Mysuru Dasara Jumbo savari File image
ರಾಜ್ಯ

400 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಮೈಸೂರು ದಸರಾ 11 ದಿನ ಆಚರಣೆ: ಗ್ರಹಗತಿಗಳ ವಿಶೇಷತೆ ಏನು?

ತಿಥಿಗಳ ಪ್ರಕಾರ ಸೆಪ್ಟೆಂಬರ್‌ 22 ರಿಂದ ಅಕ್ಟೋಬರ್ 2ರ ವರೆಗೆ ಅಂದ್ರೆ 11 ದಿನ ದಸರಾ ಉತ್ಸವ ನಡೆಯಲಿದೆ.

ಮೈಸೂರು: ದಸರಾ ಇತಿಹಾಸದಲ್ಲೇ ಬಹುತೇಕ ಇದೇ ಮೊದಲ ಬಾರಿಗೆ 11 ದಿನದ ದಸರಾ ಬಂದಿದೆ. ಪ್ರತಿ ವರ್ಷ 10 ದಿನಗಳ ಕಾಲ ನಡೆಯುವ ವಿಶ್ವವಿಖ್ಯಾತ ಮೈಸೂರು ದಸರಾ ಈ ಬಾರಿ 11 ದಿನಗಳ ಕಾಲ ನಡೆಯಲಿದೆ.

ಪ್ರತಿ ವರ್ಷ 9 ದಿನ ನವರಾತ್ರಿ 10ನೇ ದಿನ ವಿಜಯದಶಮಿ ಆಚರಣೆ ಮಾಡುವುದು ವಾಡಿಕೆ. ಆದರೆ ಮಧ್ಯೆದಲ್ಲಿ ಪಂಚಮಿ ತಿಥಿ ಎರಡು ದಿನ ಬಂದಿದ್ದರಿಂದ ಈ ಬಾರಿ 11ನೇ ದಿನಕ್ಕೆ ವಿಜಯದಶಮಿ ಆಚರಣೆ ಮಾಡಲಾಗುತ್ತದೆ. ತಿಥಿಗಳ ಪ್ರಕಾರ ಸೆಪ್ಟೆಂಬರ್‌ 22 ರಿಂದ ಅಕ್ಟೋಬರ್ 2ರ ವರೆಗೆ ಅಂದ್ರೆ 11 ದಿನ ದಸರಾ ಉತ್ಸವ ನಡೆಯಲಿದೆ. ಸೆ.24 ರಂದು ಬರುವ ಪಂಚಮಿ ತಿಥಿ 25ಕ್ಕೂ ಮುಂದುವರಿಯುವ ಕಾರಣ ದಸರಾ 11 ದಿನ ಆಗಲಿದೆ.

ದಸರಾ ಪರಂಪರೆ ಶುರುವಾಗಿ 410 ವರ್ಷ ಕಳೆದಿದೆ. 410 ವರ್ಷಗಳಿಂದಲೂ 10 ದಿನ ದಸರಾ ನಡೆದಿದೆ. ಆದರೆ ಈ ಬಾರಿ 11 ದಿನ ದಸರಾ ನಡೆಯುವ ಮೂಲಕ ಹೊಸ ದಾಖಲೆ ಸೃಷ್ಟಿ ಆಗಲಿದೆ. ಈ ಹಿನ್ನೆಲೆಯಲ್ಲಿ ಈ ಬಾರಿಯ ದಸರಾ ದಿನಗಳ ಬಗ್ಗೆ ಧಾರ್ಮಿಕವಾಗಿ ಚರ್ಚೆಗಳು ಶುರುವಾಗಿವೆ. 1410 ರಿಂದ ಮೈಸೂರು ಸಂಸ್ಥಾನದ ಆಳ್ವಿಕೆಯಲ್ಲಿ ದಸರಾ ಆಚರಣೆ ನಡೆದಿದ್ದು 11 ದಿನ ದಸರಾ ನಡೆದ ಉದಾಹರಣೆಗಳಿಲ್ಲ. ಮಹಾಲಯ ಅಮಾವಾಸ್ಯೆಯ ಮರು ದಿನದಿಂದ ನವರಾತ್ರಿ ಶುರುವಾಗಿ 9 ದಿನಗಳ ಮರುದಿನ ವಿಜಯದಶಮಿ‌ ಆಚರಿಸುವುದು ಸಂಪ್ರದಾಯ. ವಿಜಯದಶಮಿಯಂದು ಜಂಬೂ ಸವಾರಿ ಮೆರವಣಿಗೆ ನಡೆಯಲಿದೆ.

