ಸಾಂದರ್ಭಿಕ ಚಿತ್ರ 
ರಾಜ್ಯ

ಗ್ರಾಮ ಪಂಚಾಯಿತಿ ಆದಾಯದಲ್ಲಿ ದಕ್ಷಿಣ ರಾಜ್ಯಗಳ ಪ್ರಾಬಲ್ಯ; ತಲಾದಾಯ ಸಂಗ್ರಹದಲ್ಲಿ ಗೋವಾ, ಕೇರಳ ಮುಂದು!

ಕರ್ನಾಟಕವು 3,137 ಕೋಟಿ ಸ್ವಂತ ಮೂಲ ಆದಾಯ ಸಂಗ್ರಹಿಸಿದೆ. ರಾಷ್ಟ್ರೀಯ ಸರಾಸರಿ ತಲಾದಾಯ 59 ರು. ಇದ್ದು, ಕರ್ನಾಟಕ ರಾಜ್ಯ 148 ರು. ತಲಾ ಆದಾಯ ಸಂಗ್ರಹಿಸಿದೆ.

ಮಂಗಳೂರು: ದಕ್ಷಿಣ ಭಾರತವು ಸ್ಥಳೀಯ ಆದಾಯ ಸಂಗ್ರಹಣೆಯಲ್ಲಿ ರಾಷ್ಟ್ರ ಮಟ್ಟದಲ್ಲಿ ಮುಂಚೂಣಿಯಲ್ಲಿದ್ದು ಪ್ರಬಲ ನಾಯಕನಾಗಿ ಹೊರಹೊಮ್ಮಿದೆ. ಕರ್ನಾಟಕ, ಕೇರಳ, ಆಂಧ್ರಪ್ರದೇಶ, ತೆಲಂಗಾಣ ಮತ್ತು ತಮಿಳುನಾಡು ಆದಾಯ ಸಂಗ್ರಹದಲ್ಲಿ ಮುಂಚೂಣಿಯಲ್ಲಿವೆ.

2017-18 ಮತ್ತು 2021-22 ರ ನಡುವೆ ದೇಶಾದ್ಯಂತ ಗ್ರಾಮ ಪಂಚಾಯಿತಿಗಳು ₹25,595 ಕೋಟಿ ರೂ ಸ್ವಂತ ಮೂಲ ಆದಾಯ (OSR) ಸಂಗ್ರಹಿಸಿದ್ದು, ಅದರಲ್ಲಿ ಶೇಕಡಾ 60 ಕ್ಕಿಂತ ಹೆಚ್ಚಿನ ಆದಾಯ ದಕ್ಷಿಣ ರಾಜ್ಯಗಳ ಕೊಡುಗೆಯಾಗಿದೆ.

ಕರ್ನಾಟಕವು 3,137 ಕೋಟಿ ರೂ ಸ್ವಂತ ಮೂಲ ಆದಾಯ ಸಂಗ್ರಹಿಸಿದೆ. ರಾಷ್ಟ್ರೀಯ ಸರಾಸರಿ ತಲಾದಾಯ 59 ರೂ ಇದ್ದು, ಕರ್ನಾಟಕ ರಾಜ್ಯ 148 ರೂ ತಲಾ ಆದಾಯ ಸಂಗ್ರಹಿಸಿದೆ. ಕೇರಳವು ₹286 ತಲಾ ಆದಾಯದೊಂದಿಗೆ ಪ್ರಮುಖ ರಾಜ್ಯವಾಗಿ ಮುಂಚೂಣಿಯಲ್ಲಿದೆ, ನಂತರ ಆಂಧ್ರಪ್ರದೇಶ (₹209), ತೆಲಂಗಾಣ (₹159), ಮತ್ತು ತಮಿಳುನಾಡು (₹109), ತಲಾ ಆದಾಯ ಸಂಗ್ರಹಿಸಿಸುತ್ತಿದ್ದು, ತಳಮಟ್ಟದ ಆರ್ಥಿಕ ಕಾರ್ಯಕ್ಷಮತೆಯಲ್ಲಿ ದಕ್ಷಿಣ ರಾಜ್ಯಗಳು ಪ್ರಾಬಲ್ಯ ಸಾಧಿಸಿವೆ.

