ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭವಿಸಿದ ಕಾಲ್ತುಳಿತ ದುರಂತ ಪ್ರಕರಣ (ಸಂಗ್ರಹ ಚಿತ್ರ) 
ರಾಜ್ಯ

ಬೆಂಗಳೂರು ಕಾಲ್ತುಳಿತ: ಹೆಚ್ಚಿನ ಜನಸಂದಣಿ ಆಕರ್ಷಿಸುವ ಭವಿಷ್ಯದ ಕಾರ್ಯಕ್ರಮಗಳ ಸ್ಥಳಾಂತರಕ್ಕೆ ಡಿ'ಕುನ್ಹಾ ಆಯೋಗ ಶಿಫಾರಸು

ಯಾವುದೇ ಸಾರ್ವಜನಿಕ ಕಾರ್ಯಕ್ರಮಗಳ ಆಯೋಜನೆ ವೇಳೆ ಅಂತರರಾಷ್ಟ್ರೀಯ ಸುರಕ್ಷತಾ ಮಾನದಂಡಗಳನ್ನು ಅನುಸರಿಸುವುದು ಕಡ್ಡಾಯವಾಗಿದೆ. ಕಾರ್ಯಕ್ರಮದ ತುರ್ತು ಸ್ಥಳಾಂತರಿಸುವ ಯೋಜನೆಗಳು ಇರಬೇಕು.

ಬೆಂಗಳೂರು: ಜೂನ್ 4 ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ 11 ಜನರ ಸಾವಿಗೆ ಕಾರಣವಾದ ಕಾಲ್ತುಳಿತ ಘಟನೆ ಕುರಿತು ನ್ಯಾಯಮೂರ್ತಿ ಮೈಕೆಲ್ ಡಿ'ಕುನ್ಹಾ ಆಯೋಗದ ವರದಿಯನ್ನು ರಾಜ್ಯ ಸಚಿವ ಸಂಪುಟ ಗುರುವಾರ ಅಂಗೀಕರಿಸಿದೆ.

ನ್ಯಾಯಮೂರ್ತಿ ಮೈಕೆಲ್ ಡಿ'ಕುನ್ಹಾ ಆಯೋಗದ ವರದಿಯರು ಹೆಚ್ಚಿನ ಜನಸಂದಣಿಯನ್ನು ಆಕರ್ಷಿಸುವ ಭವಿಷ್ಯದ ಕಾರ್ಯಕ್ರಮಗಳನ್ನು ಸ್ಥಳಾಂತರಿಸುವಂತೆ ಶಿಫಾರಸು ಮಾಡಿದೆ.

ಯಾವುದೇ ಸಾರ್ವಜನಿಕ ಕಾರ್ಯಕ್ರಮಗಳ ಆಯೋಜನೆ ವೇಳೆ ಅಂತರರಾಷ್ಟ್ರೀಯ ಸುರಕ್ಷತಾ ಮಾನದಂಡಗಳನ್ನು ಅನುಸರಿಸುವುದು ಕಡ್ಡಾಯವಾಗಿದೆ. ಕಾರ್ಯಕ್ರಮದ ತುರ್ತು ಸ್ಥಳಾಂತರಿಸುವ ಯೋಜನೆಗಳು ಇರಬೇಕು. ಅಂತಹ ಮೂಲಸೌಕರ್ಯ ಒದಗಿಸುವವರೆ ಪ್ರಸ್ತುತ ದುರಂತ ಸಂಭವಿಸಿದ ಸ್ಥಳದಲ್ಲಿ ಹೆಚ್ಚಿನ ಜನಸಂದಣಿ ಸೇರುವ ಕಾರ್ಯಕ್ರಮಗಳನ್ನು ಆಯೋಜಿಸುವುದನ್ನು ಮುಂದುವರೆಸಿದರೆ ಸಾರ್ವಜನಿಕ ಸುರಕ್ಷತೆ, ನಗರ ಚಲನಶೀಲತೆ ಮತ್ತು ತುರ್ತು ಸಿದ್ಧತೆಗೆ ಅಪಾಯಗಳನ್ನು ಒಡ್ಡುತ್ತದೆ ಎಂದು ಹೇಳಿದೆ.

ಆಯೋಗದ ಪ್ರಮುಖ ಶಿಫಾರಸುಗಳು ಹಾಗೂ ಕಾಲ್ತುಳಿತಕ್ಕೆ ನೀಡಿರುವ ಕಾರಣಗಳು ಇಂತಿವೆ...

  • ಜನಸಂದಣಿಯ ಗಾತ್ರ ಮತ್ತು ಘಟನೆಯ ಅಪಾಯದ ಮಟ್ಟವನ್ನು ಆಧರಿಸಿ, ಭವಿಷ್ಯದ ಕಾರ್ಯಕ್ರಮಗಳು, ವಿಶೇಷವಾಗಿ ಸಾರ್ವಜನಿಕರಿಗೆ ಮುಕ್ತವಾಗಿರುವ ಕಾರ್ಯಕ್ರಮಗಳನ್ನು ಸ್ಥಳದಲ್ಲಿ ಕನಿಷ್ಠ ಸಂಖ್ಯೆಯ ಆಂಬ್ಯುಲೆನ್ಸ್‌ಗಳನ್ನು ನಿಯೋಜಿಸದೆ ನಡೆಸಬಾರದು.

