೆ ಬಂದಿದ್ದ ಈ ಮಹಿಳೆ ಗೋವಾ ಮೂಲಕ ಗೋಕರ್ಣಕ್ಕೆ ಬಂದು ಇಲ್ಲಿನ ದಟ್ಟ ಅರಣ್ಯವಾದ ರಾಮತೀರ್ಥ ಬಳಿಯ ಗುಹೆಯಲ್ಲಿ ತನ್ನ ಮಕ್ಕಳೊಂದಿಗೆ ವಾಸವಿದ್ದಳು. ಅಲ್ಲಿಯೇ ಚಿಕ್ಕ ರುದ್ರನ ಮೂರ್ತಿ ಇಟ್ಟುಕೊಂಡು ಪೂಜಾ ಕಾರ್ಯ ಮಾಡುತ್ತಾ ದಿನ ಕಳೆಯುತಿದ್ದಳು. ಸಿಪಿಐ ಶ್ರೀಧರ್ ನೇತ್ರತ್ವದ ತಂಡ ಈ ಭಾಗದಲ್ಲಿ ಗುಡ್ಡ ಕುಸಿತವಾದ್ದರಿಂದ ಗಸ್ತು ತಿರುಗುವಾಗ ಗುಹೆಯಲ್ಲಿ ಯಾರೋ ವಾಸವಾಗಿರುವುದನ್ನು ಪತ್ತೆ ಮಾಡಿ ವಿದೇಶಿ ಮಹಿಳೆಯನ್ನು ರಕ್ಷಣೆ ಮಾಡಿದ್ದಾರೆ.

ಭೂಕುಸಿತದ ಸಾಧ್ಯತೆ ಮತ್ತು ವನ್ಯಜೀವಿಗಳು ಮತ್ತು ಸರೀಸೃಪಗಳ ಸಂಚಾರ ಇರುವುದರಿಂದ ಸ್ಥಳವು ಸುರಕ್ಷಿತವಾಗಿಲ್ಲದ ಕಾರಣ ಮಕ್ಕಳೊಂದಿಗೆ ಹೊರಹೋಗುವಂತೆ ಪೊಲೀಸರು ಮಹಿಳೆಯ ಮನವೊಲಿಸಲು ಕಷ್ಟಪಟ್ಟರು.

ಮಹಿಳೆಯ ಇಚ್ಛೆಯಂತೆ, ಆಕೆಯನ್ನು ಕುಮಟಾದ ಆಶ್ರಮಕ್ಕೆ ಕರೆದೊಯ್ಯಲಾಯಿತು. ಆಶ್ರಮವನ್ನು ತಲುಪಿದ ಪೊಲೀಸರು ಅನುಮಾನಗೊಂಡು ಆಕೆಯ ಪಾಸ್‌ಪೋರ್ಟ್ ಕೇಳಿದರು. ಹಲವು ನೆಪಗಳನ್ನು ಹೇಳಿದ ನಂತರ, ಆಕೆ ಅದನ್ನು ಕಳೆದುಕೊಂಡಿರುವುದಾಗಿ ಹೇಳಿದಳು.

ಪೊಲೀಸರು ಗುಹೆಯನ್ನು ಶೋಧಿಸಿದಾಗ ಪಾಸ್‌ಪೋರ್ಟ್ ಸಿಕ್ಕಿತು, ಆಕೆಯ ವೀಸಾ ಏಪ್ರಿಲ್ 17, 2017 ರಂದು ಅವಧಿ ಮೀರಿದೆ ಎಂದು ತಿಳಿದುಬಂದಿದೆ. ಮಹಿಳೆ ಮತ್ತು ಆಕೆಯ ಮಕ್ಕಳ ಸುರಕ್ಷತೆಗಾಗಿ, ಪೊಲೀಸರು ಆಕೆಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮಹಿಳಾ ಸ್ವೀಕಾರ ಕೇಂದ್ರದಲ್ಲಿ ದಾಖಲಿಸಿದ್ದಾರೆ.

