ಬೆಂಗಳೂರು: ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿರುವ ಜನಪ್ರಿಯ ರಾಮೇಶ್ವರಂ ಕೆಫೆಯ ಔಟ್‌ಲೆಟ್‌ನಲ್ಲಿ ಗುರುವಾರ ಬೆಳಿಗ್ಗೆ ಗ್ರಾಹಕನೊಬ್ಬನಿಗೆ ನೀಡಿದ ಖಾದ್ಯದೊಳಗೆ ಹುಳು ಪತ್ತೆಯಾಗಿದೆ.
ಗ್ರಾಹಕನ ಪ್ರಕಾರ, ಉಪಾಹಾರಕ್ಕಾಗಿ ಆರ್ಡರ್ ಮಾಡಿದ ಪೊಂಗಲ್ ಒಳಗೆ ಹುಳು ಪತ್ತೆಯಾಗಿದೆ. ದೂರು ನೀಡಿದ ನಂತರ ಕೆಫೆ ಸಿಬ್ಬಂದಿ ಆರಂಭದಲ್ಲಿ ಘಟನೆಯನ್ನು ಮುಚ್ಚಿಹಾಕಲು ಪ್ರಯತ್ನಿಸಿದರು ಎಂದು ಆರೋಪಿಸಿದ್ದಾರೆ.
ಆಹಾರದೊಳಗಿನ ಹುಳು ಮತ್ತು ಸಿಬ್ಬಂದಿ ಸದಸ್ಯರ ಪ್ರತಿಕ್ರಿಯೆಯನ್ನು ವಿಡಿಯೋ ರೆಕಾರ್ಡ್ ಮಾಡಲು ಪ್ರಾರಂಭಿಸಿದ ನಂತರವೇ ಅವರು ಕ್ಷಮೆಯಾಚಿಸಲು ಪ್ರಾರಂಭಿಸಿದರು. ನಂತರ ಸಿಬ್ಬಂದಿ ಗ್ರಾಹಕರಿಗೆ 300 ರೂ.ಗಳ ಪೂರ್ಣ ಮರುಪಾವತಿಯನ್ನು ನೀಡಿದ್ದಾರೆ.
ಘಟನೆಯ ವಿಡಿಯೋದಲ್ಲಿ ಗ್ರಾಹಕರು ಪೊಂಗಲ್‌ನೊಳಗಿದ್ದ ಹುಳವನ್ನು ಚಮಚದಲ್ಲಿ ಎತ್ತಿ ತೋರಿಸಿದ್ದಾರೆ. ಇನ್‌ಸ್ಟಾಗ್ರಾಂ ಮೂಲಕ ಕೆಫೆ ಮಾಲೀಕರಿಗೆ ದೂರು ನೀಡುವ ಸಾಧ್ಯತೆಯ ಬಗ್ಗೆ ಇನ್ನೊಬ್ಬ ಗ್ರಾಹಕರೊಂದಿಗೆ ಚರ್ಚಿಸುವುದು ಸೆರೆಯಾಗಿದೆ.
ಸಿಬ್ಬಂದಿಯೊಬ್ಬರು ನೀವು ಅನುಚಿತ ರೀತಿಯಲ್ಲಿ ಮಾತನಾಡಿದ್ದೀರ ಎಂದು ಕೇಳುತ್ತಿರುವುದು ಕೇಳಿಬಂದಿದೆ. ಈ ಸಂಬಂಧ ಕೆಫೆಯಿಂದ ಯಾವುದೇ ಪ್ರತಿಕ್ರಿಯೆ ಲಭ್ಯವಾಗಿಲ್ಲ.
ರಾಮೇಶ್ವರಂ ಕೆಫೆ ಬೆಂಗಳೂರು ಮೂಲದ ಬ್ರ್ಯಾಂಡ್ ಆಗಿದ್ದು, ರೆಸ್ಟೋರೆಂಟ್‌ಗಳ ಸರಪಣಿಯನ್ನು ಹೊಂದಿದೆ. ಇದು ಸ್ಥಳೀಯರು ಮತ್ತು ಪ್ರವಾಸಿಗರಲ್ಲಿ ಜನಪ್ರಿಯವಾಗಿದೆ.
ಕಳೆದ ವರ್ಷ ಮೇ ತಿಂಗಳಲ್ಲಿ, ಹೈದರಾಬಾದ್‌ನಲ್ಲಿರುವ ಅದರ ಮಳಿಗೆಗಳಲ್ಲಿ ಹಲವಾರು ಅವಧಿ ಮೀರಿದ ಮತ್ತು ತಪ್ಪಾಗಿ ಲೇಬಲ್ ಮಾಡಲಾದ ಆಹಾರ ಪದಾರ್ಥಗಳು ಪತ್ತೆಯಾಗಿದ್ದವು. ತೆಲಂಗಾಣದ ಆಹಾರ ಸುರಕ್ಷತಾ ಇಲಾಖೆಯು ಅವುಗಳನ್ನು ವಶಪಡಿಸಿಕೊಂಡು ಪರಿಶೀಲನೆ ನಡೆಸಿತ್ತು. ಇದರಲ್ಲಿ ಮಾರ್ಚ್ 2024 ರಲ್ಲಿ ಅವಧಿ ಮುಗಿದ 100 ಕಿಲೋ ಉದ್ದಿನ ಬೇಳೆ, ಹಾಗೆಯೇ 10 ಕಿಲೋ ಅವಧಿ ಮುಗಿದ ಮೊಸರು ಮತ್ತು ಎಂಟು ಲೀಟರ್ ಅವಧಿ ಮುಗಿದ ಹಾಲು ಇತ್ತು.