ಸಂಗ್ರಹ ಚಿತ್ರ 
ರಾಜ್ಯ

ಸುರಂಗ ರಸ್ತೆ ಯೋಜನೆ: ತಂತ್ರಜ್ಞಾನ ಅರಿಯಲು ವಿಶಾಖಪಟ್ಟಣಂ ತೆರಳಿದ BBMP ಎಂಜಿನಿಯರ್‌ಗಳು; ಶೀಘ್ರದಲ್ಲೇ ಕಾಶ್ಮೀರಕ್ಕೂ ಭೇಟಿ

ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡುವ ಉದ್ದೇಶದಿಂದ ಉಪಮುಖ್ಯಮಂತ್ರಿ ಮತ್ತು ಬೆಂಗಳೂರು ಉಸ್ತುವಾರಿ ಸಚಿವ ಡಿ.ಕೆ. ಶಿವಕುಮಾರ್ ಈ ಯೋಜನೆಗೆ ಒತ್ತಾಯಿಸುತ್ತಿದ್ದಾರೆ.

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸಂಚಾರ ದಟ್ಠಣೆ ಕಡಿಮೆ ಮಾಡಲು 18 ಕಿಮೀ ಉದ್ದದ ಸುರಂಗ ರಸ್ತೆ ನಿರ್ಮಾಣ ಮಾಡಲು ಸರ್ಕಾರ ಮುಂದಾಗಿದ್ದು, ಇದರ ಬೆನ್ನಲ್ಲೇ ಯೋಜನೆಯನ್ನು ಕಾರ್ಯಗತಗೊಳಿಸಲು ಮುಂದಾಗಿರುವ ಬಿಬಿಎಂಪಿಯ ಎಂಜಿನಿಯರ್‌ಗಳ ವಿಭಾಗದ ತಂಡವು ಸುರಂಗ ರಸ್ತೆಯ ದೇಶದ ಇತರೆ ರಾಜ್ಯಗಳಿಗೆ ಭೇಟಿ ನೀಡಿ, ಅಲ್ಲಿ ಬಳಕೆ ಮಾಡಿರುವ ತಂತ್ರಜ್ಞಾನಗಳ ಕುರಿತು ಮಾಹಿತಿ ಪಡೆಯುತ್ತಿದೆ.

ಜೂನ್.5ರಂದು ನಡೆದ ಸಚಿವ ಸಂಪುಟವು ಬಿಲ್ಡ್-ಓನ್-ಆಪರೇಟ್-ಟ್ರಾನ್ಸ್‌ಫರ್ (BOOT) ಮಾದರಿಯಡಿಯಲ್ಲಿ ಉತ್ತರ-ದಕ್ಷಿಣ ಸುರಂಗ ರಸ್ತೆ ಕಾರಿಡಾರ್ ನಿರ್ಮಾಣಕ್ಕೆ ಅನುಮೋದನೆ ನೀಡಿದೆ.

ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡುವ ಉದ್ದೇಶದಿಂದಾಗಿ ಉಪಮುಖ್ಯಮಂತ್ರಿ ಮತ್ತು ಬೆಂಗಳೂರು ಉಸ್ತುವಾರಿ ಸಚಿವ ಡಿ.ಕೆ. ಶಿವಕುಮಾರ್ ಈ ಯೋಜನೆಗೆ ಒತ್ತಾಯಿಸುತ್ತಿದ್ದಾರೆ, ಮೊದಲ ಹಂತದಲ್ಲಿ 17,000 ಕೋಟಿ ರೂ. ವೆಚ್ಚದಲ್ಲಿ ಯೋಜನೆ ಕೈಗೆತ್ತಿಕೊಳ್ಳಲು ಸರ್ಕಾರ ಮುಂದಾಗಿದೆ ಎಂದು ತಿಳಿದುಬಂದಿದೆ.