  • ತರಬೇತಿ ಪಡೆದ ವೈದ್ಯಕೀಯ ಸಿಬ್ಬಂದಿಯನ್ನು ಹೊಂದಿರುವ, ಸುಸಜ್ಜಿತವಾದ, ಅಪಘಾತ ಪರಿಹಾರ/ಚಿಕಿತ್ಸಾ ವಿಭಾಗದ ಸ್ಥಳ (ಟ್ರಯೇಜ್ ಪಾಯಿಂಟ್)ವನ್ನು ಸ್ಥಾಪಿಸಬೇಕು.

  • ಸ್ಥಳೀಯ ಆರೋಗ್ಯ ಅಧಿಕಾರಿಗಳು ಮತ್ತು ಆಸ್ಪತ್ರೆಗಳೊಂದಿಗೆ ಸಮನ್ವಯದೊಂದಿಗೆ ಔಪಚಾರಿಕ ತುರ್ತು ವೈದ್ಯಕೀಯ ಪ್ರತಿಕ್ರಿಯೆ ಯೋಜನೆಯನ್ನು ರಚಿಸಿ ಪೂರ್ವಾಭ್ಯಾಸ ಮಾಡುವ ಅವಶ್ಯಕತೆಯಿದೆ.

  • ವ್ಯವಸ್ಥಿತ ಮಿತಿಗಳನ್ನು ಗಮನದಲ್ಲಿಟ್ಟುಕೊಂಡು, ಹೆಚ್ಚಿನ ಜನಸಂದಣಿಯನ್ನು ಆಕರ್ಷಿಸುವ ನಿರೀಕ್ಷೆಯಿರುವ ಕಾರ್ಯಕ್ರಮಗಳಿಗೆ ಕ್ರೀಡಾಂಗಣದ ಅಧಿಕಾರಿಗಳು ಸೂಕ್ತವಾದ ಸ್ಥಳಗಳನ್ನು ಪರಿಗಣಿಸಬೇಕು. ಅಂತರರಾಷ್ಟ್ರೀಯ ಮಾನದಂಡಗಳನ್ನು ಪಾಲಿಸಬೇಕು. ಜನರ ಸಾಮೂಹಿಕ ಪ್ರವೇಶ ಮತ್ತು ನಿರ್ಗಮನಕ್ಕೆ ಸಾಕಷ್ಟು ಪ್ರವೇಶ ಮತ್ತು ನಿರ್ಗಮನ ದ್ವಾರಗಳು ಇರಬೇಕು. ಪಾಲ್ಗೊಳ್ಳುವವರ ಜನರಪ ಪ್ರಮಾಣವನ್ನು ನಿರ್ವಹಿಸಲು ಸಾಕಷ್ಟು ಪಾರ್ಕಿಂಗ್ ಮತ್ತು ಮೂಲಸೌಕರ್ಯಗಳು ಇರಬೇಕು.

  • ಪೊಲೀಸರ ಆಯುಕ್ತರ ನಿರ್ದೇಶನದ ಮೇರೆಗೆ ಪೊಲೀಸರು ಬಿಗಿ ಬಂದೋಬಸ್ತ್ ನಿಯೋಜಿಸುತ್ತಿದ್ದರು. ಆದರೆ, ಅಷ್ಟರಲ್ಲಾಗಲೇ ಆಯೋಜಕರು ಆತುರ ಮಾಡಿದ್ದಾರೆ.

  • ಇದಲ್ಲದೆ, ಆರ್‌ಸಿಬಿ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಪೋಸ್ಟ್‌ ನಿಂದಾಗಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸ್ಥಳ ಸೇರಿದ್ದರು. ಕ್ರೀಡಾಂಗಣದಲ್ಲಿ ಜನಸಂದಣಿ ಹೆಚ್ಚಾದ ನಂತರವೂ ಕ್ರೀಡಾಂಗಣಕ್ಕೆ ಪ್ರವೇಶವನ್ನು ನಿರ್ದಿಷ್ಟಪಡಿಸಿರಲಿಲ್ಲ.

  • ನಿಯಂತ್ರಣ ಕೊಠಡಿಯಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿ ಪ್ರವೇಶ ದ್ವಾರಗಳಲ್ಲಿ ಮತ್ತು ಸುತ್ತಮುತ್ತ ನಿಯೋಜಿಸಲಾದ ಭದ್ರತಾ ಸಿಬ್ಬಂದಿಗೆ ಎಚ್ಚರಿಕೆ ನೀಡಲು ವಿಫಲರಾಗಿದಿದ್ದಾರೆ.

