ಸಾಂದರ್ಭಿಕ ಚಿತ್ರ  
ರಾಜ್ಯ

ಸಾಂಪ್ರದಾಯಿಕ ಇಂಜಿನಿಯರಿಂಗ್ ಕೋರ್ಸ್ ಗಳಿಗೆ ಇಲ್ಲ ಬೇಡಿಕೆ: ವಿದ್ಯಾರ್ಥಿಗಳ ಒಲವು AI, ML ಕಡೆಗೆ

ಈ ವರ್ಷ, ಇಂಜಿನಿಯರಿಂಗ್ ನಲ್ಲಿ ಮೆಕ್ಯಾನಿಕಲ್ ಸಬ್ಜೆಕ್ಟ್ ಗೆ ಪ್ರವೇಶವು ನಿರ್ವಹಣಾ ಕೋಟಾದ ಅಡಿಯಲ್ಲಿ ಹೆಚ್ಚಾಗುವ ನಿರೀಕ್ಷೆಯಿತ್ತು.

ಬೆಂಗಳೂರು: ಸಾಂಪ್ರದಾಯಿಕ ಎಂಜಿನಿಯರಿಂಗ್ ಕೋರ್ಸ್ ಗಳಿಗೆ ಬೇಡಿಕೆ ಕುಸಿದಿದೆ, ಕರ್ನಾಟಕದ ಹಲವಾರು ಕಾಲೇಜುಗಳು ಸೀಟುಗಳ ಸಂಖ್ಯೆ ಕಡಿಮೆ ಮಾಡಲು, ಮೆಕ್ಯಾನಿಕಲ್ ಮತ್ತು ಸಿವಿಲ್ ಎಂಜಿನಿಯರಿಂಗ್ ಕೋರ್ಸ್‌ಗಳನ್ನು ಸಂಪೂರ್ಣವಾಗಿ ಮುಚ್ಚಲು ಉನ್ನತ ಶಿಕ್ಷಣ ಇಲಾಖೆಯನ್ನು ಮನವಿ ಮಾಡಿವೆ. ಇತ್ತೀಚೆಗೆ ಬೇಡಿಕೆಯಲ್ಲಿರುವ ಕೃತಕ ಬುದ್ಧಿಮತ್ತೆ (AI) ಮತ್ತು ಯಂತ್ರ ಕಲಿಕೆ (ML) ಕೋರ್ಸ್ ಗಳಿಗೆ ಪ್ರವೇಶ ಸಂಖ್ಯೆಯನ್ನು ಹೆಚ್ಚಿಸಲು ಒತ್ತಾಯಿಸುತ್ತಿವೆ ಎಂದು ಅಧಿಕಾರಿಗಳು TNIE ಗೆ ತಿಳಿಸಿದ್ದಾರೆ.

ಈ ವರ್ಷ, ಇಂಜಿನಿಯರಿಂಗ್ ನಲ್ಲಿ ಮೆಕ್ಯಾನಿಕಲ್ ಸಬ್ಜೆಕ್ಟ್ ಗೆ ಪ್ರವೇಶವು ನಿರ್ವಹಣಾ ಕೋಟಾದ ಅಡಿಯಲ್ಲಿ ಹೆಚ್ಚಾಗುವ ನಿರೀಕ್ಷೆಯಿತ್ತು, ಮುಖ್ಯವಾಗಿ ಉತ್ಪಾದನಾ ವಲಯದಲ್ಲಿ, ವಿಶೇಷವಾಗಿ ರಕ್ಷಣಾ ಕ್ಷೇತ್ರದಲ್ಲಿ ಹೆಚ್ಚುತ್ತಿರುವ ಅವಕಾಶಗಳಿಂದಾಗಿ. ಕಾಲೇಜುಗಳು ಸರ್ಕಾರಿ ಕೋಟಾ ಸೀಟುಗಳಿಗೂ ಇದೇ ರೀತಿಯ ಬೇಡಿಕೆಯನ್ನು ನಿರೀಕ್ಷಿಸಿದ್ದವು. ಆದರೆ ಅದು ಹುಸಿಯಾಗಿದೆ.

