ಇಂಡಿಗೊ ವಿಮಾನ 
ರಾಜ್ಯ

'Mayday' ಸಂದೇಶ ಕಳುಹಿಸಿ, ಇಂಡಿಗೊ ವಿಮಾನ ಬೆಂಗಳೂರಿನಲ್ಲಿ ವಿಮಾನ ತುರ್ತು ಭೂ ಸ್ಪರ್ಶ!

ಜೂನ್ 19 ರಂದು ಈ ಘಟನೆ ನಡೆದಿದೆ. 168 ಪ್ರಯಾಣಿಕರು ತೆರಳುತ್ತಿದ್ದ ವಿಮಾನದಲ್ಲಿ ಇಂಧನದ ಕೊರತೆ ಉಲ್ಲೇಖಿಸಿ ಫೈಲಟ್ ಕಂಟ್ರೋಲ್ ರೂಂಗೆ ಮೇಡೆ ಸಂದೇಶ ಕಳುಹಿಸಿದ್ದಾರೆ.

ಬೆಂಗಳೂರು: ಚೆನ್ನೈ ಮತ್ತು ಗುವಾಹಟಿ ನಡುವಿನ ಇಂಡಿಗೊ ವಿಮಾನ ಪೈಲಟ್ 'ಮೇಡೆ' ಕರೆ ಕಳುಹಿಸಿದ ನಂತರ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂ ಸ್ಪರ್ಶ ಮಾಡಿರುವ ಘಟನೆ ನಡೆದಿದೆ.

ಜೂನ್ 19 ರಂದು ಈ ಘಟನೆ ನಡೆದಿದೆ. 168 ಪ್ರಯಾಣಿಕರು ತೆರಳುತ್ತಿದ್ದ ವಿಮಾನದಲ್ಲಿ ಇಂಧನದ ಕೊರತೆ ಉಲ್ಲೇಖಿಸಿ ಫೈಲಟ್ ಕಂಟ್ರೋಲ್ ರೂಂಗೆ ಮೇಡೆ ಸಂದೇಶ ಕಳುಹಿಸಿದ್ದಾರೆ.

ಅಹಮದಾಬಾದ್ ನಲ್ಲಿ ಇತ್ತೀಚಿಗೆ ಸಂಭವಿಸಿದ ಏರ್ ಇಂಡಿಯಾ ವಿಮಾನ ದುರಂತಕ್ಕೂ ಮುನ್ನಾ ಬೋಯಿಂಗ್ 787-8 ಡ್ರೀಮ್ ಲೈನರ್ ಪೈಲಟ್ 'ಮೇಡೆ' ಸಂದೇಶ ಕಳುಹಿಸಿದ್ದರು. ಆದರೆ, ಅದಾದ ಕೆಲವೇ ಸೆಕೆಂಡುಗಳಲ್ಲಿ ವಿಮಾನ ಸುಟ್ಟು ಭಸ್ಮವಾಗಿತ್ತು.

ಗುರುವಾರ ಸಂಜೆ 4-40ಕ್ಕೆ ಗುವಾಹಟಿಯಿಂದ ಟೇಕಾಪ್ ಆದ ಇಂಡಿಗೊ ವಿಮಾನದ (6ಇ-6764) ಪೈಲಟ್, ರಾತ್ರಿ 7-45ರ ಸುಮಾರಿನಲ್ಲಿ ಚೆನ್ನೈನಲ್ಲಿ ಲ್ಯಾಂಡಿಂಗ್ ಮಾಡಲು ಪ್ರಯತ್ನಿಸಿದ್ದಾರೆ. ಆದರೆ, ಮಧ್ಯದಲ್ಲಿ ಇಂಧನದ ಕೊರತೆಯಿಂದ ಪೈಲಟ್ ಮೇಡೆ ಸಂದೇಶ ಕಳುಹಿಸಿದ್ದು, ಬೆಂಗಳೂರು ವಿಮಾನ ನಿಲ್ದಾಣದಲ್ಲಿ ತುರ್ತು ಭೂ ಸ್ಪರ್ಶ ಮಾಡಿರುವುದಾಗಿ ತಿಳಿದುಬಂದಿದೆ.

ಈ ವಿಮಾನದಲ್ಲಿ 168 ಪ್ರಯಾಣಿಕರು, ಇಬ್ಬರು ಪೈಲಟ್ , ಐವರು ಗಗನ ಸಖಿಯರು ಸೇರಿದಂತೆ 175 ಜನರಿದ್ದರು ಎನ್ನಲಾಗಿದೆ.

'ಮೇಡೆ' ಕರೆಯನ್ನು ಸ್ವೀಕರಿಸಿದ ನಂತರ ವಿಮಾನ ನಿಲ್ದಾಣದ ಸಿಬ್ಬಂದಿಗೆ ATC ಸೂಚನೆ ನೀಡಿತ್ತು. ವೈದ್ಯಕೀಯ ಮತ್ತು ಅಗ್ನಿಶಾಮಕ ಸೇವೆಗಳ ಸಿಬ್ಬಂದಿ ಸ್ಥಳದಲ್ಲಿ ನಿಯೋಜಿಸಲಾಗಿತ್ತು. ವಿಮಾನವು ರಾತ್ರಿ 8.20 ಕ್ಕೆ ಲ್ಯಾಂಡ್ ಆಯಿತು ಎಂದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನದ ಮೂಲಗಳು ತಿಳಿಸಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!

Video: ಕುದಿಯುತ್ತಿದ್ದ ಬೆಲ್ಲದ ಪಾಕಕ್ಕೆ ಬಿದ್ದ ಯುವಕ; ಅಣ್ಣನ ಸಾಲ ತೀರಿಸಲು ಕೆಲಸಕ್ಕೆ ಹೋಗಿದ್ದವನ ದಾರುಣ ಅಂತ್ಯ

'ಕಿವಿಲಿ ಹೊಗೆ ಬರುವಂತಿದೆ': ಲಂಕಾ-ಭಾರತ ಟೆಸ್ಟ್ ಪಂದ್ಯದಲ್ಲಿ ಮತ್ತೊಂದು ವಿವಾದ, ಗ್ಲೌಸ್ ಕಿತ್ತೆಸೆದ ಬ್ಯಾಟರ್, ಆಗಿದ್ದೇನು?

ಬಿಜೆಪಿ MLC ಎನ್. ರವಿಕುಮಾರ್‌ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್