ಇದಕ್ಕೆ ವ್ಯತಿರಿಕ್ತವಾಗಿ, ಒಡಿಶಾ ಕೇವಲ ₹42.09 ಕೋಟಿ ಸರಾಸರಿ ಸ್ವಂತ ಮೂಲ ಆದಾಯ ಮತ್ತು 11ರೂ ತಲಾ ಆದಾಯವನ್ನು ದಾಖಲಿಸಿದೆ, ದೊಡ್ಡ ಪ್ರಮಾಣದಲ್ಲಿ ಗ್ರಾಮೀಣ ಭಾಗದ ಜನಸಂಖ್ಯೆ ಹೊಂದಿದ್ದರೂ ಅತ್ಯಂತ ಕಡಿಮೆ ಪ್ರದರ್ಶನ ನೀಡುವ ರಾಜ್ಯಗಳಲ್ಲಿ ಒಡಿಶಾ ಒಂದಾಗಿದೆ.

ಪಂಚಾಯತ್ ರಾಜ್ ಸಚಿವಾಲಯವು ಜುಲೈ 29 ರಂದು ಲೋಕಸಭೆಯಲ್ಲಿ ಮಂಡಿಸಿದ ವರದಿಯ ಪ್ರಕಾರ, ಪಂಚಾಯತ್ ರಾಜ್ ಸಂಸ್ಥೆಗಳಿಂದ (PRI) ತಲಾ ಆದಾಯ ಸಂಗ್ರಹಣೆಯಲ್ಲಿ ಕರ್ನಾಟಕವು 30 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 7 ನೇ ಸ್ಥಾನದಲ್ಲಿದೆ.

ರಾಜ್ಯವು OSR ನಲ್ಲಿ ವರ್ಷದಿಂದ ವರ್ಷಕ್ಕೆ ಸ್ಥಿರವಾದ ಬೆಳವಣಿಗೆಯನ್ನು ತೋರಿಸುತ್ತಿದೆ, 2017-18ರಲ್ಲಿ ₹385.94 ಕೋಟಿ, 2018-19ರಲ್ಲಿ ₹552.86 ಕೋಟಿ, 2019-20ರಲ್ಲಿ ₹671.37 ಕೋಟಿ, 2020-21ರಲ್ಲಿ ₹715.41 ಕೋಟಿ ಹಾಗೂ 2021-22ರಲ್ಲಿ ₹812.21 ಕೋಟಿ ಆದಾಯ ಸಂಗ್ರಹಿಸಿದ್ದು , ತಳಮಟ್ಟದಲ್ಲಿ ಆರ್ಥಿಕ ಸ್ವಾವಲಂಬನೆಯತ್ತ ಗಮನಾರ್ಹವಾಗಿ ಅಭಿವೃದ್ಧಿ ಹೊಂದುತ್ತಿದೆ.

ರಾಷ್ಟ್ರೀಯ ಮಟ್ಟದಲ್ಲಿ, 30 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಾದ್ಯಂತ ಗ್ರಾಮ ಪಂಚಾಯತ್‌ಗಳು ಐದು ವರ್ಷಗಳಲ್ಲಿ OSR ನಲ್ಲಿ ₹25,595 ಕೋಟಿಗಳನ್ನು ಉತ್ಪಾದಿಸಿವೆ. ಅಂದರೆ ಸರಾಸರಿ ತಲಾ ವಾರ್ಷಿಕ 59 ರೂ ನಷ್ಟಿದೆ. ಗುಜರಾತ್ ₹4,118.99 ಕೋಟಿ ಸಂಗ್ರಹಿಸಿದ್ದು, ತಲಾ ಆದಾಯ ₹199 ಗಳಿಸಿ, ಅಗ್ರ ಐದು ರಾಜ್ಯಗಳಲ್ಲಿ ಸ್ಥಾನ ಪಡೆದಿದೆ. ಪಶ್ಚಿಮ ಬಂಗಾಳ ₹2,175.83 ಕೋಟಿ ಗಳಿಸಿದೆ, ಆದರೆ 57 ರೂ ಆಗಿದೆ.

