ಸಾಂದರ್ಭಿಕ ಚಿತ್ರ 
ರಾಜ್ಯ

ಲಾಲ್ ಬಾಗ್​ನಲ್ಲಿ ಪರಿಸರ ಸ್ನೇಹಿ EV ಸೈಕಲ್ ಸೇವೆ; ಶೀಘ್ರದಲ್ಲೇ ಮಾರ್ಗದರ್ಶಿ ಪ್ರವಾಸ ಪ್ರಾರಂಭ

ಜೂನ್‌ನಲ್ಲಿ ವಿಶ್ವ ಪರಿಸರ ದಿನದಂದು ಆರಂಭದಲ್ಲಿ 10 ಎಲೆಕ್ಟ್ರಿಕ್ ಸೈಕಲ್‌ಗಳು ಮತ್ತು ಟ್ರೈಸಿಕಲ್‌ಗಳನ್ನು ಪರಿಚಯಿಸಿದ್ದ ತೋಟಗಾರಿಕೆ ಇಲಾಖೆ, ಪ್ರಾಯೋಗಿಕ ಅವಧಿಯನ್ನು ಜುಲೈ ವರೆಗೆ ವಿಸ್ತರಿಸಿತು

ಬೆಂಗಳೂರು: ಎರಡು ತಿಂಗಳ ಪ್ರಾಯೋಗಿಕ ಕಾರ್ಯಕ್ರಮದ ಯಶಸ್ಸಿನ ನಂತರ, ಲಾಲ್‌ಬಾಗ್ ಬೊಟಾನಿಕಲ್ ಗಾರ್ಡನ್ ಬುಧವಾರ ಸೈಕಲ್ ಮತ್ತು ಟ್ರೈಸಿಕಲ್ ಬಾಡಿಗೆ ಸೇವೆಯನ್ನು ಪ್ರಾರಂಭಿಸಿದೆ. ಇದರಿಂದ ಪ್ರವಾಸಿಗರು ತಮ್ಮದೇ ಆದ ವೇಗದಲ್ಲಿ ಸಂಪೂರ್ಣ ಉದ್ಯಾನವನವನ್ನು ನೋಡಲು ಸಾಧ್ಯವಾಗುತ್ತದೆ.

ಜೂನ್‌ನಲ್ಲಿ ವಿಶ್ವ ಪರಿಸರ ದಿನದಂದು ಆರಂಭದಲ್ಲಿ 10 ಎಲೆಕ್ಟ್ರಿಕ್ ಸೈಕಲ್‌ಗಳು ಮತ್ತು ಟ್ರೈಸಿಕಲ್‌ಗಳನ್ನು ಪರಿಚಯಿಸಿದ್ದ ತೋಟಗಾರಿಕೆ ಇಲಾಖೆ, ಪ್ರಾಯೋಗಿಕ ಅವಧಿಯನ್ನು ಜುಲೈ ವರೆಗೆ ವಿಸ್ತರಿಸಿತು. ಜೊತೆಗೆ ಸೈಕಲ್ ಗಳ ಸಂಖ್ಯೆಯನ್ನು 15 ಕ್ಕೆ ವಿಸ್ತರಿಸಿತು. ಇಲಾಖೆಯು ಈಗ 10 ಟ್ರೈಸಿಕಲ್‌ಗಳು ಮತ್ತು 20 ಬೈಸಿಕಲ್‌ಗಳು ಸೇರಿ ಒಟ್ಟು 30 ಎಲೆಕ್ಟ್ರಿಕ್ ವಾಹನಗಳನ್ನು ಹೊಂದಿದೆ.

