ಜೌಗು ಪ್ರದೇಶ ನಿರ್ಮಾಣ ಮಾಡಿರುವುದು. 
ರಾಜ್ಯ

ಜಕ್ಕೂರು ಕೆರೆಗೆ ಹರಿಯುವ ಕೊಳಚೆ ನೀರು ಸಂಸ್ಕರಣೆಗೆ BBMP ಮುಂದು: 10 ಎಕರೆ ವಿಸ್ತೀರ್ಣದ ಜೌಗು ಪ್ರದೇಶ ನಿರ್ಮಾಣ

ಜೌಗು ಪ್ರದೇಶ ಸೇರಿದಂತೆ 163 ಎಕರೆ ವಿಸ್ತೀರ್ಣದ ಕೆರೆಯು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವಶದಲ್ಲಿತ್ತು. 2015 ರಲ್ಲಿ ಕೆರೆಯನ್ನು ಬಿಬಿಎಂಪಿಗೆ ವರ್ಗಾಯಿಸಲಾಯಿತು.

ಬೆಂಗಳೂರು: ಬ್ರ್ಯಾಂಡ್ ಬೆಂಗಳೂರು ಉಪಕ್ರಮದಡಿಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಬ್ಯಾಟರಾಯನಪುರ ಜಕ್ಕೂರು ಕೆರೆ ಬಳಿ 10 ಎಕರೆ ವಿಸ್ತೀರ್ಣದ 'ಜೌಗು ಪ್ರದೇಶ'ವನ್ನು ಅಭಿವೃದ್ಧಿಪಡಿಸಿದ್ದು, ಈ ಮೂಲಕ ತ್ಯಾಜ್ಯ ನೀರು ಕೆರೆ ಸೇರುವುದಕ್ಕೂ ಮೊದಲು ಅದನ್ನು ಸಂಸ್ಕರಿಸವ ಕೆಲಸವನ್ನು ಮಾಡಲು ಮುಂದಾಗಿದೆ.

ಪ್ರಸ್ತುತ ಅಭಿವೃದ್ಧಿಪಡಿಸಿರುವ ಈ ಜೌಗು ಪ್ರದೇಶವು ಪ್ರತಿ ನಿತ್ಯ ಸುಮಾರು 7 ಮಿಲಿಯನ್ ಲೀಟರ್ ತ್ಯಾಜ್ಯ ನೀರನ್ನು ಸಂಸ್ಕರಿಸುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಜೌಗು ಪ್ರದೇಶ ಸೇರಿದಂತೆ 163 ಎಕರೆ ವಿಸ್ತೀರ್ಣದ ಕೆರೆಯು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವಶದಲ್ಲಿತ್ತು. 2015 ರಲ್ಲಿ ಕೆರೆಯನ್ನು ಬಿಬಿಎಂಪಿಗೆ ವರ್ಗಾಯಿಸಲಾಯಿತು. ಆದಾಗ್ಯೂ, 30 ಎಕರೆ ಕೆರೆ ಪ್ರದೇಶವನ್ನು ಅತಿಕ್ರಮಿಸಿ ತೆಂಗಿನ ಮರಗಳನ್ನು ನೆಡಲಾಗಿತ್ತು.. ನಂತರ ಈ 30 ಎಕರೆಗಳನ್ನು ಮರಳಿ ಪಡೆದು, ಬೇಲಿ ಹಾಕಲಾಯಿತು.

ಕೆರೆ ಬಳಿ ಯಾವುದೇ ಜೌಗು ಪ್ರದೇಶವಿಲ್ಲದ ಕಾರಣ, 10 ಎಕರೆ ಭೂಮಿಯಲ್ಲಿ ಕೃತಕ ಜೌಗು ಪ್ರದೇಶವನ್ನು ಅಭಿವೃದ್ಧಿಪಡಿಸಲಾಯಿತು. ಆರು ತಿಂಗಳ ಹಿಂದೆ ಕೆಸರು ತೆಗೆದು ಜೌಗು ಪ್ರದೇಶವನ್ನು ಆಳಗೊಳಿಸುವ ಕೆಲಸವನ್ನು ಕೈಗೆತ್ತಿಕೊಳ್ಳಲಾಗಿತ್ತು. ಈ ಜೌಗು ಪ್ರದೇಶವು ಘನವಸ್ತುಗಳನ್ನು ಹಿಡಿದಿಟ್ಟುಕೊಂಡು, ಪೊಟ್ಯಾಸಿಯಮ್ ಮತ್ತು ಸಾರಜನಕ ಮಟ್ಟವನ್ನು ಕಡಿಮೆ ಮಾಡುತ್ತದೆ. ಕೆರೆಯಲ್ಲಿ ಆಮ್ಲಜನಕ ಮಟ್ಟವನ್ನು ಹೆಚ್ಚಿಸುತ್ತದೆ. ಒಟ್ಟಾರೆ ಯೋಜನೆಗೆ 5 ಕೋಟಿ ರೂಪಾಯಿ ವೆಚ್ಚಾಗಿದೆ. ಕೆರೆಗೆ ನೀರು ಹರಿಯುವುದನ್ನು ಸುಧಾರಿಸಲು ಮುಂದಿನ ದಿನಗಳಲ್ಲಿ ಹೆಚ್ಚಿನ ಸಸ್ಯಗಳನ್ನು ಜೌಗು ಪ್ರದೇಶಕ್ಕೆ ಸೇರಿಸಲಾಗುವುದು ಎಂದು ಅಧಿಕಾರಿಯೊಬ್ಬರು ನೀಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT