ನಮ್ಮ ಮೆಟ್ರೋ (ಪ್ರಾತಿನಿಧಿಕ ಚಿತ್ರ) 
ರಾಜ್ಯ

"ಬೆಂಗಳೂರಿನ ಜೀವನಾಡಿ" ನಮ್ಮ ಮೆಟ್ರೋ ವಿಸ್ತರಣಾ ಯೋಜನೆ ಪ್ರಗತಿಯಲ್ಲಿದೆ: DCM ಡಿ.ಕೆ ಶಿವಕುಮಾರ್

ಮೆಟ್ರೋ ಜಾಲವನ್ನು ಬಲಪಡಿಸಲು, ಸಾರ್ವಜನಿಕ-ಖಾಸಗಿ ಸಹಭಾಗಿತ್ವ (ಪಿಪಿಪಿ) ಮಾದರಿಯಡಿಯಲ್ಲಿ ಮಾದವರ (ಬಿಐಇಸಿ) ಯಿಂದ ತುಮಕೂರನ್ನು ಸಂಪರ್ಕಿಸುವ 52.41 ಕಿಮೀ ಮಾರ್ಗಕ್ಕೆ ವಿವರವಾದ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಲು ಸೂಚಿಸಲಾಗಿದೆ.

ಬೆಂಗಳೂರು: ನಮ್ಮ ಮೆಟ್ರೋ "ಬೆಂಗಳೂರಿನ ಜೀವನಾಡಿ"ಯಾಗಿದ್ದು, ಕಳೆದ ಎರಡು ವರ್ಷಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದೆ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಶನಿವಾರ ಹೇಳಿದರು.

ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ನಮ್ಮ ಮೆಟ್ರೋ ಯೋಜನೆ ಗಮನಾರ್ಹ ಪ್ರಗತಿ ಸಾಧಿಸಿದೆ, ನಗರದ ಪ್ರಮುಖ ಸಾರಿಗೆ ವಿಧಾನವಾಗಲು ಸಿದ್ಧವಾಗಿದೆ ಎಂದು ಹೇಳಿದ್ದಾರೆ.

ಮೆಟ್ರೋ ಜಾಲವನ್ನು ಬಲಪಡಿಸಲು, ಸಾರ್ವಜನಿಕ-ಖಾಸಗಿ ಸಹಭಾಗಿತ್ವ (ಪಿಪಿಪಿ) ಮಾದರಿಯಡಿಯಲ್ಲಿ ಮಾದವರ (ಬಿಐಇಸಿ) ಯಿಂದ ತುಮಕೂರನ್ನು ಸಂಪರ್ಕಿಸುವ 52.41 ಕಿಮೀ ಮಾರ್ಗಕ್ಕೆ ವಿವರವಾದ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಲು ಸೂಚಿಸಲಾಗಿದೆ. ಇದರ ಜೊತೆಗೆ 50 ಕಿಮೀ ಮೆಟ್ರೋ ವಿಸ್ತರಣೆಯನ್ನು ಪ್ರಸ್ತಾಪಿಸಲಾಗಿದೆ. ಇದರಲ್ಲಿ ಮೂರು ಹೊಸ (ಚಲ್ಲಘಟ್ಟದಿಂದ ಬಿಡದಿ (15 ಕಿಮೀ), ರೇಷ್ಮೆ ಸಂಸ್ಥೆಯಿಂದ ಹಾರೋಹಳ್ಳಿ (24 ಕಿಮೀ), ಮತ್ತು ಬೊಮ್ಮಸಂದ್ರದಿಂದ ಅತ್ತಿಬೆಲೆ (11 ಕಿಮೀ)) ಮಾರ್ಗಗಳಿವೆ.

ಮತ್ತೊಂದು ಪ್ರಸ್ತಾವನೆಯಲ್ಲಿ ಕಳೇನ ಅಗ್ರಹಾರ (ಗೊಟ್ಟಿಗೆರೆ)-ಜಿಗಣಿ-ಆನೇಕಲ್-ಅತ್ತಿಬೆಲೆ-ಸರ್ಜಾಪುರ-ವರ್ತೂರು-ಕಾಡುಗೋಡಿ ಟ್ರೀಪಾರ್ಕ್'ನ 68 ಕಿ.ಮೀ ಒಳಗೊಂಡಿದೆ.

