ಮುಸ್ಲಿಂ ಸಂಪ್ರದಾಯದಂತೆ ವಿವಾಹವಾಗಿದ್ದ ದಂಪತಿ 
ರಾಜ್ಯ

ಇಸ್ಲಾಂ ಧರ್ಮಕ್ಕೆ ಮತಾಂತರವಾಗುವಂತೆ ಪತ್ನಿ ಒತ್ತಾಯ; ನೊಂದು ದೂರು ದಾಖಲಿಸಿದ ವ್ಯಕ್ತಿ

ಗೋಕಾವಿ ಮುಸ್ಲಿಂ ಪದ್ಧತಿಗಳ ಪ್ರಕಾರ ಹೊಸಮನಿ ಅವರನ್ನು ಮದುವೆಯಾಗುತ್ತಿರುವ ವಿಡಿಯೋ ಇದೀಗ ವೈರಲ್ ಆಗಿದೆ.

ಬೆಂಗಳೂರು: ಮದುವೆಯ ನಂತರ ತನ್ನ ಹೆಂಡತಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳುವಂತೆ ನನಗೆ ಒತ್ತಾಯಿಸುತ್ತಿದ್ದಾಳೆ ಎಂದು ಆರೋಪಿಸಿ ಗದಗ ಜಿಲ್ಲೆಯ ವ್ಯಕ್ತಿಯೊಬ್ಬರು ದೂರು ದಾಖಲಿಸಿದ್ದಾರೆ.

ವಿಶಾಲ್ ಕುಮಾರ್ ಗೋಕವಿ ಅವರು ತಹಸೀನ್ ಹೊಸಮನಿ ಅವರೊಂದಿಗೆ ಮೂರು ವರ್ಷಗಳ ಕಾಲ ಸಂಬಂಧ ಹೊಂದಿದ್ದರು. ನಂತರ ಅವರು 2024ರ ನವೆಂಬರ್‌ನಲ್ಲಿ ವಿವಾಹ ನೋಂದಣಿ ಮಾಡಿಕೊಂಡರು. ಅದಾದ ನಂತರ, ಹೊಸಮನಿ ಅವರು ಮುಸ್ಲಿಂ ಪದ್ಧತಿಗಳ ಪ್ರಕಾರ ಮತ್ತೆ ಮದುವೆಯಾಗುವಂತೆ ಒತ್ತಡ ಹೇರಿದರು ಎಂದು ಆರೋಪಿಸಿದ್ದಾರೆ.

ಸಂಬಂಧದಲ್ಲಿ ನೆಮ್ಮದಿಯನ್ನು ಕಾಪಾಡಿಕೊಳ್ಳಲು, ಏಪ್ರಿಲ್ 25 ರಂದು ಮುಸ್ಲಿಂ ವಿಧಿವಿಧಾನಗಳ ಪ್ರಕಾರ ವಿವಾಹವಾದೆವು. ಆ ಸಮಯದಲ್ಲಿ ತನಗೆ ಅರಿವಿಲ್ಲದೆಯೇ ತನ್ನ ಹೆಸರನ್ನು ಬದಲಾಯಿಸಲಾಗಿದೆ. ಅಲ್ಲದೆ, 'ಮೌಲ್ವಿ' ನನಗೆ ತಿಳಿಯದೆಯೇ ನನ್ನನ್ನು ಮತಾಂತರಗೊಳಿಸಿದ್ದಾರೆ ಎಂದು ಅವರು ಹೇಳಿದ್ದಾರೆ.

ಗೋಕಾವಿ ಮುಸ್ಲಿಂ ಪದ್ಧತಿಗಳ ಪ್ರಕಾರ ಹೊಸಮನಿ ಅವರನ್ನು ಮದುವೆಯಾಗುತ್ತಿರುವ ವಿಡಿಯೋ ಇದೀಗ ವೈರಲ್ ಆಗಿದೆ.