ಈ ಸಂಬಂಧ ಧಾರ್ಮಿಕ ಚಿಂತಕ ಡಾ. ಶೆಲ್ವಪಿಳೈ ಅಯ್ಯಂಗಾರ್ ಖಾಸಗಿ ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ. ನೂರು ವರ್ಷಗಳ ಹಿಂದೆ ದಸರಾ 11 ದಿನ ನಡೆದಿರಬಹುದು. ಆದ್ರೆ ನನ್ನ ಅನುಭವದಲ್ಲಿ ಇದೇ ಮೊದಲು 11 ದಿನ ನಡೆಯುತ್ತಿದೆ. ಪಂಚಾಂಗದಲ್ಲಿ ಸೆ.21ರಂದು ಮಹಾಲಯ ಅಮಾವಾಸ್ಯೆ ಬರುತ್ತೆ. ಅದರ ಮಾರನೇ ದಿನದಿಂದ ಅಂದ್ರೆ ಸೆ.22ರಿಂದ ಅ.2ರ ವರೆಗೆ ಶರನ್ನವರಾತ್ರಿ ಮತ್ತು ವಿಜಯದಶಮಿ ನಡೆಯುತ್ತದೆ ಎಂದು ವಿವರಿಸಿದ್ದಾರೆ.

ಏಕೆಂದ್ರೆ ಪಂಚಾಂಗದಲ್ಲಿ ಪ್ರಥಮೆ, ದ್ವಿತೀಯ, ತೃತೀಯ, ಚತುರ್ಥಿ ಸರಿಯಿದೆ. ಆದ್ರೆ ಪಂಚಮಿ ಸೆ.26, 27ರಂದು ಎರಡೂ ದಿನ ಬಂದಿದೆ. ಆ 2 ದಿನ ಗಣನೆಗೆ ತೆಗೆದುಕೊಂಡ್ರೆ 10ನೇ ದಿನ ಮಹಾನವಮಿ (ನವಮಿ) ಬರುತ್ತದೆ. 11ನೇ ದಿನ ದಶಮಿ ಬರುತ್ತದೆ. ಇದು ಸಾಮಾನ್ಯ ದಿನಗಳಲ್ಲಿ ಬಂದಿರುವುದು ಉಂಟು, ಆದ್ರೆ ನೂರಾರು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ದಸರಾ ಮಹೋತ್ಸವದಲ್ಲಿ ಈ ತಿಥಿ ಬಂದಿರುವುದು ವಿಶೇಷ ಎನ್ನುತ್ತಾರೆ ಶೆಲ್ವಪಿಳೈ ಅಯ್ಯಂಗಾರ್.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಾಂವಿಧಾನಿಕ ಕರ್ತವ್ಯಗಳು ಪ್ರಜಾಪ್ರಭುತ್ವದ ಅಡಿಪಾಯ: ದೇಶದ ನಾಗರಿಕರಿಗೆ ಪ್ರಧಾನಿ ಮೋದಿ ಪತ್ರ

ಅರುಣಾಚಲ ಪ್ರದೇಶ ಭಾರತದ "ಅವಿಭಾಜ್ಯ-ಅಳಿಸಲಾಗದ" ಭಾಗ: ಚೀನಾಗೆ ಭಾರತ ತಿರುಗೇಟು

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್​ ನ್ಯೂಸ್​: ಹಳದಿ ಮಾರ್ಗದ ಸಂಚಾರ ಸೋಮವಾರ ಬೆಳಗ್ಗೆ 5 ಗಂಟೆಯಿಂದಲೇ ಶುರು..!

ಅಯೋಧ್ಯೆ ಧರ್ಮಧ್ವಜದಲ್ಲಿರುವ ಕೋವಿದಾರ ಮರ: ರಾಜವೃಕ್ಷಕ್ಕೂ, ಶ್ರೀರಾಮಚಂದ್ರನಿಗೂ ಅದೆಂಥ ನಂಟು? ತ್ರೇತಾಯುಗದಲ್ಲಿದ್ದ ದೈವಿಕ ಮರದ ವಿಶೇಷತೆ ಏನು?

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

SCROLL FOR NEXT