ನಮ್ಮ ಮೆಟ್ರೋದ ಹಂತ-3 ರ ಭಾಗವಾಗಿ, ಎರಡು ಪ್ರಮುಖ ಕಾರಿಡಾರ್‌ಗಳನ್ನು ರೂಪಿಸಲಾಗಿದೆ. ಕಾರಿಡಾರ್-1 ಜೆಪಿ ನಗರ 4 ನೇ ಹಂತದಿಂದ ಹೆಬ್ಬಾಳದವರೆಗೆ 29.20 ಕಿ.ಮೀ. ಉದ್ದದ ರಸ್ತೆಯಾಗಿದ್ದು, ಕಾರಿಡಾರ್-2 ಹೊಸಹಳ್ಳಿಯಿಂದ ಕಡಬಗೆರೆಗೆ 11.45 ಕಿ.ಮೀ. ಉದ್ದದ ರಸ್ತೆಯಾಗಿದೆ.

ಹೆಚ್ಚುವರಿ ಹಂತ-3 ಪ್ರಸ್ತಾವನೆಗಳಲ್ಲಿ ಸರ್ಜಾಪುರದಿಂದ ಇಬ್ಬಲೂರು (ಹೊರ ವರ್ತುಲ ರಸ್ತೆ ಜಂಕ್ಷನ್) ವರೆಗಿನ 14 ಕಿ.ಮೀ. ಮಾರ್ಗ ಮತ್ತು ಅಗರದಿಂದ ಕೋರಮಂಗಲ 3 ನೇ ಬ್ಲಾಕ್‌ಗೆ 2.45 ಕಿ.ಮೀ. ಸಂಪರ್ಕ ಸೇರಿವೆ, ಇದು ನಗರದ ಅತ್ಯಂತ ಜನನಿಬಿಡ ಐಟಿ ಕಾರಿಡಾರ್‌ಗಳಲ್ಲಿ ಒಂದಾಗಿದೆ ಎಂದು ಮಾಹಿತಿ ನೀಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇರಾನ್ ನಲ್ಲಿ 2 ವಾರ ಪೂರೈಸಿದ ಪ್ರತಿಭಟನೆ: ಸರ್ಕಾರಿ ಕಟ್ಟಡಗಳಿಗೆ ಬೆಂಕಿ, ಪ್ರತಿಭಟನಾಕಾರರಿಗೆ 'ಮರಣ ದಂಡನೆ' ಬೆದರಿಕೆ!

"Surely It's Time": ಕೊಹ್ಲಿ ನಿವೃತ್ತಿ ಬಗ್ಗೆ ದೊಡ್ಡ ಸಂದೇಶ ರವಾನಿಸಿದ ಉತ್ತಪ್ಪ!

'ಮನ್ರೇಗಾ ಬಚಾವೋ' ಸಂಗ್ರಾಮ: ಕಾಂಗ್ರೆಸ್ ಪಕ್ಷದಿಂದ ದೇಶಾದ್ಯಂತ 45 ದಿನಗಳ ಹೋರಾಟ ಆರಂಭ!

ಮಹಾರಾಷ್ಟ್ರದಲ್ಲಿ ಸಿಎಂ, ಡಿಸಿಎಂ ಮುಸುಕಿನ ಗುದ್ದಾಟ: ಅಜಿತ್ ಪವಾರ್ ವಿರುದ್ಧ ಫಡ್ನವೀಸ್ ಕಿಡಿ!

ಭಾಷಾ ಮಸೂದೆ ವಿರೋಧಿಸಿ ಸಿದ್ದರಾಮಯ್ಯ ಪತ್ರ: ಕೇರಳ ಸಿಎಂ ಸ್ಪಷ್ಟೀಕರಣ; ಪಿಣರಾಯಿ ವಿಜಯನ್ ಹೇಳಿದ್ದೇನು?

SCROLL FOR NEXT