ಸರ್ಕಾರದ ನಿರ್ಧಾರ ಹಿನ್ನೆಲೆಯಲ್ಲಿ ಯೋಜನೆಯನ್ನು ಕಾರ್ಯಗತಗೊಳಿಸಲು ಮುಂದಾಗಿರುವ ಬಿಬಿಎಂಪಿ ಎಂಜಿನಿಯರ್ ಗಳು, ಇತರ ರಾಜ್ಯಗಳಿಗೆ ಭೇಟಿ ನೀಡಿ, ಅಲ್ಲಿ ಬಳಕೆ ಮಾಡಿರುವ ತಂತ್ರಜ್ಞಾನಗಳನ್ನು ಅಧ್ಯಯನ ಮಾಡಲು ಮುಂದಾಗಿದ್ದಾರೆ.

ಇತ್ತೀಚೆಗಷ್ಟೇ ತಂಡವು ವಿಶಾಖಪಟ್ಟಣಕ್ಕೆ ಭೇಟಿ ನೀಡಿ, ಅಲ್ಲಿನ ಸುರಂಗ ಮಾರ್ಗ ಯೋಜನೆಗಳನ್ನು ಅಧ್ಯಯನ ನಡೆಸಿದೆ. ರಾಯಪುರ ತಲುಪುವ 464 ಕಿಮೀ ಸುರಂಗ ರಸ್ತೆಯನ್ನು ನಿರ್ಮಿಸಲು NHAI ಬಳಸುತ್ತಿರುವ ನ್ಯೂ ಆಸ್ಟ್ರೇಲಿಯನ್ ಸುರಂಗ ಮಾರ್ಗ ವಿಧಾನ (NATM) ಅನ್ನು ಅಧ್ಯಯನ ಮಾಡಲು ತಂಡ ವಿಶಾಖಪಟ್ಟಣಕ್ಕೆ ಭೇಟಿ ನೀಡಿತ್ತು ಎಂದು ತಿಳಿದುಬಂದಿದ್ದು, ಶೀಘ್ರದಲ್ಲೇ ತಂಡವು ಕಾಶ್ಮೀರಕ್ಕೂ ಭೇಟಿ ನೀಡಲಿದೆ ಎಂದು ತಿಳಿದುಬಂದಿದೆ.

ಆಸ್ಟ್ರೇಲಿಯನ್ ಸುರಂಗ ಮಾರ್ಗ ವಿಧಾನವನ್ನು ಅಧ್ಯಯನ ಮಾಡಲು ವಿಶಾಖಪಟ್ಟಣಕ್ಕೆ ಹೋಗಿದ್ದೆವು. ಇತರ ನಿಯಮಿತ ವಿಧಾನಗಳಿಗೆ ಹೋಲಿಸಿದರೆ ಅಗತ್ಯವಿರುವ ಭೂಮಿ ಮತ್ತು ಅದಕ್ಕೆ ತೆಗೆದುಕೊಳ್ಳುವ ಸಮಯ. ಮೆಟ್ರೋ ರೈಲು ಯೋಜನೆಗೆ ಸುರಂಗ ಕೊರೆಯುವ ಯಂತ್ರದ ವ್ಯಾಸ 5.6 ಮೀಟರ್ ಆಗಿರುವುದರಿಂದ ಬಿಎಂಆರ್'ಸಿಎಲ್ ಬಳಸುತ್ತಿರುವ ತಂತ್ರಜ್ಞಾನವನ್ನು ಈ ಯೋಜನೆಗೆ ಅಳವಡಿಸಿಕೊಳ್ಳಲು ಸಾಧ್ಯವಿಲ್ಲ, ಯೋಜನೆಗೆ ಕನಿಷ್ಠ 14.6 ಮೀಟರ್ ಅಗತ್ಯವಿದೆ ಎಂದು ಬಿಬಿಎಂಪಿ ಮುಖ್ಯ ಎಂಜಿನಿಯರ್ ಬಿಎಸ್ ಪ್ರಹ್ಲಾದ್ ಅವರ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಈ ಯೋಜನೆಯನ್ನು ಕಾರ್ಯಗತಗೊಳಿಸುವಾಗ ವಿಭಿನ್ನ ಮಾದರಿಗಳನ್ನು ಅರ್ಥಮಾಡಿಕೊಳ್ಳುವುದು ಅತ್ಯಗತ್ಯವಿದೆ. ನಗರದಲ್ಲಿ ಭೂಸ್ವಾಧೀನ ಮತ್ತು ವೆಚ್ಚವು ಕಳವಳಕಾರಿ ವಿಚಾರವಾಗಿದೆ. ಯಾವುದೇ ಒಂದು ತೀರ್ಮಾನಕ್ಕೆ ಬರುವ ಮೊದಲು ನಾವು ಪ್ರತಿಯೊಂದು ಸುರಂಗ ಮಾರ್ಗ ವಿಧಾನಗಳನ್ನು ಅರ್ಥಮಾಡಿಕೊಳ್ಳಬೇಕು. ಹೀಗಾಗಿ ಇಲ್ಲಿಯವರೆಗೆ ಯಾವುದನ್ನೂ ಅಂತಿಮಗೊಳಿಸಲಾಗಿಲ್ಲ ಎಂದು ತಿಳಿಸಿದರು.

