ಸಾಂದರ್ಭಿಕ ಚಿತ್ರ 
ರಾಜ್ಯ

ಬೆಂಗಳೂರು ಕೊಲೆ ಕೇಸ್: ಪೊಲೀಸರಿಗೆ ನೆರವಾಯ್ತು ಆ್ಯಂಬುಲೆನ್ಸ್ ಚಾಲಕ ನೀಡಿದ ಸುಳಿವು..!

ಬಿಹಾರ ಮೂಲದ, ಕಗ್ಗದಾಸಪುರ ನಿವಾಸಿ ಚಿಂಟು ಸಾಹ್ (36) ಹತ್ಯೆಯಾದ ವ್ಯಕ್ತಿಯಾಗಿದ್ದಾನೆ.

ಬೆಂಗಳೂರು: ಮಾಹಿತಿ ನೀಡುವ ಮೂಲಕ ನಗರದಲ್ಲಿ ನಡೆದಿದ್ದ ಕೊಲೆ ಪ್ರಕರಣವೊಂದನ್ನು ಬೇಧಿಸಲು ಆ್ಯಂಬುಲೆನ್ಸ್ ಚಾಲಕನೊಬ್ಬ ಪೊಲೀಸರಿಗೆ ನೆರವಾಗಿದ್ದಾನೆ.

ಪ್ರಕರಣ ಸಂಬಂಧ ಪೊಲೀಸರು ರಾಮಕರನ್, ಶಿವಾಜಿ, ಓಬಲ ರೆಡ್ಡಿ ಮತ್ತು ರಾಮಮೋಹನ ರೆಡ್ಡಿ ಎಂಬುವವರನ್ನು ಬಂಧನಕ್ಕೊಳಪಡಿಸಿದ್ದಾರೆ.

ಬಿಹಾರ ಮೂಲದ, ಕಗ್ಗದಾಸಪುರ ನಿವಾಸಿ ಚಿಂಟು ಸಾಹ್ (36) ಹತ್ಯೆಯಾದ ವ್ಯಕ್ತಿಯಾಗಿದ್ದಾನೆ. ಈತ ಕಟ್ಟಣ ನಿರ್ಮಾಣ ಕಾರ್ಮಿಕನಾಗಿದ್ದು, ಈತ ರಾಮಕರನ್, ಶಿವಾಜಿಯಿಂದ ರೂ.300 ಸಾಲ ಪಡೆದಿದ್ದ. ಈ ಹಣದ ವಿಚಾರವಾಗಿ ಆರೋಪಿಗಳು ಚಿಂಟು ಅವರನ್ನು ಹೊಡೆದು ಸಾಯಿಸಿದ್ದಾರೆ.

ನಂತರ ಮೇಸ್ತ್ರಿ ಓಬಲ ರೆಡ್ಡಿ ಮತ್ತು ಕಟ್ಟಡದ ಮಾಲೀಕ ರಾಮಮೋಹನ್ ರೆಡ್ಡಿಗೆ ಕೊಲೆಯ ಬಗ್ಗೆ ಮಾಹಿತಿ ನೀಡಿದ್ದಾರೆ, ಬಂಧನಕ್ಕೆ ಹೆದರಿದ ನಾಲ್ವರು ರಾತ್ರಿಯಿಡೀ ಸಂಚು ರೂಪಿಸಿದ್ದಾರೆ.

ಬುಧವಾರ ಬೆಳಿಗ್ಗೆ 6.30 ರ ಸುಮಾರಿಗೆ, ಓಬಲ ರೆಡ್ಡಿ, ಕೆ.ಆರ್. ಮಾರುಕಟ್ಟೆ ಬಳಿ ವಾಸಿಸುವ ಮೃತ ವ್ಯಕ್ತಿಯ ಸಹೋದರನಿಗೆ ಕರೆ ಮಾಡಿದ್ದಾನೆ. ನಿನ್ನೆ ಸಹೋದರ ಗಂಭೀರ ಸ್ಥಿತಿಯಲ್ಲಿದ್ದು, ಕೆ.ಆರ್. ಪುರಂ ಸರ್ಕಾರಿ ಆಸ್ಪತ್ರೆಯ ಬಳಿ ಬರುವಂತೆ ತಿಳಿಸಿದ್ದಾನೆ. ಆತ ಆಸ್ಪತ್ರೆ ಬಳಿ ಹೋದಾಗ ಸಾವಿನ ಬಗ್ಗೆ ಮಾಹಿತಿ ನೀಡಿದ್ದಾರೆ. ಆದರೆ, ಸಾವಿಗೆ ಕಾರಣ ತಿಳಿಸಿಲ್ಲ. ಆ್ಯಂಬುಲೆನ್ಸ್'ನ್ನು ಬಾಡಿಗೆಗೆ ಪಡೆದು, ಶವವನ್ನು ಬಿಹಾರಕ್ಕೆ ಕೊಂಡೊಯ್ಯುವಂತೆ ಒತ್ತಾಯಿಸಿದ್ದಾನೆ.