ಪೂರ್ವ ದ್ವಾರ (ಡಬಲ್ ರಸ್ತೆ) ಮತ್ತು ಉತ್ತರ ದ್ವಾರ (ಮುಖ್ಯ ದ್ವಾರ) ಎರಡು ದ್ವಾರಗಳಲ್ಲಿ ಈ ಸೇವೆ ಲಭ್ಯವಿದೆ. 18 ವರ್ಷಕ್ಕಿಂತ ಮೇಲ್ಪಟ್ಟವರು 100 ರೂ. ಕೊಟ್ಟು ಸೈಕಲ್ ಬಾಡಿಗೆಗೆ ಪಡೆಯಬಹುದು, ಆದರೆ 12 ರಿಂದ 18 ವರ್ಷ ವಯಸ್ಸಿನವರಿಗೆ 50 ರೂ. ಶುಲ್ಕ ವಿಧಿಸಲಾಗುತ್ತದೆ. ಪ್ರತಿ ಸವಾರಿ 50 ನಿಮಿಷಗಳವರೆಗೆ ಇರುತ್ತದೆ, ಇದು 240 ಎಕರೆ ವಿಸ್ತೀರ್ಣದ ಲಾಲ್‌ಬಾಗ್ ಅನ್ನು ಸಂಪೂರ್ಣವಾಗಿ ನೋಡಬಹುದಾಗಿದೆ. .

ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಎಂ. ಜಗದೀಶ್ ಮಾತನಾಡಿ ಇವು ಸಾಂಪ್ರದಾಯಿಕ ಸೈಕಲ್‌ಗಳಲ್ಲ ಎಂದು ಹೇಳಿದರು. ಒಂದೇ ಚಾರ್ಜ್‌ನಲ್ಲಿ 40 ಕಿ.ಮೀ.ವರೆಗೆ ಕ್ರಮಿಸುವ ಸಾಮರ್ಥ್ಯವಿರುವ ವಿದ್ಯುತ್ ಸೈಕಲ್‌ಗಳನ್ನು ಒಳಗೊಂಡಿದೆ. ಸುಗಮ ಸವಾರಿಯನ್ನು ಖಚಿತಪಡಿಸಿಕೊಳ್ಳಲು, ಸಂಪೂರ್ಣವಾಗಿ ಚಾರ್ಜ್ ಮಾಡಿದ ಬ್ಯಾಕಪ್ ಬ್ಯಾಟರಿಗಳನ್ನು ಯಾವಾಗಲೂ ಸಿದ್ಧವಾಗಿಡಲಾಗುತ್ತದೆ. ಪ್ರತಿಯೊಂದು ಬೈಕ್‌ನಲ್ಲಿ ಬ್ಯಾಟರಿ ಸೂಚಕವನ್ನು ಅಳವಡಿಸಲಾಗಿದೆ ಮತ್ತು ಅಗತ್ಯವಿದ್ದರೆ ವಾಹನಗಳನ್ನು ಮುಂಚಿತವಾಗಿ ರೀಚಾರ್ಜ್ ಮಾಡಲಾಗುತ್ತದೆ ಎಂದು ಅವರು ಹೇಳಿದರು.

ಜರ್ಮನಿ ಮತ್ತು ಹಾಲೆಂಡ್‌ನಲ್ಲಿ ಜನಪ್ರಿಯವಾಗಿರುವ ಸಾರ್ವಜನಿಕ ಸೈಕ್ಲಿಂಗ್ ವ್ಯವಸ್ಥೆಗಳ ಮಾದರಿಯಲ್ಲಿ, ಲಾಲ್‌ಬಾಗ್‌ನ ಉಪಕ್ರಮವು ಪ್ರಾಯೋಗಿಕ ಅವಧಿಯಲ್ಲಿ ಅಗಾಧ ಪ್ರತಿಕ್ರಿಯೆಯನ್ನು ಪಡೆಯಿತು. ಭಾರತದಲ್ಲಿ ಸರ್ಕಾರ ನಡೆಸುವ ಉದ್ಯಾನವನದಲ್ಲಿ ಇದು ಮೊದಲನೆಯದಾಗಿದೆ. ಇದು ಉದ್ಯಾನದೊಳಗೆ ಚಲನಶೀಲತೆಯನ್ನು ಹೆಚ್ಚಿಸುತ್ತದೆ. ಸ್ಥಳೀಯರು ಮತ್ತು ಪ್ರವಾಸಿಗರು ಹೆಚ್ಚು ಭೇಟಿ ನೀಡಲು ಕಾರಣವಾಗುತ್ತದೆ ಎಂದು ಜಗದೀಶ್ ತಿಳಿಸಿದ್ದಾರೆ.