ಪೊಲೀಸರು ಇದನ್ನು ಬೆಂಗಳೂರಿನ FRRO ಗಮನಕ್ಕೆ ತಂದಿದ್ದಾರೆ, ಆಕೆಯನ್ನು ತನ್ನ ಮಕ್ಕಳೊಂದಿಗೆ ರಷ್ಯಾಗೆ ವಾಪಸ್ ಕಳುಹಿಸಲು ವ್ಯವಸ್ಥೆ ಮಾಡಲಾಗುತ್ತದೆ. ಜುಲೈ 9 ರಂದು ಆಕೆಯನ್ನು ಗುಹೆಯಲ್ಲಿ ಪತ್ತೆಹಚ್ಚಿಸಿದ್ದಾರೆ.

ರಷ್ಯಾದ ಮೋಹಿಗೆ ಆಧ್ಯಾತ್ಮದ ಕಡೆ ಹೆಚ್ಚು ಆಸಕ್ತಿ ಇರುವುದರಿಂದ ಪ್ರಕೃತಿಯಲ್ಲಿ ಇರಬೇಕು ಎಂದು ತನ್ನ ಮಕ್ಕಳೊಂದಿಗೆ ಏಕಾಂಗಿಯಾಗಿ ಗುಹೆ ಸೇರಿದ್ದಳು. ಗುಡ್ಡ ಕುಸಿತವಾಗಿರುವ ರಾಮತೀರ್ಥ ಗುಡ್ಡದ ಗುಹೆಯಲ್ಲಿ ತಮ್ಮ ಪುಟ್ಟ ಮಕ್ಕಳೊಂದಿಗೆ ಕತ್ತಲಲ್ಲೇ ಬದುಕು ಕಳೆಯುತಿದ್ದಳು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇರಾನ್ ಆರ್ಥಿಕ ಬಿಕ್ಕಟ್ಟು: ಇಂಟರ್ನೆಟ್‌ ಸ್ಥಗಿತಗೊಳಿಸಿದರೂ ನಿಲ್ಲದ ಉದ್ವಿಗ್ನತೆ; 13ನೇ ದಿನಕ್ಕೆ ಕಾಲಿಟ್ಟ ಪ್ರತಿಭಟನೆ, ಈವರೆಗೂ 200ಕ್ಕೂ ಹೆಚ್ಚು ಮಂದಿ ಬಲಿ

4 ವರ್ಷಗಳಲ್ಲಿ ಮೊದಲ ಬಾರಿಗೆ ಖಜಾನೆ ಎಕ್ಸ್ಪೋಷರ್ ಕಡಿತಗೊಳಿಸಿದ ಆರ್‌ಬಿಐ

MGNREGA ಕುರಿತು ಚರ್ಚಿಸಲು ವಿಶೇಷ ಅಧಿವೇಶನ; ಜ. 26 ರಿಂದ ಕಾಂಗ್ರೆಸ್​​ನಿಂದ 'ಮನ್ರೇಗಾ ಉಳಿಸಿ' ಪಾದಯಾತ್ರೆ

ಭೀಕರ: ಡಿವೈಡರ್ ಮೇಲೆ ಹಾರಿ ಜನರ ಮೇಲೆ ಬಿದ್ದ ದುಬಾರಿ ಕಾರು, ಬದುಕಿದ್ದೇ ಪವಾಡ.. Video Viral

ಭಾರತ-ಪಾಕ್ ಯುದ್ಧ ನಿಲ್ಲಿಸಿದ್ದು ನಾನೇ, ನೊಬೆಲ್​ ಶಾಂತಿ ಪ್ರಶಸ್ತಿಗೆ ನನ್ನಷ್ಟು ಅರ್ಹರು ಯಾರೂ ಇಲ್ಲ; ಡೊನಾಲ್ಡ್ ಟ್ರಂಪ್

SCROLL FOR NEXT