ಈ ವೇಳೆ ಸ್ಥಳಕ್ಕೆ ಬಂದ ಆ್ಯಂಬುಲೆನ್ಸ್ ಚಾಲಕ, ದೇಹದ ಮೇಲಿದ್ದ ಗಾಯಗ ಗುರುತುಗಳನ್ನು ನೋಡಿ ಅನುಮಾನಗೊಂಡಿದ್ದಾನೆ. ಮರಣೋತ್ತರ ಪರೀಕ್ಷೆ ನಡೆಸದ ಹೊರತು ಶವವನ್ನು ಕೊಂಡೊಯ್ಯುವುದಿಲ್ಲ ಎಂದು ನಿರಾಕರಿಸಿದ್ದಾನೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಈ ವೇಳ ಆರೋಪಿಗಳು ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಘಟನೆ ಬೆನ್ನಲ್ಲೇ ಮೃತ ವ್ಯಕ್ತಿಯ ಸಹೋದರ ಪೊಲೀಸರಿಗೆ ದೂರು ನೀಡಿದ್ದಾರೆ.

ಮರಣೋತ್ತರ ಪರೀಕ್ಷೆ ಬಳಿಕ ಪೊಲೀಸರು ಶವವನ್ನು ಹಸ್ತಾಂತರ ಮಾಡಿದ್ದು, ಸಹೋದರ ಸ್ಮಶಾನದಲ್ಲಿ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿದ್ದಾನೆಂದು ಅಧಿಕಾರಿಯೊಬ್ಬರು ತಿಳಿಸಲಿದ್ದಾರೆ.

ನಾಲ್ವರು ಆರೋಪಿಗಳ ವಿರುದ್ಧ ಕೊಲೆ, ಸಾಕ್ಷ್ಯ ನಾಶ ಹಾಗೂ ಸುಳ್ಳು ಮಾಹಿತಿ ನೀಡಿದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

SCO Summit: ಒಂದೇ ವೇದಿಕೆಯಲ್ಲಿ ಚೀನಾ- ಭಾರತ- ರಷ್ಯಾ; ಕೆರಳಿದ Trump ಭಾರತದ ಬಗ್ಗೆ ಹೇಳಿದ್ದೇನು?

ಎಲ್ಲರನ್ನೂ ಕಾಯಿಸುತ್ತಿದ್ದ ಪುಟಿನ್ ಪ್ರಧಾನಿ ಮೋದಿಗಾಗಿ 10 ನಿಮಿಷಗಳ ಕಾಲ ಕಾರಿನಲ್ಲಿ ಕಾದು ಕುಳಿತ್ತಿದ್ದರು, Video!

ಧರ್ಮಸ್ಥಳದ ವಿರುದ್ಧ ಬಿಜೆಪಿಯಿಂದಲೇ ಷಡ್ಯಂತ್ರ: ಡಿಕೆ ಶಿವಕುಮಾರ್

ಸರ್ಕಾರಿ ಬಂಗಲೆ ಖಾಲಿ ಮಾಡಿದ ಮಾಜಿ ಉಪರಾಷ್ಟ್ರಪತಿ ಜಗದೀಪ್ ಧಂಖರ್!

ಸೌಜನ್ಯ ಹೆಸರು ಹೇಳಿ ದುಡ್ಡು ಮಾಡಿದೆ ಎಂದು ನಿಮ್ಮ ಪಕ್ಷದವರೇ ಟೀಕಿಸಿದರು: ವಿಜಯೇಂದ್ರಗೆ ಸೌಜನ್ಯ ತಾಯಿ ತರಾಟೆ

SCROLL FOR NEXT