ರಾಜ್ಯಗಳಲ್ಲಿ ತೀವ್ರ ಅಸಮಾನತೆಗಳಿವೆ. ಗೋವಾ ₹1,635 ತಲಾದಯದೊಂದಿಗೆ ಮುಂಚೂಣಿಯಲ್ಲಿದೆ, ನಂತರ ಪುದುಚೇರಿ (₹757), ಕೇರಳ (₹286), ಆಂಧ್ರಪ್ರದೇಶ (₹209), ಮತ್ತು ಗುಜರಾತ್ (₹199). ಇದಕ್ಕೆ ವ್ಯತಿರಿಕ್ತವಾಗಿ, ದೊಡ್ಡ ಮತ್ತು ಜನಸಂಖ್ಯೆ ಹೊಂದಿರುವ ರಾಜ್ಯಗಳಾದ ಉತ್ತರ ಪ್ರದೇಶ (₹13), ಮಧ್ಯಪ್ರದೇಶ (₹15), ಮತ್ತು ರಾಜಸ್ಥಾನ (₹9) ಕೊನೆಯ ಸ್ಥಾನದಲ್ಲಿವೆ. ನಾಗಾಲ್ಯಾಂಡ್ ಶೂನ್ಯ ತಲಾದಾಯ ವರದಿ ಮಾಡಿದೆ, ಮಿಜೋರಾಂ ಮತ್ತು ಹಿಮಾಚಲ ಪ್ರದೇಶ ಕೇವಲ ₹1 ದಾಖಲಿಸಿದೆ, ನಂತರ ಮಣಿಪುರ ಮತ್ತು ಜಾರ್ಖಂಡ್ ₹2 ರೂ ದಾಖಲಿಸಿವೆ.

2022 ರಲ್ಲಿ ಪಂಚಾಯತ್ ರಾಜ್ ಸಚಿವಾಲಯವು ರಚಿಸಿದ ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಸ್ವಂತ ಆದಾಯ ಮೂಲ ಕುರಿತ ತಜ್ಞರ ಸಮಿತಿಯು, ಸ್ಥಳೀಯ ಆದಾಯದ ಬೆಳವಣಿಗೆ ತಡೆಯಲು ಕಾರಣವಾಗಿರುವ ವ್ಯವಸ್ಥಿತ ಸವಾಲುಗಳನ್ನು ಎತ್ತಿ ತೋರಿಸಿದೆ. ಹಳೆಯ OSR ನಿಯಮಗಳು, ತೆರಿಗೆ ವಿಧಿಸುವ ಅಧಿಕಾರಗಳ ಅಸಮರ್ಪಕ ವಿಕೇಂದ್ರೀಕರಣ, ದುರ್ಬಲ ಸಂಗ್ರಹ ಮೂಲಸೌಕರ್ಯ, ರಾಜಕೀಯ ಹಿಂಜರಿಕೆ ಅವುಗಳಲ್ಲಿ ಪ್ರಮುಖ ಕಾರಣಗಳಾಗಿವೆ.

ಇವುಗಳನ್ನು ಸುಧಾರಿಸಲು, ಕೇಂದ್ರ ಸರ್ಕಾರವು ಬಹುಮುಖಿ ಕಾರ್ಯತಂತ್ರವನ್ನು ಜಾರಿಗೆ ತರುತ್ತಿದೆ. ಪರಿಷ್ಕೃತ ರಾಷ್ಟ್ರೀಯ ಗ್ರಾಮ ಸ್ವರಾಜ್ ಅಭಿಯಾನ (RGSA) ಪಂಚಾಯತ್‌ಗಳ ಹಣಕಾಸು ಮತ್ತು ಆಡಳಿತ ಸಾಮರ್ಥ್ಯವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ.

