ವಿಜಯಪುರ: ವಿಜಯಪುರ ಜಿಲ್ಲೆಯ ನಿಂಬೆಹಣ್ಣಿಗೆ ಭೌಗೋಳಿಕ ಸ್ಥಾನಮಾನ ದೊರೆದಿದ್ದು, ಇದರ ಬೆನ್ನಲ್ಲೇ ಜಿಲ್ಲ ನಿಂಬೆಹಣ್ಣುಗಳನ್ನು ಜನಪ್ರಿಯಗೊಳಿಸುವ ಉದ್ದೇಶದಿಂದ ಕರ್ನಾಟಕ ನಿಂಬೆ ಅಭಿವೃದ್ಧಿ ಮಂಡಳಿಯು ರಾಜ್ಯದಾದ್ಯಂತ ಲೆಮೆನ್ ಟೀ ಪಾಯಿಂಟ್‌ಗಳ ಸ್ಥಾಪಿಸಲು ಮುಂದಾಗಿದೆ.
ವಿಜಯಪುರ ಜಿಲ್ಲೆ ರಾಜ್ಯದಲ್ಲಿ ಅತಿದೊಡ್ಡ ನಿಂಬೆಹಣ್ಣು ಬೆಳೆಯುವ ಜಿಲ್ಲೆಯಾಗಿದ್ದು, ರಾಜ್ಯದ ಒಟ್ಟಾರೆ ನಿಂಬೆಹಣ್ಣು ಬೆಳೆಯಲ್ಲಿ ಇಂಡಿ ತಾಲೂಕೊಂದರಲ್ಲೇ ಶೇ 50 ಕ್ಕಿಂತ ಹೆಚ್ಚು ನಿಂಬೆಹಣ್ಣುಗಳನ್ನು ಬೆಳೆಯಲಾಗುತ್ತದೆ. ಇಲ್ಲಿನ ನಿಂಬೆಹಣ್ಣುಗಳನ್ನು ಜನಪ್ರಿಯಗೊಳಿಸಲು ಈ ನಿರ್ಧಾರ ಕೈಗೊಳ್ಳಲಾಗಿದ್ದು, ಇತರರಿಗೆ ಫ್ರಾಂಚೈಸಿ ನೀಡಲು ಕೂಡ ಚಿಂತನೆ ನಡೆಸಲಾಗಿದೆ ಎಂದು ಕರ್ನಾಟಕ ನಿಂಬೆ ಅಭಿವೃದ್ಧಿ ಮಂಡಳಿ ತಿಳಿಸಿದೆ.
ಇಂಡಿ ಪಟ್ಟಣದಲ್ಲಿ ಮೊದಲಿಗೆ ಟೀ ಪಾಯಿಂಟ್ ಗಳನ್ನು ಆರಂಭಿಸಲಾಗಿತ್ತು. ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಟೀ ಪಾಯಿಂಟ್ ಗಳ ಸ್ಥಾಪಿಸಲು ಚಿಂತನೆ ನಡೆಸಲಾಗಿದೆ.
ಇಂಡಿ ನಿಂಬೆಹಣ್ಣುಗಳ ಗುಣಮಟ್ಟದ ಬಗ್ಗೆ ಜಾಗೃತಿ ಮೂಡಿಸಲು ಕೃಷಿ ಮೇಳಗಳು ಮತ್ತು ಫಲಪುಷ್ಪ ಪ್ರದರ್ಶನ ಸೇರಿದಂತೆ ವಿವಿಧ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಟೀ ಪಾಯಿಂಟ್ ಗಳನ್ನು ಸ್ಥಾಪಿಸಲಾಗುತ್ತದೆ. ಇದು ಪ್ರಮುಖ ಪ್ರಚಾರ ತಂತ್ರಗಳಲ್ಲಿ ಒಂದಾಗಿದೆ.
ನಿಂಬೆಹಣ್ಣಿನಿಂದ ತಯಾರಿಸಿದ ಉಪ್ಪಿನಕಾಯಿಗಳನ್ನೂ ಕೂಡ ಪರಿಚಯಿಸಲಾಗಿದ್ದು, ಸ್ಟಾಲ್ ಮೂಲಕ ಸುಮಾರು 200 ಕೆಜಿಯಷ್ಟು ಉಪ್ಪಿನಕಾಯಿ ಈಗಾಗಲೇ ಮಾರಾಟವಾಗಿದೆ. ಇತ್ತೀಚಿನ ಬೆಂಗಳೂರಿನಲ್ಲಿ ನಡೆದ ಫಲ ಪುಷ್ಪ ಪ್ರದರ್ಶನದ ಸಮಯದಲ್ಲಿಯೂ ಉಪ್ಪಿನಕಾಯಿಗೆ ಗಮನಾರ್ಹ ಬೇಡಿಕೆ ಬಂದಿತ್ತು.
ಲೆಮನ್ ಟೀ ಪಾಯಿಂಟ್ ಉಪಕ್ರಮವು ಉತ್ತಮ ಚಿಂತನೆಯಾಗಿದ್ದು. ಮುಂದಿನ ಎರಡು ತಿಂಗಳಲ್ಲಿ ಬೆಂಗಳೂರು, ದಕ್ಷಿಣ ಕನ್ನಡ ಮತ್ತು ಉಡುಪಿ ಸೇರಿದಂತೆ ಕರ್ನಾಟಕದಾದ್ಯಂತ ಇದನ್ನು ಟೀ ಪಾಯಿಂಗ್ ಗಳ ಸ್ಥಾಪಿಸಲು ಚಿಂತನೆ ನಡೆಸಲಾಗಿದೆ ಎಂದು ಇಂಡಿ ಶಾಸಕ ಯಶವಂತ್ ರಾಯ್ ಗೌಡ ಪಾಟೀಲ್ ಅವರು ಹೇಳಿದ್ದಾರೆ.
ಇಂಡಿ ನಿಂಬೆಹಣ್ಣನ್ನು ಜಾಗತಿಕವಾಗಿ ಗುರುತಿಸಲ್ಪಟ್ಟ ಬ್ರ್ಯಾಂಡ್ ಮಾಡುವುದು ನಮ್ಮ ಗುರಿಯಾಗಿದೆ. ಟೀ ಪಾಯಿಂಟ್‌ಗಳನ್ನು ಪ್ರಾರಂಭಿಸುವ ಮೂಲಕ ಮತ್ತು ನಿಂಬೆ ಉಪ್ಪಿನಕಾಯಿಯಂತಹ ಉತ್ಪನ್ನಗಳನ್ನು ಪ್ರಚಾರ ಮಾಡುವ ಮೂಲಕ, ನಾವು ಇಂಡಿ ನಿಂಬೆಹಣ್ಣಿನ ಉತ್ತಮ ಗುಣಮಟ್ಟವನ್ನು ತಿಳಿಸಲಾಗುತ್ತದೆ ಎಂದು ಮಂಡಳಿಯ ಉಸ್ತುವಾರಿ ವ್ಯವಸ್ಥಾಪಕ ನಿರ್ದೇಶಕ ಎಚ್ ಎಸ್ ಪಾಟೀಲ್ ಅವರು ತಿಳಿಸಿದ್ದಾರೆ.