ಸಿಬಿಐ ಕಚೇರಿ  
ರಾಜ್ಯ

ಲಕ್ಷಾಂತರ ರೂ ವಂಚಿಸಿ ಪರಾರಿಯಾಗಿದ್ದ ವ್ಯಕ್ತಿ 20 ವರ್ಷಗಳ ನಂತರ ಬಂಧನ: CBI ಸಹಾಯಕ್ಕೆ ಬಂದದ್ದು ಇಮೇಜ್ ಸರ್ಚ್ ಟೂಲ್

ಮಧ್ಯಪ್ರದೇಶದ ಇಂದೋರ್‌ನಲ್ಲಿ ಗುಪ್ತನಾಮದಲ್ಲಿ ವಾಸಿಸುತ್ತಿದ್ದ ಪರಾರಿಯಾಗಿರುವ ಆರೋಪಿಯ ಡಿಜಿಟಲ್ ಹೆಜ್ಜೆಗುರುತುಗಳನ್ನು ಪತ್ತೆಹಚ್ಚಲು ಕೇಂದ್ರ ತನಿಖಾ ಸಂಸ್ಥೆಯು ಸುಧಾರಿತ ಇಮೇಜ್ ಸರ್ಚ್ ಪರಿಕರಗಳು ಮತ್ತು ವಿಶ್ಲೇಷಣಾತ್ಮಕ ಸಾಮರ್ಥ್ಯಗಳನ್ನು ಬಳಸಿದೆ.

ಬೆಂಗಳೂರು: 8 ಕೋಟಿ ರೂಪಾಯಿ ಬ್ಯಾಂಕ್ ವಂಚನೆ ಪ್ರಕರಣದಲ್ಲಿ ದೀರ್ಘಕಾಲ ತಲೆಮರೆಸಿಕೊಂಡಿದ್ದ ಘೋಷಿತ ಅಪರಾಧಿ ಮಣಿ ಎಂ ಶೇಖರ್ ನನ್ನು ಅಪರಾಧ ನಡೆದು ಸುಮಾರು ಎರಡು ದಶಕಗಳ ನಂತರ ಕೇಂದ್ರ ತನಿಖಾ ದಳ (CBI) ಬಂಧಿಸಿದೆ.

ಮಧ್ಯಪ್ರದೇಶದ ಇಂದೋರ್‌ನಲ್ಲಿ ಗುಪ್ತನಾಮದಲ್ಲಿ ವಾಸಿಸುತ್ತಿದ್ದ ಪರಾರಿಯಾಗಿರುವ ಆರೋಪಿಯ ಡಿಜಿಟಲ್ ಹೆಜ್ಜೆಗುರುತುಗಳನ್ನು ಪತ್ತೆಹಚ್ಚಲು ಕೇಂದ್ರ ತನಿಖಾ ಸಂಸ್ಥೆಯು ಸುಧಾರಿತ ಇಮೇಜ್ ಸರ್ಚ್ ಪರಿಕರಗಳು ಮತ್ತು ವಿಶ್ಲೇಷಣಾತ್ಮಕ ಸಾಮರ್ಥ್ಯಗಳನ್ನು ಬಳಸಿದೆ.

ವಂಚನೆ ಪ್ರಕರಣ ಹಿನ್ನೆಲೆ

2002ರಿಂದ 2005 ರ ನಡುವೆ ಕ್ರಿಮಿನಲ್ ಪಿತೂರಿಯಲ್ಲಿ ತೊಡಗಿ, ಇಂಡೋ ಮಾರ್ಕ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ಅದರ ಸಹೋದರ ಸಂಸ್ಥೆಗಳ ಹೆಸರಿನಲ್ಲಿ ನಿಧಿ-ಆಧಾರಿತವಲ್ಲದ ಮಿತಿಗಳನ್ನು ದುರುಪಯೋಗಪಡಿಸಿಕೊಳ್ಳುವ ಮೂಲಕ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಬೆಂಗಳೂರಿನ ಸಾಗರೋತ್ತರ ಶಾಖೆಗೆ 800 ಲಕ್ಷ ರೂಪಾಯಿಗಳಷ್ಟು ವಂಚನೆ ಮಾಡಿದ್ದಾರೆ ಎಂದು ಬೆಂಗಳೂರಿನ ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್, ಬ್ಯಾಂಕ್ ಸೆಕ್ಯುರಿಟಿ ಅಂಡ್ ಫ್ರಾಡ್ಸ್ ಸೆಲ್ (BSFB) ನಲ್ಲಿ ಆಗಸ್ಟ್ 1, 2006 ರಂದು ಪ್ರಕರಣ ದಾಖಲಾಗಿತ್ತು.

ಈ ಸಂಸ್ಥೆಯು ಡಿಸೆಂಬರ್ 10, 2007 ರಂದು ಆರೋಪಪಟ್ಟಿ ಸಲ್ಲಿಸಿತ್ತು. ಆರೋಪಿಗಳಿಬ್ಬರೂ ವಿಚಾರಣೆಗೆ ಹಾಜರಾಗಲು ಅಥವಾ ಸಮನ್ಸ್/ವಾರೆಂಟ್‌ಗಳಿಗೆ ಪ್ರತಿಕ್ರಿಯಿಸಲು ವಿಫಲರಾಗಿದ್ದರು. ತರುವಾಯ, ಅವರನ್ನು ಫೆಬ್ರವರಿ 27, 2009 ರಂದು ಘೋಷಿತ ಅಪರಾಧಿಗಳೆಂದು ಘೋಷಿಸಲಾಯಿತು ಎಂದು ಕೇಂದ್ರ ತನಿಖಾ ದಳ ತಿಳಿಸಿದೆ.