AI ಕೋರ್ಸ್ ಗಳಿಗೆ ಹೆಚ್ಚಿನ ಬೇಡಿಕೆ

ಕಳೆದ ವರ್ಷ AI ಕೋರ್ಸ್‌ಗಳಿಗೆ ವಿದ್ಯಾರ್ಥಿಗಳ ಬೇಡಿಕೆ ಹೆಚ್ಚಾಗಿದ್ದವು, ಅದು ಈ ವರ್ಷ ಇನ್ನಷ್ಟು ಹೆಚ್ಚಾಗಿದೆ ಎನ್ನುತ್ತಾರೆ ಅಧಿಕಾರಿಗಳು. AI-ಸಂಬಂಧಿತ ಕ್ಷೇತ್ರಗಳಲ್ಲಿ ಹೆಚ್ಚುತ್ತಿರುವ ಉದ್ಯೋಗಾವಕಾಶಗಳು, ಐಟಿ ಉದ್ಯಮದಿಂದ ಬಲವಾದ ಬೇಡಿಕೆ ಮತ್ತು ML ಮತ್ತು ಡೇಟಾ ಸೈನ್ಸ್‌ನಂತಹ ಉದಯೋನ್ಮುಖ ತಂತ್ರಜ್ಞಾನಗಳ ಭವಿಷ್ಯದ ಸಾಮರ್ಥ್ಯದ ಬಗ್ಗೆ ವಿದ್ಯಾರ್ಥಿಗಳಲ್ಲಿ ಹೆಚ್ಚುತ್ತಿರುವ ಜಾಗೃತಿ ಇದಕ್ಕೆ ಪ್ರಮುಖ ಕಾರಣವಾಗಿದೆ ಎನ್ನುತ್ತಾರೆ ಅಧಿಕಾರಿಗಳು

2025–26ನೇ ಶೈಕ್ಷಣಿಕ ವರ್ಷಕ್ಕೆ ಕರ್ನಾಟಕದ 217 ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಒಟ್ಟು 1,35,969 ಸೀಟುಗಳು ಲಭ್ಯವಿದ್ದು, ಇದರಲ್ಲಿ ಸರ್ಕಾರಿ ಕೋಟಾದಡಿಯಲ್ಲಿ 64,047 ಸೀಟುಗಳು ಸೇರಿವೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ 5,313 ಸೀಟುಗಳ ಕುಸಿತವಾಗಿದೆ. 2024-25ರಲ್ಲಿ 245 ಕಾಲೇಜುಗಳಲ್ಲಿ 1,41,009 ಸೀಟುಗಳಿದ್ದು, 66,663 ಸರ್ಕಾರಿ ಕೋಟಾದಡಿಯಲ್ಲಿವೆ.

ಸರ್ಕಾರದ ಅಂತಿಮ ಸೀಟ್ ಮ್ಯಾಟ್ರಿಕ್ಸ್ ಇನ್ನೂ ಬಿಡುಗಡೆಯಾಗಿಲ್ಲ. ಕೆಲವು ಕೋರ್ಸ್‌ಗಳನ್ನು ಕಡಿಮೆ ಮಾಡುವ ಅಥವಾ ಮುಚ್ಚುವ ನಿರ್ಧಾರವನ್ನು ಈಗಾಗಲೇ ಮಾಡಲಾಗಿದೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ. ಸೀಟುಗಳಲ್ಲಿನ ಯಾವುದೇ ಹೆಚ್ಚಳ - ವಿಶೇಷವಾಗಿ AI ಮತ್ತು ಸಂಬಂಧಿತ ಶಾಖೆಗಳಿಗೆ - ಎಲ್ಲಾ ಕಾಲೇಜುಗಳು ತಮ್ಮ ಡೇಟಾವನ್ನು ಸಲ್ಲಿಸಿದ ನಂತರವೇ ಗೊತ್ತಾಗುತ್ತದೆ.