ಅದಾದ ನಂತರ, ಜೂನ್ 5 ರಂದು ಹಿಂದೂ ವಿಧಿವಿಧಾನಗಳೊಂದಿಗೆ ತಮ್ಮ ಕುಟುಂಬವು ಕೂಡ ವಿವಾಹವನ್ನು ಏರ್ಪಡಿಸಿತ್ತು. ಹೊಸಮಣಿ ಆರಂಭದಲ್ಲಿ ಇದಕ್ಕೆ ಒಪ್ಪಿಕೊಂಡಿದ್ದರು. ಆದರೆ, ಅವರ ಕುಟುಂಬದ ಒತ್ತಡದಿಂದ ನಂತರ ಹಿಂದೆ ಸರಿದರು ಎಂದು ಅವರು ಆರೋಪಿಸಿದರು.

ಇಸ್ಲಾಂಗೆ ಮತಾಂತರಗೊಳ್ಳದಿದ್ದರೆ, ನನ್ನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸುವುದಾಗಿ ಬೆದರಿಕೆಯೊಡ್ಡಿದರು. ಹೊಸಮಣಿ ಮತ್ತು ಅವರ ತಾಯಿ ಬೇಗಂ ಬಾನು ಅವರು ನಮಾಜ್ ಮಾಡಲು ಮತ್ತು ಜಮಾತ್‌ಗೆ ಹಾಜರಾಗಲು ಒತ್ತಾಯಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಪೊಲೀಸರು ಬುಧವಾರ ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್) ಸೆಕ್ಷನ್ 299 (ಯಾವುದೇ ವರ್ಗದ ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಉದ್ದೇಶದಿಂದ ಉದ್ದೇಶಪೂರ್ವಕ ಮತ್ತು ದುರುದ್ದೇಶಪೂರಿತ ಕೃತ್ಯಗಳು) ಮತ್ತು ಸೆಕ್ಷನ್ 302 (ವ್ಯಕ್ತಿಗಳ ಧಾರ್ಮಿಕ ಭಾವನೆಗಳಿಗೆ ಹಾನಿ ಮಾಡುವ ಉದ್ದೇಶದಿಂದ ಮಾಡಿದ ಕ್ರಮಗಳಿಂದ ರಕ್ಷಿಸುವುದು) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ತಿಮ್ಮಾಪುರ ರಾಜೀನಾಮೆಗೆ ವಿಪಕ್ಷಗಳ ಪಟ್ಟು: ಬಿಜೆಪಿ, ಜೆಡಿಎಸ್ ನಿಂದ ಸದನದಲ್ಲಿ ಅಹೋರಾತ್ರಿ ಧರಣಿ

2026ರ ಐಪಿಎಲ್ ಗಾಗಿ RCB ಜೆರ್ಸಿ ಅನಾವರಣ; ಹೊಸ ಋತುವಿಗೆ ವಿಶಿಷ್ಟ ಲೋಗೋ, ಸ್ಟಾರ್ ಪ್ರತ್ಯಕ್ಷ!

Rottweiler ನಾಯಿ ದಾಳಿ: ಬರೊಬ್ಬರಿ 8 ಗಂಟೆ ಶಸ್ತ್ರಚಿಕಿತ್ಸೆ, 80 ಹೊಲಿಗೆ... ಕೊನೆಗೂ ಮಾಲೀಕ ಅರೆಸ್ಟ್! Video

ಅಮೆರಿಕದೊಂದಿಗಿನ ವ್ಯಾಪಾರ ಒಪ್ಪಂದ ಶ್ಲಾಘಿಸಿದ ಪಿಯೂಷ್ ಗೋಯಲ್; ಭಾರತದ ಉಜ್ವಲ ಭವಿಷ್ಯಕ್ಕೆ ಇದು ಶುಭ ಸೂಚನೆ

Indian Stock Market: 2ನೇ ದಿನವೂ ಮಹಾ ಏರಿಕೆ; ಕೇವಲ 15 ನಿಮಿಷದಲ್ಲಿ ಹೂಡಿಕೆದಾರರ ಸಂಪತ್ತು 13 ಲಕ್ಷ ಕೋಟಿ ರೂ ವೃದ್ಧಿ!

SCROLL FOR NEXT