ಹಲವು ವರ್ಷಗಳಿಂದ ಆರೋಪಿಗಳ ಪತ್ತೆಗೆ ನಿರಂತರ ಪ್ರಯತ್ನಿಸಲಾಗಿತ್ತು. ಸಿಬಿಐ, ಆರೋಪಿಗಳ ಸುಳಿವು ನೀಡಿದವರಿಗೆ 50,000 ರೂ. ಬಹುಮಾನವನ್ನೂ ಘೋಷಿಸಿತ್ತು. ಪ್ರಕರಣ ಸಂಬಂಧ ಇತರ ಅಪರಾಧಿಗಳಿಗೆ ಶಿಕ್ಷೆ ವಿಧಿಸಲಾಗಿದ್ದು, ಕೆಲವು ಮಂದಿ ಆರೋಪಿಗಳು ಖುಲಾಸೆಗೊಂಡಿದ್ದರು. ಆದರೆ, ಆರ್‌ಎಂ ಶೇಖರ್ ಮತ್ತು ಮಣಿ ಶೇಖರ್ ದಂಪತಿ ವಿರುದ್ಧದ ವಿಚಾರಣೆ ಬಾಕಿ ಉಳಿದಿತ್ತು.

ಆರೋಪಿಗಳು ತಮ್ಮ ಗುರುತನ್ನು ಬದಲಾಯಿಸಿಕೊಂಡಿದ್ದರು ಮತ್ತು ಹಳೆಯ ಕೆವೈಸಿ ವಿವರಗಳನ್ನು ಎಂದಿಗೂ ಬಳಸಿರಲಿಲ್ಲ. ಅವರು ತಮ್ಮ ಹೆಸರುಗಳನ್ನು ಕೃಷ್ಣ ಕುಮಾರ್ ಗುಪ್ತಾ ಮತ್ತು ಗೀತಾ ಕೃಷ್ಣ ಕುಮಾರ್ ಗುಪ್ತಾ ಎಂದು ಬದಲಾಯಿಸಿಕೊಂಡಿದ್ದರು. ಅವರ ಮೊಬೈಲ್ ಸಂಖ್ಯೆಗಳು, ಇಮೇಲ್‌ಗಳು, ಪ್ಯಾನ್ ಸಂಖ್ಯೆಗಳು ಮತ್ತು ಇತರ ಮಾಹಿತಿಯನ್ನು ಚಾರ್ಜ್‌ಶೀಟ್ ಸಲ್ಲಿಸುವ ಮೊದಲು ಬಳಸಲಾಗಿತ್ತು ಎಂದು ಸಿಬಿಐ ಹೇಳಿದೆ.

ಆಧುನಿಕ ಡಿಜಿಟಲ್ ಪರಿಕರಗಳು ಮತ್ತು ಸರ್ಚ್​ ಟೂಲ್​ಗಳ ಬಳಕೆಯಿಂದ ಇಂದೋರ್‌ನಲ್ಲಿ ಹೆಸರು ಮತ್ತು ಗುರುತು ಬದಲಿಸಿ ವಾಸಿಸುತ್ತಿರುವ ಆರೋಪಿಯನ್ನು ಗುರುತಿಸಲು ಕಾರಣವಾಯಿತು. ಶೇಕಡಾ 90 ಕ್ಕಿಂತ ಹೆಚ್ಚಿನ ಫೋಟೋ ಹೊಂದಾಣಿಕೆಯೊಂದಿಗೆ, ಇಮೇಜ್ ಸರ್ಚ್ ಪರಿಕರಗಳು ಅವರ ನಿಖರವಾದ ಗುರುತನ್ನು ನೀಡಿದವು ಎಂದು ಸಿಬಿಐ ತಿಳಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜನರನ್ನು ಮೂರ್ಖರನ್ನಾಗಿಸುವವನೇ ಶ್ರೇಷ್ಠ ನಾಯಕ: ಕೇಂದ್ರ ಸಚಿವ ನಿತಿನ್ ಗಡ್ಕರಿ

Rain Alert: ರಾಜ್ಯಾದ್ಯಂತ ಮುಂದಿನ 5 ದಿನ ಭಾರಿ ಮಳೆ, ಬೆಂಗಳೂರು, ಕರಾವಳಿ ಕರ್ನಾಟಕಕ್ಕೆ ಹವಾಮಾನ ಇಲಾಖೆ ಎಚ್ಚರಿಕೆ!

ಉಪ್ಪಾರ ಸಮುದಾಯ STಗೆ ಸೇರ್ಪಡೆ: ಶೀಘ್ರದಲ್ಲೇ ಕೇಂದ್ರಕ್ಕೆ ಶಿಫಾರಸು - ಸಿಎಂ ಸಿದ್ದರಾಮಯ್ಯ

ಕಾಂಗ್ರೆಸ್, ಚಾಮುಂಡಿ ಬೆಟ್ಟವನ್ನು 'ಟೂಲ್‌ಕಿಟ್' ಆಗಿ ಬಳಸುತ್ತಿದೆ: ಆರ್ ಅಶೋಕ್

ಉಡುಪಿ: ನಾಪತ್ತೆಯಾಗಿದ್ದ ಬೆಂಗಳೂರು ಮಹಿಳೆಯ ಶವ ಸೌಪರ್ಣಿಕಾ ನದಿಯಲ್ಲಿ ಪತ್ತೆ!

SCROLL FOR NEXT