ಇತ್ತೀಚೆಗೆ ಕಬ್ಬನ್ ಪಾರ್ಕ್‌ನಲ್ಲಿ ಮಾರ್ಗದರ್ಶಿ ಪ್ರವಾಸವನ್ನು ಪ್ರಾರಂಭಿಸಿದ ಇಲಾಖೆಯು ಆಗಸ್ಟ್‌ನಲ್ಲಿ ಲಾಲ್‌ಬಾಗ್‌ನಲ್ಲಿ ಪ್ರಾರಂಭಿಸಲು ಯೋಜಿಸಿದೆ. 90 ನಿಮಿಷಗಳ 'ಲಾಲ್‌ಬಾಗ್ ವಾಕ್ಸ್' ಉದ್ಯಾನದ ಕಡಿಮೆ ಪ್ರಸಿದ್ಧ ವಿಭಾಗಗಳನ್ನು ಒಳಗೊಳ್ಳುತ್ತದೆ. ಉದ್ಯಾನದ ಅದರ ಪರಿಸರ ಶ್ರೀಮಂತಿಕೆಯನ್ನು ಎತ್ತಿ ತೋರಿಸುತ್ತದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ದೇಶವಿರೋಧಿ ಚಟುವಟಿಕೆ ಆರೋಪ: ಕಾಶ್ಮೀರ ಟೈಮ್ಸ್ ದಿನಪತ್ರಿಕೆ ಕಚೇರಿಯ SIA ದಾಳಿ; Ak-47 ಕಾರ್ಟ್ರಿಡ್ಜ್‌, ಗ್ರೆನೇಡ್ ಲಿವರ್‌ ವಶಕ್ಕೆ!

ರೋಚಕ ಘಟ್ಟ ತಲುಪಿದ 'ಸಿಎಂ ಬದಲಾವಣೆ' ಚರ್ಚೆ: ಡಿಕೆಶಿ ಪರ ಶಾಸಕರು ದಿಢೀರ್ ದೆಹಲಿ ಯಾತ್ರೆ; ಹೈಕಮಾಂಡ್ ಮುಂದೆ ಶಕ್ತಿ ಪ್ರದರ್ಶನಕ್ಕೆ ಸಜ್ಜು!

ಅಕ್ರಮ ವಲಸಿಗರಿಗೆ ಅಸ್ಸಾಂ ಸರ್ಕಾರದ 'ಶಾಕ್': 'ಅತ್ಯಪರೂಪದ ಕಾನೂನು' ಜಾರಿ, 24 ಗಂಟೆಯೊಳಗೆ ಗಡಿಪಾರು!

"ಕೆಲಸದ ಹೊರೆ ನಿರ್ವಹಣೆ ಅಗತ್ಯವಿದ್ದರೆ, IPL ಬಿಡಿ": ಶುಭ್‌ಮನ್ ಗಿಲ್‌ಗೆ ಖಡಕ್ ಸಂದೇಶ!

ಭಾರತದ ಬೆನ್ನಿಗೆ ಚೂರಿ?: ದೆಹಲಿ ಬಾಂಬ್ ಸ್ಫೋಟಕ್ಕೂ ಅಫ್ಘಾನಿಸ್ತಾನಕ್ಕೂ ನಂಟು ಬಹಿರಂಗ; ಕರ್ನಾಟಕಕ್ಕೂ ಉಗ್ರನ ಭೇಟಿ!

SCROLL FOR NEXT