IIM-ಅಹಮದಾಬಾದ್ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಲಾದ ವಿಶೇಷ OSR ತರಬೇತಿ ಮಾದರಿಗಳನ್ನು ರಾಜ್ಯ ಮಟ್ಟದ ಮಾಸ್ಟರ್ ತರಬೇತುದಾರರ ಮೂಲಕ ಹೊರತರಲಾಗುತ್ತಿದೆ. ಸ್ಥಳೀಯ ಆದಾಯ ವ್ಯವಸ್ಥೆಗಳಲ್ಲಿ ಪಾರದರ್ಶಕತೆ ಮತ್ತು ದಕ್ಷತೆಯನ್ನು ಸುಧಾರಿಸಲು ಆತ್ಮ ನಿರ್ಭರ್ ಪಂಚಾಯತ್ ವಿಶೇಷ ಪ್ರಶಸ್ತಿಗಳು (ANPSA) ಮತ್ತು ಡಿಜಿಟಲ್ ಸಮರ್ಥ್ ಪಂಚಾಯತ್ ಪೋರ್ಟಲ್‌ನಂತಹ ಯೋಜನೆಗಳನ್ನು ಸಹ ಉತ್ತೇಜಿಸಲಾಗುತ್ತಿದೆ.

ರಾಜ್ಯಗಳು ತಮ್ಮ ಚೌಕಟ್ಟುಗಳನ್ನು ಸುಧಾರಿಸುವಲ್ಲಿ ಮಾರ್ಗದರ್ಶನ ನೀಡಲು ಒಂದು ಸಮಿತಿಯು ಪ್ರಸ್ತುತ ಮಾದರಿ OSR ನಿಯಮಗಳನ್ನು ರಚಿಸುತ್ತಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ರಾಜ್ಯದಲ್ಲಿ ಸಿಎಂ ಗದ್ದುಗೆ ಗುದ್ದಾಟ: ಎಲ್ಲ ಗೊಂದಲಗಳಿಗೆ ಹೈಕಮಾಂಡ್ ತೆರೆ ಎಳೆಯಬೇಕು- ಸಿಎಂ ಸಿದ್ದರಾಮಯ್ಯ

ಇದು ಕೇವಲ ಧ್ವಜವಲ್ಲ ಭಾರತೀಯ ನಾಗರಿಕತೆಯ ಪುನರ್‌ ಜಾಗೃತಿಯ ಧ್ವಜ, ಶತಮಾನಗಳಷ್ಟು ಹಳೆಯ ಗಾಯ ಈಗ ವಾಸಿಯಾಗುತ್ತಿದೆ: ಪ್ರಧಾನಿ ಮೋದಿ

ಕೆಲಸದ ಹೊರೆ ಖಂಡಿಸಿ ಪಶ್ಚಿಮ ಬಂಗಾಳ CEO ಕಚೇರಿ ಮುಂದೆ BLOಗಳಿಂದ ಅಹೋರಾತ್ರಿ ಧರಣಿ!

ಅಯೋಧ್ಯೆ ರಾಮ ಮಂದಿರ ನಿರ್ಮಾಣ ಪೂರ್ಣ: ರಾಮ-ಸೀತೆ ವಿವಾಹ ಪರ್ವದಂದೇ ದೇಗುಲದ ಶಿಖರದ ಮೇಲೆ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ಮೋದಿ

"Misfit For Army": ಗುರುದ್ವಾರ ಪ್ರವೇಶಿಸಲು ನಿರಾಕರಣೆ; ಕ್ರಿಶ್ಚಿಯನ್ ಸೇನಾ ಅಧಿಕಾರಿಗೆ ಸುಪ್ರೀಂ ಕೋರ್ಟ್ ತರಾಟೆ!

SCROLL FOR NEXT