ಕೆಲವು ಕಾಲೇಜುಗಳು ಇನ್ನೂ ಸೀಟ್ ಮ್ಯಾಟ್ರಿಕ್ಸ್ ನ್ನು ಅಪ್‌ಲೋಡ್ ಮಾಡಿಲ್ಲ, ಕೆಲವು ಇನ್ನೂ AICTE ಅನುಮೋದನೆಗಾಗಿ ಕಾಯುತ್ತಿವೆ. ಇದಾದ ನಂತರ ಒಟ್ಟು ಲಭ್ಯವಿರುವ ಸೀಟುಗಳ ಸಂಖ್ಯೆ ಹೆಚ್ಚಾಗಬಹುದು ಎಂದು ಅಧಿಕಾರಿಯೊಬ್ಬರು ಹೇಳಿದರು.

ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿಂಗ್ (CSE) ಸೀಟುಗಳ ಸಂಖ್ಯೆಯನ್ನು ಗೊತ್ತುಮಾಡಿಟ್ಟುಕೊಳ್ಳಲು ಸರ್ಕಾರ ಆರಂಭದಲ್ಲಿ ಪ್ರಸ್ತಾಪಿಸಿದ್ದರೂ, ಈ ವರ್ಷ ಇನ್ನೂ ಹೆಚ್ಚಿನ ಸಂಖ್ಯೆ ಲಭ್ಯವಿದೆ. ಸರ್ಕಾರಿ ಕೋಟಾದಡಿಯಲ್ಲಿ 15,754 ಸೀಟುಗಳು ಸೇರಿದಂತೆ ಒಟ್ಟು 33,813 ಸಿಎಸ್‌ಇ ಸೀಟುಗಳನ್ನು ನೀಡಲಾಗುತ್ತಿದೆ. ಕಳೆದ ವರ್ಷ, ಸಿಎಸ್‌ಇಯಲ್ಲಿ 35,013 ಸೀಟುಗಳಿದ್ದು, ಸರ್ಕಾರಿ ಕೋಟಾದಲ್ಲಿ 16,280 ಸೀಟುಗಳು ಲಭ್ಯವಿವೆ. ಇದಲ್ಲದೆ, ಈ ವರ್ಷ ಎಲೆಕ್ಟ್ರಾನಿಕ್ಸ್ ಮತ್ತು ಸಂವಹನ ಎಂಜಿನಿಯರಿಂಗ್‌ನಲ್ಲಿ 18,492 ಸೀಟುಗಳು, ಮಾಹಿತಿ ವಿಜ್ಞಾನ ಮತ್ತು ಎಂಜಿನಿಯರಿಂಗ್‌ನಲ್ಲಿ 8,538 ಸೀಟುಗಳು ಲಭ್ಯವಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

US tariff: ಚೀನಾ ಮೇಲೆ ಅಮೆರಿಕ ಶೇ.100 ರಷ್ಟು ಸುಂಕ; ಭಾರತಕ್ಕೆ ಎಚ್ಚರಿಕೆಯ ಗಂಟೆ!

Belagavi: ಲವರ್ ಜೊತೆ ಮಗಳು ಪರಾರಿ, ಇಡೀ ಊರಿಗೆ 'ತಿಥಿ' ಊಟ ಹಾಕಿಸಿದ ತಂದೆ!

ದ್ವಿಶತಕ ಮಿಸ್: ಗಿಲ್ ತಪ್ಪಿನಿಂದ ರನ್ ಔಟ್ ಆಗಿ ತಲೆ ಚಚ್ಚಿಕೊಂಡ ಜೈಸ್ವಾಲ್; ಮೈದಾನ ತೊರೆಯುವಂತೆ ಅಂಪೈರ್ ತಾಕೀತು, Video!

ಅಧಿಕೃತವಾಗಿ 'ಹೊಸ ಗರ್ಲ್‌ ಫ್ರೆಂಡ್‌' ಪರಿಚಯಿಸಿದ ಹಾರ್ದಿಕ್ ಪಾಂಡ್ಯ! Video

2nd Test, Day 2: ವಿಂಡೀಸ್ ವಿರುದ್ಧ ಶತಕ, ವಿರಾಟ್ ಕೊಹ್ಲಿ ದಾಖಲೆ ಸರಿಗಟ್ಟಿದ ಶುಭ್ ಮನ್ ಗಿಲ್!

SCROLL FOR NEXT