  • ಜನದಟ್ಟಣೆ ಮತ್ತು ಅಪಾಯದ ಸ್ಪಷ್ಟ ಚಿಹ್ನೆಗಳು ಕಂಡು ಬಂದಿದ್ದರೂ ನಿರ್ಗಮನ ದ್ವಾರಗಳನ್ನು ಸಮಯಕ್ಕೆ ತೆರೆಯಲಾಗಿಲ್ಲ; ಇದು ಭದ್ರತಾ ಅಧಿಕಾರಿಗಳ ಕಡೆಯಿಂದ ಆದ ಗಂಭೀರ ನಿರ್ಲಕ್ಷ್ಯದ ಕೃತ್ಯವಾಗಿದೆ.

  • ಅವೈಜ್ಞಾನಿಕವಾಗಿ ಬ್ಯಾರಿಕೇಡ್‌ಗಳನ್ನು ಅಳವಡಿಸಿರುವುದು, ಕಿರಿದಾದ ಪ್ರವೇಶ ದ್ವಾರಗಳು ಕಾಲ್ತುಳಿತಕ್ಕೆ ಕಾರಣವಾಗಿದೆ.

  • ದಾರಿತಪ್ಪಿಸುವ ಮತ್ತು ಕೊನೆಯ ನಿಮಿಷದ ಪ್ರಕಟಣೆಗಳು ಅಭಿಮಾನಿಗಳಲ್ಲಿ ವ್ಯಾಪಕ ಗೊಂದಲವನ್ನು ಸೃಷ್ಟಿಸಿವೆ. ಪೊಲೀಸ್ ಸಿಬ್ಬಂದಿಗಳ ನಿಯೋಜನೆಯಲ್ಲಿ ಭದ್ರತಾ ಲೋಪಗಳು ಕಂಡು ಬಂದಿವೆ.

  • ಹಳೆ ವಿಮಾನ ನಿಲ್ದಾಣ ರಸ್ತೆಯಂತಹ ದೂರದ ಸ್ಥಳಗಳಲ್ಲಿ ಆ್ಯಂಬುಲೆನ್ಸ್ ಗಳನ್ನು ನಿಲ್ಲಿಸಲಾಗಿದೆ. ತುರ್ತು ಪರಿಸ್ಥಿತಿಗಾಗಿ ತಾತ್ಕಾಲಿಕ ವೈದ್ಯಕೀಯ ಕೇಂದ್ರವನ್ನೂ ಸ್ಥಾಪಿಸಿಲ್ಲ. ಇದರಿಂದ ನಿರ್ಣಾಯಕ ಸಮಯದಲ್ಲಿ ವೈದ್ಯಕೀಯ ಚಿಕಿತ್ಸೆ ದೊರಯದೆ ಹಲವು ಜೀವ ಕಳೆದುಕೊಂಡಿದ್ದಾರೆಂದು ವರದಿಯಲ್ಲಿ ತಿಳಿಸಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಮೋದಿ@75: ದೇಶಾದ್ಯಂತ ಬಿಜೆಪಿಯಿಂದ ಅ.2ರವರೆಗೆ 'ಸೇವಾ ಪಾಕ್ಷಿಕ' ಅಭಿಯಾನ, ರಾಷ್ಟ್ರಪತಿ ಸೇರಿ ರಾಜಕೀಯ ಗಣ್ಯರಿಂದ ಪ್ರಧಾನಿಗೆ ಶುಭಾಶಯ

PM Modi 75th birthday: ಶುಭಾಶಯ ತಿಳಿಸಿದ ಡೊನಾಲ್ಡ್ ಟ್ರಂಪ್: ಭಾರತ-ಯುಎಸ್ ಸಂಬಂಧ ವೃದ್ಧಿ ಬಗ್ಗೆ ಉಭಯ ನಾಯಕರು ಚರ್ಚೆ

ಡೆಹ್ರಾಡೂನ್ ನೆರೆಹೊರೆ ಪ್ರದೇಶಗಳಲ್ಲಿ ಭಾರೀ ಪ್ರವಾಹ, ಭೂಕುಸಿತ: 17 ಸಾವು, 20ಕ್ಕೂ ಹೆಚ್ಚು ಮಂದಿ ನಾಪತ್ತೆ

ಖರ್ಗೆಗೂ ಮೀಸಲಾತಿ, ಖರ್ಗೆ ಮಗನಿಗೂ ಮೀಸಲಾತಿ: ಸಿದ್ದರಾಮಯ್ಯ ಪರ ಬೀದಿಗೆ ಇಳಿದರೆ ಕಾಗಿನೆಲೆ ಶ್ರೀಗಳ ತಲೆದಂಡ; ವಿಶ್ವನಾಥ್

ಕೊಲೆ ಪ್ರಕರಣದಲ್ಲಿ ಜಾಮೀನು ಪಡೆಯಲು ಅಧಿಕಾರಿಯ ಮನೆಯಲ್ಲಿ ದರೋಡೆ: ಇಬ್ಬರು ರೌಡಿಶೀಟರ್‌ ಸೇರಿ ಮೂವರ ಬಂಧನ

SCROLL FOR NEXT