ಈಗಾಗಲೇ ತಜ್ಞರು ಹಾಗೂ ನಾಗರೀಕರು ಯೋಜನೆ ಕೈಬಿಟ್ಟು, ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಬಲಪಡಿಸಬೇಕು ಎಂದು ಒತ್ತಾಯಿಸುತ್ತಿದ್ದು, ಇದರ ನಡುವಲ್ಲೇ ಅಧಿಕಾರಿಗಳು ಪೂರ್ವಸಿದ್ಧತಾ ಕಾರ್ಯಗಳನ್ನು ಆರಂಭಿಸಿದ್ದಾರೆ.

ಇತರ ನಗರಗಳಲ್ಲಿ ಮಾಡಲಾಗುತ್ತಿರುವ ಯೋಜನೆಗಳನ್ನು ಸಂಪೂರ್ಣ ವಿಶ್ಲೇಷಣೆ ಇಲ್ಲದೆ ನಗರದಲ್ಲಿ ಪುನರಾವರ್ತಿಸಲಾಗುವುದಿಲ್ಲ. ತಂತ್ರಜ್ಞಾನವನ್ನು ಅಧ್ಯಯನ ಮಾಡುವ ಬದಲು, ಎಂಜಿನಿಯರಿಂಗ್ ತಂಡವು ಇತರ ನಗರಗಳ ಕಾರ್ಯಸಾಧ್ಯತೆ ಮತ್ತು ಅವಶ್ಯಕತೆಗಳನ್ನು ನೋಡಬೇಕು ಮತ್ತು ಅವುಗಳನ್ನು ಬೆಂಗಳೂರಿಗೆ ಹೋಲಿಸಬೇಕು ಎಂದು ಬಿಬಿಎಂಪಿ ಮೂಲಗಳು ತಿಳಿಸಿವೆ.

ಐಐಎಸ್ಸಿಯ ತಜ್ಞ ಪ್ರೊ. ಆಶಿಶ್ ವರ್ಮಾ ಅವರು ಮಾತನಾಡಿ, ನಾವು ಸಿದ್ಧಪಡಿಸಿದ ಅಧ್ಯಯನಗಳು ಮತ್ತು ವಿವಿಧ ಮಾದರಿಗಳು ಸುರಂಗ ರಸ್ತೆಗೆ ಹೋಲಿಸಿದರೆ ಸಾರ್ವಜನಿಕ ಸಾರಿಗೆ ಉತ್ತಮವಾಗಿದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಐವರು ಸಾವು; ಕೊಚ್ಚಿ ಹೋದ ಸೇತುವೆ; Video

Indian Navy ಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ! Video

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

Indre Nemdiyag Irbek: ಯೂ ಟ್ಯೂಬ್ ನಲ್ಲಿ ಧೂಳೆಬ್ಬಿಸುತ್ತಿರುವಂತೆ ವಿವಾದಕ್ಕೆ ಗುರಿಯಾದ Devil ಸಾಂಗ್! ಟ್ಯೂನ್ ಕದ್ದ ಆರೋಪ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

SCROLL FOR NEXT